ಎಂಜಿಎಂ ಕಾಲೇಜಿನ ಹಳೆವಿದ್ಯಾರ್ಥಿನಿ ರಶ್ಮಿತಾ ಗೆ ಪಿಎಚ್‌ಡಿ ಪದವಿ

ಉಡುಪಿ, ಜು.10: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಭೌತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ರಶ್ಮಿತಾ ಅವರು ಎಂಐಟಿಯ ಭೌತಶಾಸ್ತ್ರ ವಿಭಾಗದ ಡಾ| ಮಹೇಶ್‌ ಎಂ.ಜಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'Investigation on CdS/ZnS Bi-Layer window to improve the efficiency of cdTe based solar cells' ಮಹಾಪ್ರಬಂಧಕ್ಕೆ ಮಾಹೆ ವಿ.ವಿ. ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ರಶ್ಮಿತಾ ಅವರು ಉಡುಪಿ ಎಂಜಿಎಂ ಕಾಲೇಜಿನ ಹಳೆವಿದ್ಯಾರ್ಥಿನಿ ಹಾಗೂ ಸಗ್ರಿಯ ಕೇಶವ ದೇವಾಡಿಗ - ಪ್ರೇಮಾ ದಂಪತಿಯ ಪುತ್ರಿ.


Share