ಹಲ್ಲೆಗೊಳಗಾಗಿದ್ದ ಕಿರಿಮಂಜೇಶ್ವರ ದೇವಾಡಿಗ ಕುಟಂಬಕ್ಕೆ ಸಮಾಜ ಬಾಂಧವರಿಂದ ಸಾಂತ್ವನ-ಸಹಾಯ

ಕಿರಮಂಜೇಶ್ವರ:  ಜಾಗದ ತಕರಾರಿಗೆ ಸಂಬಂಧಿಸಿದಂತೆ ಮನೆಗೆ ನುಗ್ಗಿದ ಎಂಟು ಮಂದಿಯ ತಂಡ ಕತ್ತಿ, ರಾಡು ಹಾಗೂ ದೊಣ್ಣೆಯಿಂದ ಮನೆಮಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಶನಿವಾರ ರಾತ್ರಿ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧೀನಗರದಲ್ಲಿ ಶನಿವಾರ ( 18-05-2019) ತಡರಾತ್ರಿ ನಡೆದಿದೆ.

ಗಂಗೆಬೈಲು ಗಾಂಧಿನಗರದ ನಿವಾಸಿಗಳಾದ ಶಾರದಾ ದೇವಾಡಿಗ (32) ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಶೀಲಾ (52), ಗಣೇಶ(45), ಮೊನಿಷಾ, ಉಷಾ (52), ಶಾರದಾ(45) ಕೋಟೇಶ್ವರ ಕುಂದಾಪುರದ ಆಚಾರ್ಯ ಆಸ್ಪತ್ರೇಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಯ ವಿವರ:

ಶನಿವಾರ ಕಿರಿಮಂಜೇಶ್ವರ ದೇವಸ್ಥಾನದ ಜಾತ್ರೆಯಿದ್ದು ಆಟೋ ರಿಕ್ಷಾದಲ್ಲಿ ಜಾತ್ರೆ ಮುಗಿಸಿ ಶಾರದಾ ದೇವಾಡಿಗ ಮತ್ತು ಕುಟುಂಬಿಕರು ಮನೆಗೆ ವಾಪಾಸ್ ಬಂದಿದ್ದು ರಿಕ್ಷಾ ತಿರುಗಿಸುವ ವೇಳೆ ಕುಪ್ಪು ಖಾರ್ವಿಯವರ ಮನೆಯ ಮೋರಿಗೆ ರಿಕ್ಷಾ ತಾಗಿದ ವಿಚಾರದಲ್ಲಿ ಎರಡು ಮನೆಯವರ ನಡುವೆ ಜಗಳ ನಡೆದಿತ್ತು. ಆ ಸಂಬಂಧ ಶಾರದಾ ಕೂಡಲೇ ಬೈಂದೂರು ಪೊಲೀಸರಿಗೆ ದೂರು ನೀಡಿದ್ದು ಇರಡೂ ಕಡೆಯವರನ್ನು ಮಾರನೇ ದಿನ ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದ್ದರು. ಅಂದು ರಾತ್ರಿ 10.30ರ ಸುಮಾರಿಗೆ ಮನೆಗೆ ಬಂದ ಸುಶೀಲಾ, ಹಾಗೂ ಶಾರದಾ ಊಟ ಮಾಡುತ್ತಿದ್ದಾಗ ಉಪ್ಪುಂದ ನಿವಾಸಿಯಾದ ನವೀನಚಂದ್ರ, ಶೋಭಾ, ದಾಮೋದರ, ರತ್ನಾಕರ, ಸತೀಶ, ಶಿವರಾಮ, ಕುಪ್ಪು ಖಾರ್ವಿ ಹಾಗೂ ಮಾದವ ಖಾರ್ವಿ ಮನೆಗೆ ನುಗ್ಗಿ ತಲವಾರ, ದೊಣ್ಣೆ, ಕತ್ತಿಯಿಂದ ಮನೆಯಲ್ಲಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಶಾರದಾ ಅವರ ತಲೆ, ಕುತ್ತಿಗೆಗೆ ತೀವ್ರವಾದ ಗಾಯವಾಗಿದೆ. ಜಗಳ ತಪ್ಪಿಸಲು ಬಂದ ಮನೆ ಸಮೀಪದಲ್ಲಿ ವಾಸವಿರುವ ಸಂಬಂಧಿಗಳಾದ ಶಾರದಾ, ಗಣೇಶ, ಉಷಾ ಅವರ ಮೇಲೂ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ. ಗಂಭೀರ ಗಾಯಗೊಂಡ ಶಾರದಾ ಅವರನ್ನು ಸದ್ಯ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಂಗಸರ ಮೇಲೆ ಅಮಾನುಷ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಆಕ್ರೋಷ ವ್ಯಕ್ತವಾಗಿದೆ.

ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಆರೋಪಿತರ ವಿರುದ್ಧ ಕೊಲೆಯತ್ನ ಪ್ರಕರಣ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿದೆ.

ಸಮಾಜ ಬಾಂಧವರಿಂದ ಸಾಂತ್ವನ-ಸಹಾಯ:

ಶಂಕರ ಅಂಕದ ಕಟ್ಟೇ ಮತ್ತು ನಾಗರಾಜ ರಾಯಪ್ಪ ಮಠ, ತ್ರಾಸಿ ರಾಜು ದೇವಾಡಿಗ, ಜಿಲ್ಲಾ ಪಂಚಾಯತ ಸದಸ್ಯೆ ಗೌರಿದೇವಾಡಿಗ, ದೇವಾಡಿಗ ಸಂಘ ಉಪ್ಪುಂದ ಇದರ ಅದ್ಯಕ್ಷ  ಬಿ.ಎ.ಮಂಜು ದೇವಾಡಿಗ ಹಾಗೂ ಪ್ರುರುಶೋತ್ತಮ, ಮುಂಬೈ ಸಂಘದ ಪೂರ್ವ ಅದ್ಯಕ್ಷ ಎಚ್. ಮೋಹನ್ ದಾಸ್, ಬೆಂಗಳೂರು ಸಂಘದ ಉಪಾದ್ಯಕ್ಷ ರಮೇಶ್ ದೇವಾಡಿಗ, ತ್ರಾಸಿ ಮಂಜುದೇವಾಡಿಗ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

 ಬೆಂಗಳೂರು ಸಂಘದ ಉಪಾದ್ಯಕ್ಷ ರಮೇಶ್ ದೇವಾಡಿಗ ಅವರು ಧನಸಹಾಯವನ್ನೂ ಮಾಡಿದ್ದಾರೆ.

ಬೈಂದೂರು ಶಾಸಕ ಭೇಟಿ..
ಘಟನೆ ತಿಳಿಯುತ್ತಲೇ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಪ್ರಕರಣದಲ್ಲಿನ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಚಿಕಿತ್ಸೆಗೆ ಹಣವಿಲ್ಲದೆ ಪರದಾಟ..
ಇನ್ನು ಶಾರದಾ ದೇವಾಡಿಗ ಇಡೀ ಮನೆಮಂದಿ ತೀವ್ರತರವಾದ ಹಲ್ಲೆಗೊಳಗಾಗಿ ಆಸ್ಪತ್ರೆ ಪಾಲಾಗಿದ್ದಾರೆ. ದಿನಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬವೀಗ ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸಲು ಕೂಡ ಪರದಾಡುವಂತಾಗಿದೆ. ಈ ಬಗ್ಗೆ ದೇವಾಡಿಗ ಸಮಾಜ, ಹಾಗೂ ದಾನಿಗಳು ಮುಂದೆ ಬಂದು ಇವರ ಸಂಕಷ್ಟಕ್ಕೆ ಸಹಕಾರ ನೀಡಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

~ ದೇವಾಡಿಗೇ ಅಕ್ಷಯ ಕಿರಣವು ಈ ಅಮಾನುಷ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತದೆ. ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೇಯ ದೇವಾಡಿಗ ಸಂಘಗಳು ಒಟ್ಟಾಗಿ ಈ ನೊಂದ ದೇವಾಡಿಗ ಕುಟುಂಬಕ್ಕೆ ನ್ಯಾಯವನ್ನು ಕೊಡಿಸಬೇಕಾಗಿ ವಿನಂತಿಯನ್ನು ಮಾಡುತ್ತದೆ.- ಗಣೇಶ್ ಶೇರಿಗಾರ್

~ We Members of Devadiga Sangha Bangalore Condemn the incident happend near Kirimanjeshwar .we pray for the speedy recovery of the Injured....we Support for the justice to our Community

~ Chandrashekar Devadiga, President, Bangalore Sangha

~ Myself  and Rajiv Trasi visited Hospital at Koteshwara and understood incidents . All connected offenders arrested. But it is not enough . Our local Sanghas should come together to lodge strong protest before local MLA and policeAuthorities. Though MLA assured full support to book the offenders and get fait justice. Such incidents should not repeat in future. Our people need to come together above party politics. At the same time the episode should not become a issue for publicity and individual image building. I spoke to Dinesh C. Devadiga and requested him to support the family.Gowri Devadiga took active role in getting the case registered with police and to get victims admitted in Hospital . The patient at KMC is reportedly out of danger. You may visit KMC and extend  assistance.
All local Sanghas are planning a Protest Rally.

~ H.Mohandas, Former President Mumbai Sangha

Family attacked due to minor dispute - Five injured, woman serious (daijiworld.com)

Byndoor, May 20: A gang of six gatecrashed into a house at Kirimanjeshwar near here on Saturday, May 17, and launched deadly attack on the family members with lethal weapons including saber. It is said that the attack was the outcome of a minor dispute, and five members of the family suffered injuries.

Sharada (32), resident of Konegadde House in Gandhinagar, Gangebail in Kirimanjeshwar, suffered critical injuries. She is being treated at KMC Hospital Manipal. Other members of her family, Susheela (52), Ganesh (45), Usha (52) and Sharada (45) sustained injuries which are of less intensity. They were admitted into a private hospital at Koteshwar.

The family which resides at Konegadde House had taken part in the annual fair at Kirimanjeshwar. The family members were having dinner after returning from the fair when Shobha from Nanana Mane, and her brothers, Sathish, Damodar, Ratnakar, Shivaram as well as her husband, Naveenchandra, barged into the house at Konegadde and indiscriminately attacked the family members with cutlass, cudgel and saber. The family members were taken aback by this sudden attack. The gang members swung their weapons at will, as a result of which Sharada suffered serious injuries to her head and neck. Blood also oozed out her nose. Susheela and Sharada were injured in their hands and legs. Ganesh and Usha were injured in hands and other parts of their bodies.

The two families had fought on the issue of parking of a vehicle in front of Nanana Mane in the evening. The Konegadde House residents had filed police complaint about this incident. It is said that the police personnel had promised the family to look into the matter in the morning. Thereafter the family left to attend the annual fair at Kirimanjeshwar. They were having dinner after returning home when the attack happened. The police visited the spot thereafter, scrutinized the damage done by the gang, and said they were taking steps to arrest the culprits.

Organizations of Devadiga community have condemned this inhuman attack on a poor family. They have threatened to come together and hold protest unless the accused are arrested and dealt with sternly as per law. Raju Devadiga, president of the local unit of Devadiga community organization, issued this warning on behalf of his and other organizations.

https://www.daijiworld.com/news/newsDisplay.aspx?newsID=589444


Share