ಬಹು ನಿರೀಕ್ಷೆಯ 'ಬೆಲ್ಚಪ್ಪ' ತುಳು ಚಲನಚಿತ್ರ '#ಆಗಸ್ಟ್ 9 ರಂದು ಬೆಳ್ಳಿ ತೆರೆಗೆ

ಉಡುಪಿ: ಜಯದುರ್ಗ ಪ್ರೊಡಕ್ಷನ್ ನಲ್ಲಿ ಮೂಡಿ ಬಂದ ಬೆಲ್ಚಪ್ಪ  ತುಳು ಚಲನಚಿತ್ರ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದೆ. ಆಗಸ್ಟ್ 9 ರಂದು ಮಂಗಳೂರಿನ ಜ್ಯೋತಿ, ಉಡುಪಿಯ ಕಲ್ಪನಾ, ಕಾರ್ಕಳದ ಪ್ಲಾನೆಟ್, ಮೂಡಬಿದ್ರೆಯ ಅಮರಶ್ರೀ  ಹಾಗೂ ಮಲ್ಟಿಪ್ಲೆಕ್ಸ್  ಚಿತ್ರಮಂದಿರಗಳಾದ  ಭಾರತ್ ಸಿನೆಮಾಸ್, ಪಿ.ವಿ.ಆರ್, ಸಿನಿಪೊಲೀಸ್, ಮಣಿಪಾಲದ ಆಯನಾಕ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.

ಬೆಲ್ಚಪ್ಪ ಚಿತ್ರಕ್ಕೆ ಕಥೆ- ಚಿತ್ರಕಥೆ-ಸಂಭಾಷಣೆ- ನಿರ್ದೇಶನವನ್ನು ರಜನೀಷ್ ದೇವಾಡಿಗ ಮಾಡಿದ್ದು ಚಿತ್ರದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದಾರೆ. ತುಳುನಾಡಿನ ಮಾಣಿಕ್ಯ ಹಾಸ್ಯ ಚಕ್ರವರ್ತಿ ಅರವಿಂದ್ ಬೋಳಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಚಿತ್ರದ ಕೇಂದ್ರ ಬಿಂದುವಾಗಿದ್ದಾರೆ. ನಾಯಕಿಯಾಗಿ ಯಶಸ್ವಿ ದೇವಾಡಿಗ, ಸುಕನ್ಯಾ ಮುಖ್ಯ ಪಾತ್ರದಲ್ಲಿದ್ದಾರೆ. ಹಾಸ್ಯ ಕಲಾವಿದರಾದ ಉಮೇಶ್ ಮಿಜಾರು, ದೀಪಕ್ ರೈ ಪಾಣಾಜೆ, ಪ್ರವೀಣ್ ಮರ್ಕಮೆ, ಯಜ್ನೇಶ್ ಹಾಸ್ಯಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಸಂಗೀತ ನಿರ್ದೇಶನವನ್ನು ವಿಕ್ರಂ ಸೆಲ್ವ ಮಾಡಿದ್ದಾರೆ. ಸಾಹಿತ್ಯ ಹಾಗೂ ರಾಗ ಸಂಯೋಜನೆಯನ್ನು ಭರತ್ ಕುಮಾರ್ ಇಂದ್ರಾಳಿ ಮಾಡಿದ್ದು ಛಾಯಾಗ್ರಹಣವನ್ನು ಬಾಲಿವುಡ್ ಖ್ಯಾತಿಯ ಲಕ್ಷೀಶ್ ಶೆಟ್ಟಿ ನಿರ್ವಹಿಸಿದ್ದಾರೆ. ಸಾಹಸ ಕೌರವ ವೆಂಕಟೇಶ್, ಸಂಕಲನದಲ್ಲಿ ಶ್ರೀಧರ್, ಸಹ ನಿರ್ದೇಶನ ಸುಬ್ಬು ಮೂಡಬಿದಿರೆ, ಸಂತೋಷ್ ಶೆಟ್ಟಿ ಮಿಜಾರ್, ರಾಕೇಶ್ ದೇವಾಡಿಗ, ದಿನೇಶ್ ಹಿರಿಯಡ್ಕ, ಸಂಜು ಮಿಜಾರ್ ದುಡಿದಿದ್ದಾರೆ.

ಈಗಾಗಲೇ ಟ್ರೈಲರ್ ಬಿಡುಗಡೆಯನ್ನ ಚಿತ್ರ ತಂಡ ಮಾಡಿದ್ದು ತುಳುನಾಡಿನಾದ್ಯಾಂತ ಸಂಚಲನ ಮೂಡಿಸಿದೆ. ಕೋಸ್ಟಲ್ ವುಡ್ ನಲ್ಲೇ 14 ದಿನಗಳಲ್ಲಿ ಹಾಡು ಸಹಿತ ಚಿತ್ರೀಕರಣ ಮುಗಿಸಿದ ದಾಖಲೆಯನ್ನು ಬೆಲ್ಚಪ್ಪ ಚಿತ್ರತಂಡ ಮಾಡಿದೆ.


Share