ಹಲ್ಲೆಗೊಳಗಾಗಿದ್ದ ಕಿರಿಮಂಜೇಶ್ವರ ಕುಟಂಬಕ್ಕೆ ಪಕ್ಷ ಭೇದವಿಲ್ಲದೆ ಎಲ್ಲಾ ಸಂಘಟನೆಗಳ ಸಾಂತ್ವನ ಹಾಗೂ ಒಗ್ಗಟ್ಟಿನ ಬೆಂಬಲ

ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧಿ ನಗರದ ಕಾಲನಿಯಲ್ಲಿ ಮೇ 18ರಂದು ರಾತ್ರಿ ಮನೆಗೆ ನುಗ್ಗಿ ಮನೆಮಂದಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ನವೀನಚಂದ್ರ ಉಪ್ಪುಂದ ಹಾಗೂ ಆತನ ಪತ್ನಿ ಶೋಭಾ ಬಂಧಿತರಾಗಿದ್ದು, ಅವರಿಗೆ ಜೂ. 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಈ ಘಟನೆಯನ್ನು ದೇವಾಡಿಗ ಸಮಾಜದ ಸಂಘ ಸಂಸ್ಥೆಗಳು, ರಾಜಕೀಯ ಹಾಗೂ ರಾಜಕೀಯೇತರ ಮುಂದಾಳುಗಳು ತೀವ್ರವಾಗಿ ಖಂಡಿಸಿ ಈ ಕುಟುಂಬಕ್ಕೆ ಸಾಂತ್ವನ ಸೂಚಿಸಿ, ಸಂಫೂರ್ಣ ಬೆಂಬಲ ಪ್ರಕಟಿಸಿ, ನಮ್ಮ ಸಮಾಜದ ಕುಟುಂಬಗಳ ಮೇಲೆ ಈ ದಬ್ಬಾಳಿಕೆ ಕೂಡಲೇ ನಿಲ್ಲ ಬೇಕು ಎಂದು ರಾಜಕೀಯ ಪಕ್ಷಗಳಿಗೆ ಹಾಗೂ ಪೋಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ಧಾರೆ. 

ನಿನ್ನೆ ತಾ.21ರಂದು ಗಾಯಗೊಂಡು ಚೇತರಿಸಿಕೋಳ್ಳುತ್ತಿರುವ ಶಾರದಾ ದೇವಾಡಿಗ ಅವರ ಮನೆಯ ವಠಾರದಲ್ಲಿ ನಡೆದ ಸರ್ವ ಸಮಾಜ ಸಭೆಯಲ್ಲಿ ಅವರ ಕುಟುಂಬಿಕರಿಗೆ ಧರ್ಯನೀಡಿ ಸಾಂತ್ವನ ನೀಡಲು ಬಹಳ ಜನರು ಸೇರಿ ಈ ಹಲ್ಲೆಯನ್ನು ಖಂಡಿಸಿದರು.

ಸಮಾಜದ ನಾಯಕರುಗಳಾದ ತ್ರಾಸಿ ರಾಜು ದೇವಾಡಿಗ, ನಾಗೂರು ಸಂಘದ ಅದ್ಯಕ್ಷ ರಾಜು ದೇವಾಡಿಗ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಬೈಂದೂರು ಮಹಿಳಾ ಮೋರ್ಚದ ಅದ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು,  ಕೋಟೇಶ್ವರದ ಶಂಕರ್ ಅಂಕದ ಕಟ್ಟೆ, ಮಂಜು ದೇವಾಡಿಗ ಉಪ್ಪುಂದ, ತ್ರಾಸಿ, ಪತ್ರಕರ್ತ ನಾಗರಾಜ ರಾಯಪ್ಪನ ಮಠ, ರಾಮ ದೇವಾಡಿಗ ಹಾಗೂ ಮನೆಯ ನಾಗೇಶ್ ದೇವಾಡಿಗ ಮತ್ತು ಬಹಳಷ್ಟು ಮಂದಿ ನೆರೆ ಕೆರೆಯವರು ಸೇರಿದ್ದರು.

ಹಲ್ಲೆಗೊಳಗಾಗಿದ್ದ ಕಿರಿಮಂಜೇಶ್ವರ ದೇವಾಡಿಗ ಕುಟಂಬಕ್ಕೆ ಸಮಾಜ ಬಾಂಧವರಿಂದ ಸಾಂತ್ವನ-ಸಹಾಯ (Click)


Share