ಮುಂಬೈ ಸಮಾಜ ಬಾಂಧವರಿಂದ ನೋವು-ಸಂಕಷ್ಟದಲ್ಲಿದ್ದ ವಿದ್ಯಾರ್ಥಿನಿಗೆ ಸಹಾಯ- ನೆರವು

ಬೇರೆಯವರ ನೋವನ್ನು ಅರ್ಥ ಮಾಡಿಕೊಳ್ಳುವವರೇ ನಿಜವಾದ ಮನುಷ್ಯರು.. ಮಾನವೀಯತೆಗಿಂತ ಮಿಗಿಲಾದುದು ಯಾವುದು ಇಲ್ಲ.! 

ಮುಂಬೈ:  ಮುಂಬೈ ಯ ಥಾಣೆಯಲ್ಲಿ ವಾಸವಾಗಿರುವ ರಮೆಶ ದೇವಾಡಿಗ ಹುಟ್ಟೂರು ಕಂಬದಕೋಣೆ ಬೈಂದೂರ್ ತಾಲೂಕು, ಇವರ ಪತ್ನಿ ಸುಜಾತಾ ದೇವಾಡಿಗ ಅನಾರೋಗ್ಯದ ಕಾರಣ 30/5/2019 ರಂದು ಮೃತಪಟ್ಟಿರುತ್ತಾರೆ. ಅವರ ಪಾರ್ಥಿವ ಶರೀರವನ್ನು ಊರಿಗೆ ತರಲಾಗಿದ್ದು ಅಂತ್ಯಕ್ರಿಯೆ ನಡೆದಿದೆ.

(Selfie taken by Pallavi Devadiga with Mamatha Devadiga's classmate )

ಆದರೆ ಅವರ ಎರಡನೇಯ ಮಗಳು ಮಮತಾ ದೇವಾಡಿಗಳ ಕಾಲೇಜು ಫೀಸ್ ಹಾಗೂ ಅಡ್ಮಿಶನ್  31/5/2019 ಕೊನೆಯ ದಿನ ವಾಗಿದ್ದು ತಾಯಿಯ ಅಂತ್ಯಸಂಸ್ಕಾರ ನೆರವೇರಿಸಲು ಊರಿಗೆ ಬಂದ ಕಾರಣ ಹಾಗೆಯೇ ಫೀ ಕಟ್ಟಲು ಸಾಲ ಮಾಡಿ ತಂದ ರೂಪಾಯಿ 30,000 ಹಣವನ್ನು ತಾಯಿಯ ಆಂಬುಲೆನ್ಸ್ ಗೆ ವೆಚ್ಚವಾಗಿದ್ದು ಕುಟುಂಬ ಸಂಕಷ್ಟದಲ್ಲಿತ್ತು. ಇದನ್ನು ಅರಿತ ಮುಂಬೈ ದೇವಾಡಿಗ ಸಂಘದ ಶ್ರೀ ಮೋಹನದಾಸ ಹಿರಿಯಡ್ಕ, ಜನಾರ್ಧನ ದೇವಾಡಿಗ ಉಪ್ಪುಂದ ಮತ್ತು ಅಧ್ಯಕ್ಷರಾದ ರವಿ ದೇವಾಡಿಗ ಹಾಗೂ ನವಿ ಮುಂಬೈಯ LC ಚೈರ್ಮ್ಯಾನ್ ಆನಂದ ಶೇರಿಗಾರ್ ಇವರುಗಳುವಿದ್ಯಾರ್ಥಿನಿಯ ನೋವನ್ನು ಅರ್ಥಮಾಡಿಕೊಂಡು ರೂಪಾಯಿ 30,000/- ದ ಚೆಕ್ಕನ್ನು ತಕ್ಷಣವೇ ಪಲ್ಲವಿ ದೇವಾಡಿಗ ಐರೊಲಿ ಹಾಗೂ ಮಮತಾಳ ಕ್ಲಾಸ್ ಮೇಟ್ ಇವರ ಮುಖಾಂತರ  ಕಾಲೇಜ್ ಫೀಸ್ ಕಟ್ಟಿಸಿದರು. 

ಮುಂಬೈ ದೇವಾಡಿಗ ಸಂಘಕ್ಕೆ ಮತ್ತು ಅಧ್ಯಕ್ಷರಾದ ಶ್ರೀ ರವಿ ದೇವಾಡಿಗ ಹಾಗೂ ಶ್ರೀ ಮೋಹನದಾಸ ಹಿರಿಯಡ್ಕ ಮತ್ತು ತಾತ್ಕಾಲಿಕವಾಗಿ ವೈಯಕ್ತಿಕ ಧನಸಹಾಯ ಮಾಡಿದ ಶ್ರೀ ಜನಾರ್ಧನ ದೇವಾಡಿಗ ಉಪ್ಪುಂದ ಇವರಿಗೆ ಹೇರಾಂಜಾಲ್-ಕಂಬದಕೋಣೆ ದೇವಾಡಿಗ ಬಾಂಧವರು ಹಾಗೂ ಕುಟುಂಬದವರು ದೇವರಲ್ಲಿ ಪ್ರಾರ್ಥಿಸಿ ಅವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.


Share