ದೇವಾಡಿಗ ನವೋದಯ ಸಂಘದ ನೂತನ ಅಧ್ಯಕ್ಷರಾಗಿ ಬಿ.ಆರ್ ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ  ಸುಧೀರ್ ಮುದ್ರಾಡಿ ಆಯ್ಕೆ

 ಮಹಿಳಾ ಘಟಕಕ್ಕೆ ಶ್ರೀಮತಿ ರಾಜೇಶ್ವರಿ ಹರಿ ನೇತೃತ್ವ, ಯುವ ಘಟಕಕ್ಕೆ ಚರಣ್ ಬೈಂದೂರು ಸಾರಥ್ಯ..!!

*ಬೆಂಗಳೂರು,ಜೂನ್ 16*: ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆಯು *ದಿನಾಂಕ 16/06/2019 ರ ಸಂಜೆ 5 ಗಂಟೆಗೆ  ಪದ್ಮನಾಭ ನಗರದ ಪ್ರತಿಷ್ಟಿತ ಹೊಟೇಲ್ ಗ್ರೀನ್ ಗಾರ್ಡೇನಿಯಾದಲ್ಲಿ ನಡೆಯಿತು.

ಪ್ರಪ್ರಥಮವಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಯಾದ ಚರಣ್ ಬೈಂದೂರು ಇವರು ಅಧ್ಯಕ್ಷರು, ಉಪಾಧ್ಯಕ್ಷರು,ಯುವ ಘಟಕದ ಅಧ್ಯಕ್ಷರು ಮತ್ತು ಮಹಿಳಾ ಘಟಕದ ಅಧ್ಯಕ್ಷರನ್ನು ವೇದಿಕೆಗೆ ಬರಮಾಡಿಕೊಂಡರು.  ಸಂಘದ ಸಕ್ರಿಯ ಸದಸ್ಯರಾದ ಕುಮಾರಿ ದಾಮಿನಿ ಕರುಣಾಕರ್ ರವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮವು ಆರಂಭಗೊಂಡಿತು. ಚರಣ್ ಬೈಂದೂರುರವರು ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರಿಗೆ ಮತ್ತು ಸಭೆಯಲ್ಲಿ ಆಸೀನರಾಗಿದ್ದ ಸಮಾಜ ಭಾಂದವರಿಗೆ ಸ್ವಾಗತಿಸಿದರು. 

ನಂತರದಲ್ಲಿ ಸಂಘದ ಸದಸ್ಯರಾದ ಗುರು ದೇವಾಡಿಗರವರು ನಿರ್ಮಿಸಿದ, ದೇವಾಡಿಗ ನವೋದಯ ಸಂಘದ ಎರಡು ವರ್ಷಗಳ ಕಾರ್ಯ ಚಟುವಟಿಕೆಗಳ ಛಾಯಚಿತ್ರದ  ವೀಡಿಯೋವನ್ನು ಪ್ರೊಜೆಕ್ಟರ್ ಪರದೆಯ ಮೂಲಕ ಸಭೆಯಲ್ಲಿದ ಸದಸ್ಯರಿಗೆ ತೋರಿಸಲಾಯಿತು.*

ಇದಾದ ನಂತರ ಪ್ರಧಾನ ಕಾರ್ಯದರ್ಶಿ ಚರಣ್ ರವರು ಸಂಘದ 2017-19ರ ಸಾಲಿನ ಕಾರ್ಯಕ್ರಮಗಳ ವರದಿಯನ್ನು ಪ್ರಕಟಿಸಿದರು. ತದನಂತರ ಖಜಾಂಚಿಯವರಾದ ಶ್ರೀಮತಿ ರಾಜೇಶ್ವರಿ ದೇವಾಡಿಗ ಮತ್ತು ಶ್ರೀಮತಿ ದಿವ್ಯ ಸುಧೀರ್ ರವರು ಸಂಘದ ಹಿಂದಿನ ಎರಡು ವರ್ಷಗಳ ಖರ್ಚು ವೆಚ್ಚ, ಆಯವ್ಯಯಗಳ ವರದಿ ಸಲ್ಲಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ಹರಿ.ಟಿ.ದೇವಾಡಿಗರವರು ಅಧ್ಯಕ್ಷ ಭಾಷಣದಲ್ಲಿ ಸಂಘದ ಸದಸ್ಯರು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾವು ಅಧ್ಯಕ್ಷರಾಗಿದ್ದ ಸಮಯದಲ್ಲಿ ನೀಡಿದ ಬೆಂಬಲ ಮುಂದೆ ಬರುವ ನೂತನ ಅಧ್ಯಕ್ಷರಿಗೂ ನೀಡಬೇಕಾಗಿ ಸದಸ್ಯರಲ್ಲಿ ಮನವಿ ಮಾಡಿದರು. ಸಂಘವನ್ನು ಉನ್ನತ ಮಟ್ಟಕ್ಕೆ ತಂದ ಸರ್ವ ಸದಸ್ಯರಿಗೂ ಧನ್ಯವಾದ ಅರ್ಪಿಸಿದರು. 

ಸಂಘದ ಉಪಾಧ್ಯಕ್ಷರಾದ ಶ್ರೀ ಬಿ.ಆರ್.ದೇವಾಡಿಗರವರು,  ಸಂಘದ ಬೆಳವಣಿಗೆಗೆ ಬೇಕಾದ ಉತ್ತಮ ವಿಚಾರಗಳನ್ನು ಸದಸ್ಯರ ಜೊತೆ ಹಂಚಿಕೊಂಡರು. ಕೊನೆಯಲ್ಲಿ ಯುವ ಘಟಕದ ಅಧ್ಯಕ್ಷರಾದ ಸುಧೀರ್ ದೇವಾಡಿಗರವರ ಧನ್ಯವಾದ ಸಮರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.

ಸಭಾಕಾರ್ಯಕ್ರಮದ ನಂತರ ಮಹಾಸಭೆಯ ಮುಖ್ಯ ಅಂಗವಾದ , 2019-2021ರ ಸಾಲಿನ ಸಂಘದ ಸಮಿತಿಗೆ ಸದಸ್ಯರ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ನೂತನ ಸದಸ್ಯರ ಆಯ್ಕೆಯ ಪ್ರಕ್ರಿಯೆಗೆ ಸಂಘದ ಮುಖ್ಯ ಲೆಕ್ಕ ಪರಿಶೋಧಕರಾದ ಶ್ರೀಯುತ  ಶ್ರೀನಿವಾಸ್ ದೇವಾಡಿಗರವರನ್ನು ನೇಮಿಸಲಾಯಿತು. ಅವರ ಮಾರ್ಗದರ್ಶನದಂತೆ ಹಾಗೂ ಸದಸ್ಯರ ಒಮ್ಮತದೊಂದಿಗೆ ನೂತನ ಕಮಿಟಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು

*2019-2021 ರ ನೂತನ ಕೋರ್ ಕಮಿಟಿ ಆಯ್ಕೆಯಾದ ಸದಸ್ಯರ  ಹೆಸರು ಮತ್ತು ಹುದ್ದೆಯ ವಿವರ :

ಗೌರವ ಅಧ್ಯಕ್ಷರು : ಶ್ರೀ ಹರಿ. ಟಿ.ದೇವಾಡಿಗ*.

ಅಧ್ಯಕ್ಷರು*: ಶ್ರೀ ಬಿ.ಆರ್ ದೇವಾಡಿಗ.
ಉಪಾಧ್ಯಕ್ಷರು*: ಮಂಜುನಾಥ್ ಪಾಂಡೇಶ್ವರ, ಶ್ರೀ ಗೋಪಾಲ ಸೇರಿಗಾರ್ ಮತ್ತು ಶ್ರೀಮತಿ ಗೀತಾ ಮಂಜುನಾಥ್.

ಪ್ರಧಾನ ಕಾರ್ಯದರ್ಶಿ*: ಸುಧೀರ್ ದೇವಾಡಿಗ ಮುದ್ರಾಡಿ.
*ಜೊತೆ ಕಾರ್ಯದರ್ಶಿ*: ಕರುಣಾಕರ್ ದೇವಾಡಿಗ ಮತ್ತು ರಿತೇಶ್ ದೇವಾಡಿಗ.

ಕೋಶಾಧಿಕಾರಿ* : ಶ್ರೀ ಮಂಜುನಾಥ್ ದೇವಾಡಿಗ.
ಜೊತೆ ಕೋಶಾಧಿಕಾರಿ* : ಕೃತಿ ರಿತೇಶ್.

ಸಂಘಟನಾ ಕಾರ್ಯದರ್ಶಿಗಳು* : ವಿಜಿ ಕಾಪಿಕಾಡ್, ಪ್ರಜ್ವಲ್ ಬೈಂದೂರು, ಪ್ರಕಾಶ್ ಬಾರ್ಕೂರು, ಹರೀಶ್ ಶಂಕರನಾರಾಯಣ, ಸತೀಶ್ ದೇವಾಡಿಗ, ಶೇಖರ್ ದೇವಾಡಿಗ, ಶಶಿಧರ್ ಬ್ರಹ್ಮವಾರ ಮತ್ತು ಉಮೇಶ್ ಬಾರ್ಕೂರು.

ಮಾಹಿತಿ ಕಾರ್ಯದರ್ಶಿ* : ಅವಿನಾಶ್ ದೇವಾಡಿಗ ಮುದ್ರಾಡಿ. 

ಯುವ ಘಟಕ:-\

ಅಧ್ಯಕ್ಷರು* : ಚರಣ್ ಬೈಂದೂರು
ಉಪಾಧ್ಯಕ್ಷರು* : ದಿನೇಶ್ ದೇವಾಡಿಗ ಮತ್ತು ಜಗದೀಶ್ ದೇವಾಡಿಗ.

ಪ್ರಧಾನ ಕಾರ್ಯದರ್ಶಿ:* ರವಿಚಂದ್ರ ಬಾರ್ಕೂರು.
ಜೊತೆ ಕಾರ್ಯದರ್ಶಿ* : ಜ್ಯೋತಿ ದೇವಾಡಿಗ ಮತ್ತು ರಿತೇಶ್ ಪಡುಬಿದ್ರಿ.

ಕ್ರೀಡಾ ಕಾರ್ಯದರ್ಶಿ* : ವಿಶಾಲ್ ಪ್ರಮೋದ್.
ಜೊತೆ ಕ್ರೀಡಾ ಕಾರ್ಯದರ್ಶಿ*: ಗುರು ಪ್ರಸಾದ್ ದೇವಾಡಿಗ

ಸಂಘಟನಾ ಕಾರ್ಯದರ್ಶಿಗಳು* : ಗಣೇಶ್ ದೇವಾಡಿಗ ಕಂಚಿಕಾನ್, ಯೋಗೀಶ್ ದೇವಾಡಿಗ ಮುಚ್ಚೂರ್ , ಸೂರಜ್ ದೇವಾಡಿಗ, ಅಭಿನಯ್ ದೇವಾಡಿಗ, ಅಭಿಷೇಕ್ ದೇವಾಡಿಗ ಬೈಂದೂರು.

 * ಮಹಿಳಾ ಘಟಕ* ```

ಅಧ್ಯಕ್ಷರು : ಶ್ರೀಮತಿ ರಾಜೇಶ್ವರಿ ದೇವಾಡಿಗ.
ಉಪಾಧ್ಯಕ್ಷರು: ಪುಷ್ಪ ಉಮೇಶ್ ಮತ್ತು ಚಿತ್ರಲೇಖಾ ದೇವಾಡಿಗ.

ಪ್ರಧಾನ ಕಾರ್ಯದರ್ಶಿ: ದಿವ್ಯ ಸುಧೀರ್.
ಜೊತೆ ಕಾರ್ಯದರ್ಶಿ : ತ್ರಿವೇಣಿ ಕರುಣಾಕರ್ ಮತ್ತು ಸುಪ್ರಿಯಾ ಪ್ರವೀಣ್.

ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಸಾಧನ ಪ್ರಕಾಶ್.
ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ: ರಮಿತ ಕಿರಣ್

ಸಂಘಟನಾ ಕಾರ್ಯದರ್ಶಿಗಳು : ಐಶ್ವರ್ಯ ಪ್ರಸಾದ್, ದಿವ್ಯಾ ಉಮೇಶ್ ದೇವಾಡಿಗ, ರಶ್ಮಿ ದೇವಾಡಿಗ, ಲಕ್ಷ್ಮಿ ದೇವಾಡಿಗ,  ಹಂಸಿಕಾ, ಲೀಲಾ ದೇವಾಡಿಗ ಮತ್ತು ದಾಮಿನಿ ಕರುಣಾಕರ್.

ಕಾನೂನು ಸಲಹಾಗಾರರು: ಶ್ರೀನಿವಾಸ್ ದೇವಾಡಿಗ ಮತ್ತು ಸೂರ್ಯಕಾಂತ್ ದೇವಾಡಿಗ.

ಚುನಾವಣೆ ಪ್ರಕ್ರಿಯೆ ಮುಗಿದ ನಂತರದಲ್ಲಿ ಹಿಂದಿನ ಅಧ್ಯಕ್ಷರಾದ ಹರಿ. ಟಿ.ದೇವಾಡಿಗರವರು  ನೂತನ ಅಧ್ಯಕ್ಷರಾದ ಶ್ರೀ ಬಿ.ಆರ್ ದೇವಾಡಿಗರವರನ್ನು ಅಭಿನಂದಿಸಿ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು ಜೊತೆಗೆ ಪ್ರಧಾನ ಕಾರ್ಯದರ್ಶಿಯಾದ ಚರಣ್ ಬೈಂದೂರುರವರು ನೂತನ ಪ್ರಧಾನ ಕಾರ್ಯದರ್ಶಿಯಾದ ಸುಧೀರ್ ದೇವಾಡಿಗ ಮುದ್ರಾಡಿಯವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು. ತದನಂತರ ನೂತನ ಅಧ್ಯಕ್ಷರಾದ ಬಿ‌.ಆರ್ ದೇವಾಡಿಗರವರು ಸಂಘವನ್ನ ಉದ್ದೇಶಿಸಿ ಮಾತನಾಡಿ ತಮ್ಮನ್ನು ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು. 

ತದನಂತರದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರು ಮತ್ತು ಗೌರವ ಅಧ್ಯಕ್ಷರಾದ ಶ್ರೀ ಹರಿ.ಟಿ ದೇವಾಡಿಗರವರ ಹುಟ್ಟು ಹಬ್ಬ ಮತ್ತು 25ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುದರ ಮೂಲಕ ಸಂಭ್ರಮದಿಂದ ಆಚರಿಸಲಾಯಿತು ಮತ್ತು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.

ಮಹಾಸಭೆಯ ಕೊನೆಯಲ್ಲಿ ಸಮಾಜ ಭಾಂದವರಿಗೆ ರುಚಿರುಚಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಉಸ್ತುವಾರಿಯನ್ನು ಮಂಜುನಾಥ್ ಪಾಂಡೇಶ್ವರ್ ವಹಿಸಿಕೊಂಡಿದ್ಧರು. ಅಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಹೈ ವೋಲ್ಟೇಜ್ ಕ್ರಿಕೆಟ್ ಪಂದ್ಯಾಟ ಇದ್ದ ಕಾರಣ ಸದಸ್ಯರಿಗೆ ವಿಶೇಷವಾಗಿ ದೊಡ್ಡ ಪರದೆಯ ಮೂಲಕ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರ ಜವಾಬ್ದಾರಿಯನ್ನು  ಫ್ಯೂಚರ್‌ ಟ್ಯಾಬ್ ಮಾಲಿಕರಾದ ರಿತೇಶ್ ದೇವಾಡಿಗರವರು ವಹಿಸಿಕೊಂಡಿದ್ದರು. 90ಕ್ಕೂ ಹೆಚ್ಚು ಸಭೆಗೆ ಹಾಜರಾಗಿದ್ದ ಸದಸ್ಯರು ಸವಿಯಾದ ಊಟದ ಜೊತೆಗೆ ಕ್ರಿಕೆಟ್ ಮ್ಯಾಚ್ ನ ಆನಂದವನ್ನು ಸವಿದರು. ಕೊನೆಯಲ್ಲಿ ಮಹಾ ಸಭೆಗೆ ಹಾಜರಿದ್ದ ಸದಸ್ಯರಿಗೆ ಧನ್ಯವಾದ ಸಮರ್ಪಿಸಿ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು.

ವರದಿ:
ಅವಿನಾಶ್ ದೇವಾಡಿಗ ಮುದ್ರಾಡಿ.
ಮಾಹಿತಿ ಕಾರ್ಯದರ್ಶಿ.
ದೇವಾಡಿಗ ನವೋದಯ ಸಂಘ ®ಬೆಂಗಳೂರು


Share