ಅ.11: ದೇವಾಡಿಗ ಸಂಘ ಮಂಗಳೂರು- ದುಬೈ ವಿದ್ಯಾರ್ಥಿವೇತನ - 2019 ಹಾಗೂ ಲ್ಯಾಪ್ ಟಾಪ್ - ವಿವರ ಓದಿ

ಮಂಗಳೂರು: ವರ್ಷಂಪ್ರತಿ ಸಂಘವು ದೇವಾಡಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾಬ್ಯಾಸಕ್ಕಾಗಿ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು, ದೇವಾಡಿಗ ಸಂಘ ದುಬೈ ಮತ್ತು ಡಾ| ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ವಿದ್ಯಾದಾನಿಗಳ ನೆರವಿನಿಂದ ದೇವಾಡಿಗ ಸಮಾಜಕ್ಕೆ  ಸೇರಿದ 2018-19 ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ವಿತರಿಸುತ್ತಿದ್ದು, ಅದಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳಿಗೆ  10,000 ರೂ ನಗದುನ್ನು ನೀಡಿ ಸಮ್ಮಾನ ಮಾಡಲಾಗುವುದು.

ಎಸೆಸೆಲ್ಸಿಯಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗೆ 10,000 ರೂ ನಗದಿನ್ನು ನೀಡಿ ಸಮ್ಮಾನ ಮಾಡಲಾಗುವುದು. ಎಸೆಸೆಲ್ಸಿಯಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗೆ 10,000ರೂ ನಗದಿನ ಜತೆಯಾಗಿ ಹರೀಶ್ ದೇವಾಡಿಗ ದುಬೈ ಅವರ ವತಿಯಿಂದ ಲ್ಯಾಪ್ ಟಾಪ್ ನೀಡಲಾಗುವುದು.

ವರ್ಷಂಪ್ರತಿ ಸಂಘವು ದೇವಾಡಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾಬ್ಯಾಸಕ್ಕಾಗಿ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ.

ಈ ವರ್ಷ ಅ.11ರಂದು ಬೆಳಿಗ್ಗೆ 10 ಗಂಟೆಗೆ ಮಣ್ಣಗುಡ್ಡ ದೇವಾಡಿಗ ಸಮಾಜ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತಿ ವಿದ್ಯಾರ್ಥಿಗಳು ಅರ್ಜಿಯನ್ನು ಮುಖತಃ ಸಂಘದ ಕೇಂದ್ರೀಯ ಕಚೇರಿಗೆ ಬಂದು ಜೂನ್ 30ರ ಒಳಗೆ ಪಡೆಯತಕ್ಕದ್ದು. ಭರ್ತಿ ಮಾಡಿದ ಅರ್ಜಿಯನ್ನು ಜು. 15ರ ಒಳಗೆ ಸಂಘದ ಕಚೇರಿಗೆ ಸಲ್ಲಿಸಬೇಕು ಎಂದು ಮಂಗಳೂರು ದೇವಾಡಿಗರ ಸಂಘದ ಪ್ರಕಟನೆ ತಿಳಿಸಿದೆ.


Share