ಶ್ರೀ ಶರತ್ ಕುಮಾರ್ ರವರಿಗೆ ಅತ್ಯುತ್ತಮ ಯುವ ದೇವಾಡಿಗ ಉದ್ಯಮಶೀಲ -2019 ಪ್ರಶಸ್ತಿ

ಮಂಗಳೂರು: ಡಾ.ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರು ಇದರ ಆಶ್ರಯದಲ್ಲಿ ದುಬೈಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿ ಗಾರ್ರ ಹೆಸರಿನಲ್ಲಿ 2019ರ ಸಾಲಿನ ಅತ್ಯುತ್ತಮ ಯುವ ದೇವಾಡಿಗ ಉದ್ಯಮಶೀಲ ಪ್ರಶಸ್ತಿಯನ್ನು ಶ್ರೀ ಶರತ್ ಕುಮಾರ್ರವರಿಗೆ ನೀಡಲಾಗುವುದೆಂಬುದಾಗಿ ಯುವ ದೇವಾಡಿಗ ಉದ್ಯಮ ಶೀಲ 2019 ಪ್ರಶಸ್ತಿ ಆಯ್ಕೆ ಸಮಿತಿಯು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಮೂಲತ: ಪುತ್ತೂರಿನಲ್ಲಿ ಅನಿಸಿದ 38 ವರ್ಷ ಪ್ರಾಯದ ಶ್ರೀ ಶರತ್ ಕುಮಾರ್ರವರು ಸಿವಿಲ್ ಇಂಜಿನಿಯರ್ ವ್ಯಾಸಂಗ ಮಾಡಿ Karekar & Associates, Bengalure ನಲ್ಲಿ 2 ವರ್ಷ ಕೆಲಸ ಮಾಡಿ ನಂತರ Shadow Architect ಎಂಬ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಉದ್ಯಮವನ್ನು ಸ್ಥಾಪಿಸಿ ನಂತರ ಮಂಗಳೂರಿನಲ್ಲಿ Susha Architect & Engineer ಎಂಬ ಹೆಸರಿನಲ್ಲಿ ಮಂಗಳೂರು ಸಿಟಿ ಕಾರ್ಪೂರೇಶನ್ ಕಟ್ಟಡಗಳ ನಿರ್ಮಾಣದ ಪರವಾನಿಗೆ ಪಡೆದುದು ಮಾತ್ರವಲ್ಲದೆ PWD, Posts & Inland Water Transport ಇಲಾಖೆಯಲ್ಲಿ ಕೂಡಾ ಪರವಾನಿಗೆ ಪಡೆದು ಗುತ್ತಿಗೆದಾರರಾಗಿರುತ್ತಾರೆ.

ಇವರು 50ಕ್ಕೂ ಮಿಕ್ಕಿ ಯುವಕರಿಗೆ ಉದ್ಯೋಗ ಅವಕಾಶ ಮಾಡಿಕೊಟ್ಟಿರುತ್ತಾರೆ.

ಸುಮಾರು 500ಕ್ಕೂ ಮಿಕ್ಕಿ ವಾಸ್ತವ್ಯದ ಮನೆಗಳನ್ನು 25ಕ್ಕೂ ಮಿಕ್ಕಿ ಕಮರ್ಶಿಯಲ್ ಕಟ್ಟಡಗಳನ್ನು ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಶ್ರೀ ಸುಬ್ರಹ್ಮಣ್ಯ ಮಠ, ಬಿಸಿ ರೋಡ್ನ ಹತ್ತಿರ ಮಸೀದಿ, ಬೆಳ್ತಂಗಡಿ ಚರ್ಚ್ ಮೊದಲಾದವುಗಳನ್ನು ಬಹಳ ಚೆನ್ನಾಗಿ ಅಲ್ಪಾವಧಿಯಲ್ಲಿ ನಿರ್ಮಿಸಿ ಎಲ್ಲಾ ಮತದವರಿಂದಲೂ ಪ್ರಶಂಶೆಯನ್ನಿ ಪಡೆದಿರುವ ಇವರು ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಗಾಂಧಿನಗರ ಇದರ  ಸಕ್ರೀಯ ಸಮಿತಿ ಸದಸ್ಯರಾಗಿರುತ್ತಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅ.11 ರಂದು ಮಂಗಳೂರಲ್ಲಿ ಜರುಗಲಿದೆ. 


Share