ದೇವಾಡಿಗರ ಒಕ್ಕೂಟ ( ರಿ.)ಬೈಂದೂರು; ನೂತನ ಅಧ್ಯಕ್ಷರಾಗಿ ಶ್ರೀ ನಾರಾಯಣ ದೇವಾಡಿಗ ಬಸವನಕೆರೆ

ಬೈಂದೂರು: ದಿನಾಂಕ 24.05.2019 ರಂದು  ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಶ್ರೀ ಮಹಾಸತೀ ದೇವಸ್ಥಾನ ವತ್ತಿನಕಟ್ಟೆ ಇಲ್ಲಿ ನಡೆಸುವ ಮೂಲಕ ವಾರ್ಷಿಕ ಮಹಾಸಭೆಗೆ ವಿಧ್ಯುಕ್ತ ಚಾಲನೆಯನ್ನು ನೀಡಲಾಯಿತು.  

        

ನಂತರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೇವಾಡಿಗರ ಒಕ್ಕೂಟ (ರಿ.)ದ ಅಧ್ಯಕ್ಷರಾದ ಶ್ರೀ ಹೆಚ್.ನಾರಾಯಣ ದೇವಾಡಿಗರ ಅಧ್ಯಕ್ಷತೆಯಲ್ಲಿ  ನಡೆಸಲಾಯಿತು.ಪ್ರಾರಂಭದಲ್ಲಿ  ನಮ್ಮನ್ನಗಲಿದ ಒಕ್ಕೂಟದ ಬೆನ್ನೆಲುಬು ಶ್ರೀ ಎಸ್. ಡಿ ಹೇನ್ಬೇರ್ ಇವರಿಗೆ ಮೌನಾಚರಣೆ ಮೂಲಕ ಗೌರವ  ಸೂಚಿಸಲಾಯಿತು. 

ಕಾರ್ಯಕ್ರಮದ ಉಧ್ಘಾಟಕರಾಗಿ ಆಗಮಿಸಿದ ಶ್ರೀ ಏಕನಾಥೇಶ್ವರೀ ಟ್ರಸ್ಟ್ (ರಿ.)ಬಾರಕೂರು ಇದರ ಅಧ್ಯಕ್ಷರಾದ ಶ್ರೀ ಅಣ್ಣಯ್ಯ ಸೇರಿಗಾರ್ ಇವರು ಶುಭಾಶಂಸನೆಗೈದರು.  ಪದವೀಧರ  ಮುಖ್ಯೋಪಾಧ್ಯಾಯ ಶ್ರೀ ಜನಾರ್ಧನ ಬೈಂದೂರು ಇವರು ಪ್ರಾಸ್ತಾವಿಕ ನುಡಿಗೈದರು. ಹಿಂದಿನ ವರ್ಷದ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಒಪ್ಪಿಗೆಯನ್ನು ಪಡೆಯಲಾಯಿತು. ಕಾರ್ಯದರ್ಶಿ ಶ್ರೀ ಸತ್ಯಪ್ರಸನ್ನ ವರದಿ ವಾಚಿಸಿದರು.   

    

ಮುಖ್ಯ ಅತಿಥಿಗಳಾಗಿ ಆಗಮಿಸಿದ ದೇವಾಡಿಗ ನವೋದಯ ಸಂಘ(ರಿ.) ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಬಿ.ಆರ್ ದೇವಾಡಿಗರು ಒಕ್ಕೂಟದ ಕಾರ್ಯಕ್ರಮಗಳಿಗೆ ತಮ್ಮ ಸಹಕಾರದ ಭರವಸೆಯಿತ್ತು ಉಚಿತ ಪುಸ್ತಕದ  ಕೊಡುಗೆ ಪ್ರಕಟಿಸಿದರು ಹಾಗೂ ಸಂಘಟನೆಯಲ್ಲಿ ಪೋಷಕರ ಪಾತ್ರದ ಬಗ್ಗೆ ಸುಧೀರ್ಘ ಉಪನ್ಯಾಸಗೈದರು.

ಆಶಯ ನುಡಿ ಸಲ್ಲಿಸಿದ ಶ್ರೀ  ರಾಮ ದೇವಾಡಿಗ;  ಉಪಪ್ರಾಂಶುಪಾಲರು,ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ ಇವರು ಸಂಘ, ಸಂಘಟನೆ, ಸಮಾಜ ಬಾಂಧವರ ಒಗ್ಗೂಡುವಿಕೆಯ ಕಾರ್ಯನಿರ್ವಹಣೆಯ ಮಹತ್ವವನ್ನು ವಿಶದಪಡಿಸಿದರು. ವಿದ್ಯಾರ್ಥಿ ವೇತನದ ಸದುಪಯೋಗ, ಅಂಕ ಗಳಿಕೆಗಿಂತಲೂ ಸಮಾಜಮುಖಿಯಾಗಿರುವಂತೆ ವಿದ್ಯಾರ್ಥಿಗಳಿಗೆ  ಮನವರಿಕೆ ಮಾಡಿಕೊಟ್ಟರು.

ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಮಂಜು ದೇವಾಡಿಗರು ಸಮಾಜದ ಮೇಲಿನ ಬಾಹ್ಯ ಆಕ್ರಮಣದ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿ ಜಾಗರೂಕ ಸಮಾಜದ  ಅಗತ್ಯತೆಯನ್ನು ತಿಳಿಸಿಕೊಟ್ಟರು.

ಇನ್ನೋರ್ವ ಅತಿಥಿ ಯಡ್ತರೆ ಪಂಚಾಯತ್ನ ನೂತನ ಅಧ್ಯಕ್ಷೆ ಸಮಾಜ ಬಾಂಧವರಾದ ಶ್ರೀಮತಿ ಮುಕಾಂಬು ದೇವಾಡಿಗರು ಒಕ್ಕೂಟದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿ  ತಮ್ಮ ಸಹಕಾರದ ಭರವಸೆಯಿತ್ತರು.ಜಿಲ್ಲಾ ಪಂಚಾಯತ್ ಸದಸ್ಯೆ, ಸಮಾಜ ಬಾಂಧವಿ ಶ್ರೀಮತಿ ಗೌರಿ ದೇವಾಡಿಗರು  ಸಭೆಗೆ ಆಗಮಿಸಿ ಒಕ್ಕೂಟಕ್ಕೆ ಶುಭ ಹಾರೈಸಿದರು.       

ಮುಂದಿನ ಸಾಲಿಗೆ ಹೊಸ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀ ನಾರಾಯಣ ದೇವಾಡಿಗ ಬಸವನಕೆರೆ, ನಿವೃತ್ತ ಪದವೀಧರ ಮುಖ್ಯೋಪಾಧ್ಯಾಯರು ಹಾಗೂ ಕಾರ್ಯದರ್ಶಿಯಾಗಿ ಅಧ್ಯಾಪಕ ಶ್ರೀ ಚಂದ್ರ ದೇವಾಡಿಗ ಜಿ.ಆಯ್ಕೆಯಾದರು. ಮಹಿಳಾ ಘಟಕವನ್ನು ಪುನರ್ ರಚಿಸಲಾಯಿತು.
          
ಅಧ್ಯಾಪಕ ಶ್ರೀ ರಾಘವೇಂದ್ರ ದೇವಾಡಿಗ ಕಳವಾಡಿ ಇವರು ವಿವಿಧ ಸಂಘ ಸಂಸ್ಥೆಗಳು ನೀಡುತ್ತಿರುವ ವಿದ್ಯಾರ್ಥಿವೇತನ ಹಾಗೂ ಅರ್ಜಿ ಸಲ್ಲಿಸುವ ವಿಧಾನದ  ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಆದಕ್ಕೆಂದೇ ವಿಶೇಷ ಕೌಂಟರಿನ ವ್ಯವಸ್ಥೆ ಮಾಡಲಾಗಿತ್ತು. ಉಚಿತ ಪುಸ್ತಕದ ನೋಂದಣಿ ಮಾಡಿಕೊಳ್ಳಲಾಯಿತು.        

ಪ್ರಗತಿಪರ ಕೃಷಿಕ ಶ್ರೀ ಗೋವಿಂದ ದೇವಾಡಿಗ ಸಾಮಿನ ಕೊಡ್ಲು  ಹಾಗೂ ಸಾಂಪ್ರದಾಯಿಕ ಕಲೆ ಪಂಚವಾದ್ಯ ಪರಿಣತ ಶ್ರೀ ರವೀಂದ್ರ ಜೆ ದೇವಾಡಿಗರನ್ನು ಸನ್ಮಾನಿಸಲಾಯಿತು. ವಿವಿಧ ಪಂಚಾಯತ್ಗಳ ನೂತನ ಸದಸ್ಯರುಗಳನ್ನು ಸನ್ಮಾನಿಸಲಾಯಿತು.  ಎಸ್ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಗರಿಷ್ಠ ಅಂಕ ಪಡೆದವರನ್ನು ಗುರುತಿಸಲಾಯಿತು.
             
ವೇದಿಕೆಯಲ್ಲಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೆ.ನಾರಾಯಣ, ನಿವೃತ್ತ ಕೃಷಿ ಆಧಿಕಾರಿ, ಗೌರವಾಧ್ಯಕ್ಷ ಶ್ರೀ ಕೆ.ಜಿ  ಸುಬ್ಬ ದೇವಾಡಿಗ ನಿವೃತ್ತ ಬ್ಯಾಂಕ್ ಅಧಿಕಾರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಶ್ಮಿ ಪಡುವರಿ, ಹಾಗೂ ಒಕ್ಕೂಟದ ನೂತನ ಅಧ್ಯಕ್ಷ ಶ್ರೀ ನಾರಾಯಣ ದೇವಾಡಿಗ ಬಸವನಕೆರೆ  ಉಪಸ್ಥಿತರಿದ್ದರು. 

ಅಧ್ಯಾಪಕ ಶ್ರೀ  ರಾಘವೇಂದ್ರ ದೇವಾಡಿಗ ಸ್ವಾಗತಿಸಿದರು.  ಅಧ್ಯಾಪಕ  ಶ್ರೀ ನಾರಾಯಣರಾಜು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸತ್ಯಪ್ರಸನ್ನ ವಂದಿಸಿದರು


Share