ದೇವಾಡಿಗ ನವೋದಯ ಸಂಘ ಬೆಂಗಳೂರು ಇವರಿಂದ ಶಾರದಾ ಕುಟುಂಬಕ್ಕೆ ನೆರವು

ಕಿರಿಮಂಜೇಶ್ವರ: ಇತ್ತೀಚೆಗೆ ದುಷ್ಕರ್ಮಿಗಳಿಂದ ಗಂಭೀರವಾಗಿ ಹಲ್ಲೆಗೊಳಗಾದ ಕಿರಿಮಂಜೇಶ್ವರ ನಿವಾಸಿ ಶಾರದಾ ದೇವಾಡಿಗರ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆ ಗೆ ದೇವಾಡಿಗ ನವೋದಯ ಸಂಘ ಬೆಂಗಳೂರು ಇದರ ವತಿಯಿಂದ 10,000/- ರೂಪಾಯಿ ಧನ ಸಹಾಯವನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಬಿ.ಆರ್ ದೇವಾಡಿಗರವರು ನಗದು ರೂಪದಲ್ಲಿ ಹಸ್ತಾಂತರಿಸಿದರು, ಹಾಗೂ ಬೈಂದೂರು ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರಾದ ಶ್ರೀಮತಿ ಪ್ರಿಯದರ್ಶಿನಿ ದೇವಾಡಿಗರವರು ಶಾರದಾ ದೇವಾಡಿಗರವರ ಕುಟುಂಬಕ್ಕೆ ರೂ. 5000/- ಧನಸಹಾಯವನ್ನು ನೀಡಿದರು.

ಈ ಸಂದರ್ಭದಲ್ಲಿ ದೇವಾಡಿಗ ಒಕ್ಕೂಟ ಬೈಂದೂರು ಇದರ ಅಧ್ಯಕ್ಷರಾದ ನಾರಾಯಣ ದೇವಾಡಿಗ, ಕಾರ್ಯದರ್ಶಿಯಾದ ಚಂದ್ರ ದೇವಾಡಿಗ, ಗೌರವ ಸಲಹೆಗಾರರಾದ ರಾಜಶೇಖರ್ ಬೈಂದೂರು ಮತ್ತು ಕಮಲೇಶ್ ಬೆಸ್ಕೂರು, ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷರಾದ ನಾಗರಾಜ್ ರಾಯಪ್ಪನ ಮಠ ಉಪಸ್ಥಿತರಿದ್ದರು


Share