ಉಡುಪಿ: 'ಬೆಲ್ಚಪ್ಪ’ ತುಳು ಚಲನ ಚಿತ್ರ ಪ್ರದರ್ಶನ ಉದ್ಘಾಟನೆ - ವಿಮರ್ಶೆ

ಕೋಸ್ಟಲ್ ವುಡ್ ನ ಡೀಸೆಂಟ್ ಚಿತ್ರ: ಬೆಲ್ಚಪ್ಪ

ಎಲ್ಲೂ ಅಪಹಾಸ್ಯ ವಿಲ್ಲ...ಕಥೆಗೆ ಮೋಸವಿಲ್ಲ...ಕೆಟ್ಟ ಹಾಸ್ಯ ಸಂಭಾಷಣೆ ಇಲ್ಲ...ಹೀಗೆ ಇಲ್ಲದವುಗಳ ನಡುವೆ ಎಲ್ಲವೂ ಉಂಟು ಎಂಬಂತೆ ಉತ್ತಮ ಚಿತ್ರ ಒಂದು ಕೋಸ್ಟಲ್ ವುಡ್ ನಲ್ಲಿ ಸದ್ದು‌ಮಾಡುತ್ತಿದೆ. ಯಸ್ ... ಜಯದುರ್ಗಾ ಪ್ರೊಡೆಕ್ಷನ್ ನಲ್ಲಿ  ಯುವ ನಿರ್ದೇಶಕ ರಜನೀಶ್ ದೇವಾಡಿಗ ನಿರ್ದೇಶನದಲ್ಲಿ ಮೂಡಿ ಬಂದ ಬೆಲ್ಚಪ್ಪ ಇಂದು ಉಡುಪಿ - ಮಂಗಳೂರಿನಲ್ಲಿ ಬಿಡುಗಡೆ ಆಗಿದೆ. ತುಳುವಿನ 90ರಷ್ಟು ಸಿನೆಮಾ ನೋಡಿದ್ದೇನೆ. ಹೆಚ್ಚಿನ ಸಿನೆಮಾಗಳು ಕಾಮಿಡಿಗೋಸ್ಕರನೇ ದೃಶ್ಯ ಸೃಷ್ಟಿಸಿದರೆ, ಬೆಲ್ಚಪ್ಪ ಮಾತ್ರ ಕಥೆಗೋಸ್ಕರ ಕಾಮಿಡಿ ಪೋಣಿಸುತ್ತಾ ಸಾಗುತ್ತದೆ. ಅರವಿಂದ ಬೋಳಾರ್, ದೀಪಕ್ ರೈ ಪಾಣಾಜೆ, ಪ್ರವೀಣ್ ಮರ್ಕಮೆಯ ಹಾಸ್ಯಗಳ ತುಣುಕುಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿವೆ‌ . ಇನ್ನು ಉಮೇಶ್ ಮೀಜಾರ್ ಹಾಸ್ಯದೊಂದಿಗೆ ಒಂದು ಉತ್ತಮ ಮನೆ ಕೆಲಸದವನ ಪಾತ್ರಕ್ಕೆ ಜೀವ ತುಂಬಿದ್ದು ತುಂಬಾನೆ ಇಷ್ಟವಾಯಿತು. ಮೊದಲೇ ಹೇಳಿದ ಹಾಗೆ ಕಥೆಗೆ ಈ ಸಿನೆಮಾದಲ್ಲಿ ಮೋಸವಾಗಿಲ್ಲ...ಹಾಸ್ಯ ಸಾಕಷ್ಟಿದೆ...ಹಾಸ್ಯವನ್ನು ಕೆಟ್ಟದಾಗಿ ಬಿಂಬಿಸಿ ಪ್ರೇಕ್ಷಕರು ತಲೆತಗ್ಗಿಸುವಂತೆ ಎಲ್ಲೂ ಮಾಡಿಲ್ಲ...ಒಂದರ್ಥದಲ್ಲಿ ಇದು ಕಂಪ್ಲೀಟ್ ಪ್ಯಾಮಿಲಿ ಓರಿಯೆಂಟೆಡ್ ಸಿನೆಮಾ... ಪ್ರತೀ ಸನ್ನಿವೇಶಗಳು ಸಮಾಜಕ್ಕೊಂದು ಒಳ್ಳೆಯ ಸ‌ಂದೇಶವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ದೀಪಕ್ ರೈ ಪಾಣಾಜೆ ಪಾತ್ರ ತುಂಬಾನೆ ಹೃದಯಮಿಡಿಯುತ್ತದೆ. ಇನ್ನು ರಜನೀಶ್ ನಟನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಯಶಸ್ವಿನಿ ದೇವಾಡಿಗ, ಸುಕನ್ಯ ಹೀಗೆ ಅನೇಕ ಯುವ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ‌. ಅರವಿಂದ ಬೋಳಾರ್ ಪತ್ನಿ ಸುಕನ್ಯಾಗೆ ಒಂದೇ ಒಂದು ಡೈಲಾಗ್ ಇಲ್ಲ... ಡೈಲಾಗ್ ಇರದೇ ಚಿತ್ರಕಥೆ ಮಾಡುವುದು, ದೃಶ್ಯ ತಯಾರಿಸುವುದು ತುಂಬಾನೇ ಕಷ್ಟ...ಆದ್ರೆ ಇಲ್ಲಿ ಮಾತ್ರ ಅಂತಹ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ...ಒಟ್ಟಾರೆ ಹೇಳುವುದಾದರೆ ಇದೊಂಸು ತುಳುವಿನ ಉತ್ತಮ ಸಿನೆಮಾ...ತುಳು ಪ್ರೇಮಿಗಳು ನೋಡಲೇಬೇಕಾದ ಸಿನೆಮಾ...

ಸಂತೋಷ್ ಸರಳೇಬೆಟ್ಟು..
ರಿಪೋರ್ಟರ್


Share