ದೇವಾಡಿಗ ಯುವ ವೇದಿಕೆ (ರಿ), ಉಡುಪಿಯ ಅತ್ಯುತ್ಸಾಹಭರಿತ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ

ಉಡುಪಿ: ದೇವಾಡಿಗ ಯುವ ವೇದಿಕೆ (ರಿ) ಉಡುಪಿ, ನಾಡಶ್ರೀ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಕುಕಿಕಟ್ಟೆ, ಸೀತರಾಮ ಮಹಿಳಾ ಭಜನಾ ಮಂಡಳಿ (ರಿ) ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ, ಶಾಲಾ ಪರಿಕರ ವಿತರಣೆ, ವಿಶೇಷ ಸಾಧನೆಗೈದವರಿಗೆ ಸಮ್ಮಾನ ಮಾಡಲಾಯಿತು.

ಭಾರತೀಯ ಯೋಧರಾದ ವಿ. ದಾಮೋದರ ದೇವಾಡಿಗ ಹಿರಿಯಡ್ಕ, ಸಾಂಸ್ಕøತಿಕ ಯುವ ಮಹಿಳಾ ಸೆಕ್ಸೊಪೋನ್ ವಾದಕರಾದ ಕುಮಾರಿ ಮೇಘನಾ ಸಾಲಿಗ್ರಾಮ, ಶ್ರೀಮತಿ ಅಕ್ಷತಾ ಕುಕಿಕಟ್ಟೆ, ಶ್ರೀನಿಧಿ ದೇವಾಡಿಗ ಹೆರೂರು, ಕುಮಾರಿ ದೀಕ್ಷಾ ಶೇರಿಗಾರ ಅಲೆಯೂರು, ಕ್ರೀಡಾ ಕ್ಷೇತ್ರದಲ್ಲಿ ಆಶಿಶ್ ದೇವಾಡಿಗ (ಕ್ರಿಕೆಟ್) ಅಂಕಿತಾ ದೇವಾಡಿಗ (ಅಥ್ಲಾಟಿಕ್) ಹಾಗೂ ರಾಜಕೀಯ ಕ್ಷೇತ್ರದಲ್ಲಿ ವಿಜಯ ಕೊಡವೂರು, ಚಂದ್ರಶೇಖರ ಇಂದಿರಾನಗರ, ಸುರೇಶ್ ದೇವಾಡಿಗ ಕಾಪು ಇವರಿಗೆ ಸನ್ಮಾನಿಸಲಾಯಿತು.

ಸುಮಾರು 200 ಮಕ್ಕಳಿಗೆ ಶಾಲಾ ಪರಿಕರವನ್ನು ವಿತರಿಸಿದರು.


ಅಧ್ಯಕ್ಷತೆಯನ್ನು ಶ್ರೀ ಶ್ರೀಧರ ದೇವಾಡಿಗ, ಮುಖ್ಯ ಅತಿಥಿಗಳಾಗಿ ಡಾ. ಬಿ.ಎಸ್ ಶೇರಿಗಾರ್, ಶ್ರೀ ವಸಂತ ಕುಮಾರ ನಿಟ್ಟೆ, ಶ್ರೀ ರತ್ನಾಕರ ಮೊಯ್ಲಿ, ಶ್ರೀ ಪ್ರವೀಣ ಕುಮಾರ್, ಶ್ರೀ ಲಕ್ಷ್ಮೀಕಾಂತ್ ಬೆಸ್ಕೂರ್, ಶ್ರೀ ಶ್ರೀಧರ್ ಮೊಯ್ಲಿ, ಶ್ರೀ ಪ್ರಭಾಕರ್ ಕೆ.ಎಸ್, ಶ್ರೀ ಪ್ರವೀಣ ಕುಮಾರ್, ಶ್ರೀ ಚಂದ್ರಕಾಂತ್ ದೇವಾಡಿಗ, ಶ್ರೀ ಎಮ್.ಎಚ್ ಕರುಣಾಕರ ಉಪಸ್ಥಿತರಿದ್ದರು.

ಪ್ರಭಾಕರ್ ಕೆ.ಎಸ್ ಸ್ವಾಗತಿಸಿ ನಿರೂಪಿಸಿದರು, ಅಶೋಕ್ ಅಲೆವೂರು ವಂದಿಸಿದರು.

ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಮತ್ತು ವಿದ್ಯಾರ್ಥಿವೇತನ ನೀಡಲಾಯಿತು. ( ಇವರುಗಳ ಹೆಸರು-ವಿವರ ಸಿಕ್ಕಿಲ್ಲ!)

~ Pics & ವರದಿ: Rakesh Kumar, Yuva Vedhike; Udupi.


Share