ಉಡುಪಿ: ಡಾ| ಜೆ.ಸಿ ದೇವಾಡಿಗರಿಗೆ ಡಾ| ಬಿ.ಸಿ.ರಾಯ್  ಪ್ರಶಸ್ತಿ

ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು -ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಡಾ। ಪಿ.ಎಸ್ ಸೀತಾರಾಮ ಭಟ್                  

ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಮಾರ್ಗ.  ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾಧ್ಯಾಪಕ, ಖ್ಯಾತ ಹೃದಯ ರೋಗ ಚಿಕಿತ್ಸಕ, ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ। ಪಿ.ಎಸ್ ಸೀತಾರಾಮ ಭಟ್ ಅಭಿಪ್ರಾಯ ಪಟ್ಟರು. ಅವರು ಭಾರತೀಯ ವೈದ್ಯಕೀಯ ಸಂಘ, ಉಡುಪಿ ಶಾಖೆ ಹೋಟೆಲ್ ಕಿದಿಯೂರ್ ನಲ್ಲಿ ಆಯೋಜಿಸಿದ್ದ  ವೈದ್ಯರ ದಿನಾಚರಣೆ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು. 

ಈ ವರ್ಷದ ಡಾ| ಬಿ.ಸಿ.ರಾಯ್ ಪ್ರಶಸ್ತಿಯನ್ನು ಖ್ಯಾತ ವೈದ್ಯರಾದ ಡಾ|ಎಂ.ಎಸ್  ಉರಾಳ, ಡಾ। ದಮಯಂತಿ ಕೆ.ಎಂ., ಡಾ| ಜೆ.ಸಿ ದೇವಾಡಿಗ ಇವರುಗಳಿಗೆ ಕೊಡ ಮಾಡಲಾಯಿತು.

ಅಧ್ಯಕ್ಷರ  ವಿಶೇಷ ಪ್ರಶಸ್ತಿಯನ್ನು ಡಾ। ಕೇಶವ ನಾಯಕ್ ಇವರಿಗೆ ನೀಡಲಾಯಿತು. 

ಈ ಸಂಧರ್ಭದಲ್ಲಿ ವೃತ್ತಿ ಮಿತ್ರರಿಗೆ ನಡೆಸಿದ ಒಳಾಂಗಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.    

ಕಾರ್ಯದರ್ಶಿ ಡಾ| ಕೃಷ್ಣಾನಂದ ಮಲ್ಯ, ಸಹ ಖಜಾಂಜಿ ಡಾ। ರಾಜಗೋಪಾಲ ಭಂಡಾರಿ ಉಪಸ್ಥಿತರಿದ್ದರು. ಉಡುಪಿ ಕರಾವಳಿ  ಐಎಮ್ಎ ಅಧ್ಯಕ್ಷ  ಡಾ। ಗುರುಮೂರ್ತಿ ಭಟ್ ಸ್ವಾಗತಿಸಿದರು. ಡಾ| ಗಣಪತಿ ಹೆಗ್ಡೆ ವಂದಿಸಿದರು. ಡಾ| ರಮಾ  ಎ ಶೆಟ್ಟಿ ನಿರೂಪಿಸಿದರು.  ಸಭಾ  ಕಾರ್ಯಕ್ರಮದ ಬಳಿಕ ಡಾ| ಅಭಿಷೇಕ್ ಕೊರಡ್ಕಲ್ ಅವರಿಂದ ಸಂಗೀತ ರಸಮಂಜರಿ   ಸಂಪನ್ನಗೊಂಡಿತು.


Share