ಮುಂಬೈ: ಸುರೇಖಾ ಹೇಮನಾಥ ದೇವಾಡಿಗ ಅವರಿಗೆ ಎಂ. ಪಿಲ್ ಪದವಿ

ಮುಂಬಯಿ: ಕನ್ನಡ ವಿಬಾಗದ ಸಂಶೋಧನ ವಿದ್ಯಾರ್ಥಿ ಸುರೇಖಾ ದೇವಾಡಿಗ ಅವರು ಬರೆದ ಸಲ್ಲಿಸಿದ ದೇವಾಡಿಗ ಜನಾಂಗ-ಒಂದು ಸಾಂಸ್ಕೃತಿಕ ಅಧ್ಯಯನ ಶೋಧ ಸಂಪ್ರಬಂಧಕ್ಕೆ ಮುಂಬಯಿ ವಿಶ್ವ ವಿದ್ಯಾಲಯ ಎಂ.ಫಿಲ್ ಪದವಿ ನೀಡಿದೆ.
ಅವರು ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಈ ಸಂಪ್ರಬಂಧವನ್ನು ಸಿದ್ಧಪಡಿಸಿ ಮುಂಬೈ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಎಂ.ಎ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣವಾಗಿರುವ ಸುರೇಖಾ ದೇವಾಡಿಗ ಅವರು ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿದ್ದರೆ. ಸುರೇಖಾ ಅವರು ಹಿರಿಯರ ಕ್ರಿಡಾಕೂಟದಲ್ಲಿ ಶಾಟ್‍ಪುಟ್, ಹ್ಯಾಮರ್ ಥ್ರೋ, 5000 ಮೀಟರ್ ಹಾಗೂ ರಿಲೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನ, ಪದಕಗಳನ್ನು ಪಡೆದುಕೊಂಡಿದ್ದಾರೆ.

ಅವರು ಮೂಲತಃ ದೇರಬೈಲು, ಕೊಂಚಾಡಿ ಮಂಗಳೂರಿನವರಾಗಿದ್ದು ಸದ್ಯ ಮುಂಬಯಿ ವರ್ಲಿಯಲ್ಲಿ ವಾಸಿಸುತ್ತಿದ್ದಾರೆ. ಸುರೇಖಾ ಹೇಮನಾಥ ದೇವಾಡಿಗ ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಹಿತ್ಯ ಯಕ್ಷಗಾನ ಕಲೆ ಆಸಕ್ತಿಯನ್ನು ಹೊಂದಿದ್ದು ಭ್ರಾಮರಿ ನೆರೊಲ್‍ನಲ್ಲಿ ಯಕ್ಷಗಾನ ಅಭ್ಯಾಸವನ್ನು ಮಾಡುತ್ತಿದ್ದಾರೆ. ಅವರು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದಾರೆ.

ಅವರಿಗೆ ನಮ್ಮೆಲ್ಲರ ಅಭಿನಂದನೆ ಹಾಗೂ ಶುಭಹಾರೈಕೆಗಳು

ಸುರೇಖಾ ಹೇಮನಾಥ ದೇವಾಡಿಗ ಅವರ ಜೀವನದ ಘಟ್ಟಗಳು:

ಹೆಸರು            : ಸುರೇಖಾ ಹೇಮನಾಥ ದೇವಾಡಿಗ
ತಂದೆ             : ಮುಚ್ಚೂರು ಸುಂದರ ದೇವಾಡಿಗ
ತಾಯಿ            : ಸಿಂಧು ಸುಂದರ ದೇವಾಡಿಗ
ಊರು             : ದೇರೆಬೈಲು ಕೊಂಚಾಡಿ, ಮಂಗಳೂರು
ಹುಟ್ಟಿದ ತಾರೀಕು  : 29.5.1968
ಪ್ರಾಥಮಿಕ ಶಿಕ್ಷಣ  : ಕಪಿತಾನಿಯೋ ಶಾಲೆ, ಮಂಗಳೂರು
ಮಾಧ್ಯಮಿಕ ವಿದ್ಯಾಭ್ಯಾಸ: ಯು.ಬಿ.ಎಂ.ಸಿ ಶಾಲೆ, ಮೂಳೂರು ಕಾಪು ತಾಲೂಕು, ಉಡುಪಿ ಜಿಲ್ಲೆ
ಬಿ.ಕಾಂ. ವಿದ್ಯಾಭ್ಯಾಸ : ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು
ಪಾಲಿಟೆಕ್ನಿಕ್ ಡಿಪ್ಲೊಮಾ, ಕಮರ್ಶಿಯಲ್ ಪ್ರಾಕ್ಟೀಸ್: ಬೊಂದೆಲ್ ಮಹಿಳಾ ಪಾಲಿಟೆಕ್ನಿಕಲ್, ಮಂಗಳೂರು

ವಿವಾಹ         : 2.1.1994
ಪತಿ             : ಹೇಮನಾಥ ದೇವಾಡಿಗ
ಪುತ್ರ            : ಅಭಿಷೇಕ್ ದೇವಾಡಿಗ
ನಿವಾಸ         : ವರ್ಲಿ, ಮುಂಬಯಿ

ಸ್ನಾತಕೋತ್ತರ ಪದವಿ : ಮುಂಬಯಿ ವಿಶ್ವವಿದ್ಯಾಲಯದಿಂದ - ಎಂ.ಎ. ಪ್ರಥಮ ವರ್ಷ- 2014-15, ದ್ವಿತೀಯ ವರ್ಷ- 2015-16, ಎಂ.ಫಿಲ್ ಪದವಿ-2016-2019.

ಕ್ರೀಡಾ ಚಟುವಟಿಕೆಗಳು : 2011ರಲ್ಲಿ ಮಹಾರಾಷ್ಟ್ರ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ, 2012ರಲ್ಲಿ ಭಾರತದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ., ಬೆಂಗಳೂರು, ಲಕ್ನೋ, ಕೇರಳ, ಹರಿಯಾಣ, ತ್ರಿವೆಂಡ್ರಮ್, ನಾಸಿಕ್, ಪುತ್ತೂರು, ಮಂಗಳೂರು ಮೊದಲಾದ ಕಡೆ ಭಾಗವಹಿಸುವಿಕೆ, ಶಾಟ್‍ಫುಟ್, ಹ್ಯಾಮರ್ ತ್ರೋ, ಡಿಸ್ಕಸ್, ತ್ರಿಪಲ್ ಜಂಪ್, 5000 ಮೀ ಓಟ, ರಿಲೇ 4X100, 4X4X100 ಕಂಚು, ಸ್ವರ್ಣ ರಜತ ಪದಕ ವಿಜೇತೆ.
ಸಮಾಜ ಸೇವೆ: ದೇವಾಡಿಗ ಸಂಘ ಮುಂಬಯಿಯ ಜತೆ ಕಾರ್ಯದರ್ಶಿಯಾಗಿ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿ, ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ಸೇವೆ. ಕರ್ನಾಟಕ ಸಂಘ ಮಾಟುಂಗ, ಕನ್ನಡ ಸಂಘ ಮಾಟುಂಗ, ಗೋರೆಗಾಂವ್ ಕರ್ನಾಟಕ ಸಂಘ, ಸೃಜನ ಬಳಗ, ಮುಂಬಯಿ, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ, ಕಲಾಜಗತ್ತು ಮುಂಬಯಿ ಇದರ ಸದಸ್ಯೆ.

ಹವ್ಯಾಸ: ನೃತ್ಯ ನಾಟಕ, ಕ್ರೀಡೆ, ಏಕಪಾತ್ರಾಭಿನಯ, ಯಕ್ಷಗಾನ, ಓದುವುದು.

ಸಾಧನೆಗೆ ಗೌರವ: 2012ರಲ್ಲಿ ಉಡುಪಿಯ ಪಲಿಮಾರು ಮಠಾಧೀಶರಿಂದ ಸನ್ಮಾನ, 2013ರಲ್ಲಿ ಗೋಲ್ಡನ್ ಜುಬಿಲಿ ಕ್ರೀಡೋತ್ಸವದಲ್ಲಿ ಡಾ. ವೀರಪ್ಪ ಮೊಲಿಯವರಿಂದ ಸನ್ಮಾನ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯರಿಂದ ಎರಡು ಬಾರಿ ಸನ್ಮಾನ, 2014ರಲ್ಲಿ ನೆರೂಲ್ ದೇವಾಡಿಗ ಸಂಘದ ವತಿಯಿಂದ ಸನ್ಮಾನ.

ದೇವಾಡಿಗ ಜನಾಂಗ-ಒಂದು ಸಾಂಸ್ಕೃತಿಕ ಅಧ್ಯಯನ ಶೋಧ ಸಂಪ್ರಬಂಧ: (Clik)


Share