ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ಜಾರ್ಜ್ ಫೆರ್ನಾಂಡೀಸ್  ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ 

ಮುಂಬಯಿ : ಮುಂಬಯಿಯ ವಿವಿಧ ಜಾತಿ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ,  ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಪ್ರಗತಿ ಬಗ್ಗೆ ಯಶಸ್ವಿ  ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು, ಕೊಂಕಣ ರೈಲ್ವೆ ಶಿಲ್ಪಿ ಎಂದೇ ಕರೆಯಬಹುದಾದ, ಜಾರ್ಜ್ ಫೆರ್ನಾಂಡೀಸ್  ಇವರ ಜನ್ಮ ದಿನವನ್ನು ಪ್ರತೀ ವರ್ಷ ಅದ್ದೂರಿಯಿಂದ ಆಚರಿಸುತ್ತಾ ಬಂದಿದ್ದು  ಜೂ. 3 ರಂದು   ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾರ್ಗದರ್ಶಕರೂ ಆಗಿದ್ದ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಿತು. 

ಜಾರ್ಜ್ ಫೆರ್ನಾಂಡೀಸ್ ರ 89ನೆ  ಜನ್ಮ ದಿನದ ಆಚರಣೆಯ ನಿಮಿತ್ತ  ಅಂದು ಸಂಜೆ 7ಕ್ಕೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಹಾಲ್ ನಲ್ಲಿ   ಜಾರ್ಜ್ ಫೆರ್ನಾಂಡೀಸ್  ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 2019ನ್ನು ಮಣಿಪಾಲ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕಳೆದ ಸುಮಾರು ೫೦ ವರ್ಷಗಳಿಂದ ಆರೋಗ್ಯ ಕಾಪಾಡುವ ಬಗ್ಗೆ ಸೂಕ್ತ ಮಾಹಿತಿ ನೀಡುತ್ತ ಬಂದಿರುವ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಧಾನಿಸಿದರು. 

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯ ಅಧ್ಯಕ್ಷತೆಯಲ್ಲಿಜರಗಿ ಈ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರದ ಮಾನ್ಯ ಸಚಿವರಾದ ದೀಪಕ್ ಕೇಸರ್ಕರ್, ಕರ್ನಾಟಕ ಸರಕಾರದ ವಿರೋದ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಎಂ ಡಿ  ಶೆಟ್ಟಯವರು ಗೌರವ ಅತಿಥಿಯಾಗಿ ಆಗಮಿಸಿದ್ದರು.

 ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಪರವಾಗಿ ಸಮಿತಿಯ ಉಪಾಧ್ಯಕ್ಷರುಗಳಾದ,  ಪಿ. ಧನಂಜಯ ಶೆಟ್ಟಿ, ನಿತ್ಯಾನಂದ  ಡಿ. ಕೋಟ್ಯಾನ್. ಸಿಎ ಐ. ಆರ್.  ಶೆಟ್ಟಿ,  ರಾಮಚಂದ್ರ ಗಾಣಿಗ, ಚಂದ್ರಶೇಖರ  ಅರ್, ಬೆಳ್ಚಡ, ಜಿ.ಟಿ. ಆಚಾರ್ಯ,  ಕೆ. ಎಲ್. ಬಂಗೇರ, ಪೆಲಿಕ್ಸ್ ಡಿ. ಸೋಜಾ, ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್, ಗೌರವ ಕಾರ್ಯದರ್ಶಿಗಳಾದ  ರವಿ ಎಸ್.ದೇವಾಡಿಗ,  ಹ್ಯಾರಿ ಸಿಕ್ವೇರ, ಬಿ. ಮುನಿರಾಜ್ ಜೈನ್, ದೇವದಾಸ್ ಕುಲಾಲ್, ಗೌರವ ಕೋಶಾಧಿಕಾರಿ ಮುಂಡ್ಕೂರು  ಸುರೇಂದ್ರ ಸಾಲ್ಯಾನ್, , ತೋನ್ಸೆ ಸಂಜೀವ ಪೂಜಾರಿ, ಸಮಿತಿಯ ವಕ್ತಾರರಾದ ದಯಾಸಾಗರ ಚೌಟ, ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ ಮಾಡ, ಉಪಶ್ರದ್ದರು.    

ಚಿತ್ರ ವರದಿ  ದಿನೇಶ್ ಕುಲಾಲ್


Share