ಜೂನ್.02: ದೇವಾಡಿಗರ ಒಕ್ಕೂಟ ( ರಿ.) ಬೈಂದೂರು; ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

ಬೈಂದೂರು:  ದಿನಾಂಕ 02.06.2019 ರಂದು  ರವಿವಾರ ಸಂಜೆ 3 ಗಂಟೆಗೆ ಶ್ರೀ ಮಹಾಸತೀ ಅಮ್ಮನವರ ದೇವಸ್ಥಾನ,ವತ್ತಿನಕಟ್ಟೆ ಇಲ್ಲಿ ದೇವಾಡಿಗ ನವೋದಯ ಸಂಘ (ರಿ.) ಬೆoಗಳೂರು ಪ್ರಾಯೋಜಕತ್ವದ ಉಚಿತ ಪುಸ್ತಕ ವಿತರಣಾ ಸಮಾರoಭ ಜರಗಲಿರುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಡಿಗರ ಒಕ್ಕೂಟ (ರಿ.) ಬೈಂದೂರು ಇದರ ನೂತನ ಅಧ್ಯಕ್ಷ ಶ್ರೀ ನಾರಾಯಣ ದೇವಾಡಿಗ ಬಸವನಕೆರೆ ಇವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಒಕ್ಕೂಟದ ಪ್ರೋತ್ಸಾಹಕರೂ, ಲಾವಣ್ಯ(ರಿ) ಬೈಂದೂರು ಇದರ ಗೌರವಾಧ್ಯಕ್ಷರೂ ಆದ ಶ್ರೀ ಗಿರೀಶ್ ಬೈಂದೂರ್ ಹಾಗೂ  ದೇವಾಡಿಗ ನವೋದಯ ಸಂಘ  (ರಿ.) ಬೆoಗಳೂರು ಇದರ ಕಾರ್ಯದರ್ಶಿ ಶ್ರೀ ಚರಣ್ ಬೈಂದೂರು ಇವರು ಭಾಗವಹಿಸಲಿರುವರು.

ಒಕ್ಕೂಟದ ಸoಸ್ಥಾಪಕ ಅಧ್ಯಕ್ಷ ಶ್ರೀ ಕೆ.ನಾರಾಯಣ, ನಿವೃತ್ತ ಕೃಷಿ ಆಧಿಕಾರಿ, ಮಾಜಿ ಅಧ್ಯಕ್ಷ ಶ್ರೀ ಕೆ.ಜಿ ಸುಬ್ಬ ದೇವಾಡಿಗ ನಿವೃತ್ತ ಬ್ಯಾoಕ್ ಉದ್ಯೋಗಿ, ಸಂಘದ ಗೌರವಾಧ್ಯಕ್ಷ ನಾರಾಯಣ ದೇವಾಡಿಗ ಹೊಸಾಡು ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ದೇವಾಡಿಗ ಇವರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.    

ಒಕ್ಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ  ಸಹಕರಿಸಬೇಕಾಗಿ ವಿನಂತಿ.

~  ಅಧ್ಯಕ್ಷರು & ಕಾರ್ಯದರ್ಶಿ ಹಾಗೂ ಪದಾದಿಕಾರಿಗಳು,
ದೇವಾಡಿಗರ ಒಕ್ಕೂಟ ( ರಿ.) ಬೈಂದೂರು.


Share