ಕರ್ನಾಟಕ ರಾಜ್ಯ ದೇವಾಡಿಗ ಸಂಘ ಹಾಗೂ ದುಬೈ ದೇವಾಡಿಗ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ

ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ : ಹರೀಶ್ ಶೇರಿಗಾರ್

ಮಂಗಳೂರು,ಆಗಸ್ಟ್ ೧೧: ಪ್ರತಿಯೊಬ್ಬರ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಠಿಣ ಪರಿಶ್ರಮದ ಮೂಲಕ ಜೀನದಲ್ಲಿ ಸಾಧನೆ ಮಾಡಿ ಫೋಷಕರ ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿಯನ್ನಾಗಿ ಮಾಡಬೇಕು ಎಂದು ದುಬೈಯ ಹೆಸರಾಂತ ಉದ್ಯಮಿ, ಅಕ್ಮೆ ಬಿಲ್ದಿಂಗ್ ಮೆಟಿರಿಯಲ್ಸ್ ಟ್ರೆಡಿಂಗ್ ಎಲ್ ಎಲ್ ಸಿ ದುಬೈ ಇದರ ಆಡಳಿತ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ) ಮಂಗಳೂರು ಹಾಗೂ ದೇವಾಡಿಗ ಸಂಘ ದುಬೈ, ಡಾ.ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ಸಂಯುಕ್ತ ಅಶ್ರಯದಲ್ಲಿ ನಗರದ ಮಣ್ಣಗುಡ್ಡ - ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಸಮಾಜ ಭವನದಲ್ಲಿ ಬಾನುವಾರ ನಡೆದ ವಿರ್ಥಿವೇತನ ವಿತರಣಾ ಮತ್ತು ಪ್ರತಿಭಾ ಪುರಸ್ಕಾರ, ಅತ್ಯುತ್ತಮ ದೇವಾಡಿಗ ಯುವ ಉದ್ಯಮಶೀಲ -2019, ಅತ್ಯುತ್ತಮ ದೇವಾಡಿಗ ಯುವ ಕ್ರೀಡಾಪಟು-2019೧೯, ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಧನೆ ಮಾಡುವಾಗ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಅದನ್ನು ಎದುರಿಸಿ ಸತತ ಪ್ರಯತ್ನಗಳ ಮೂಲಕ ಸಾಧನೆ ಮಾಡಬೇಕು ಎಂದು ಹೇಳಿದ ಹರೀಶ್ ಶೇರಿಗಾರ್ ಅವರು ತಮ್ಮ ಸಾಧನೆಯ ಯಶಸ್ಸಿಗೆ ಉತ್ತೇಜನ ನೀಡಿ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ  ಅಣ್ಣಪ್ಪ ಪೈ ಅವರು ಮಾತನಾಡಿ, ಇಂದಿನ ಯುವಪೀಳಿಗೆಗಳ ಏಳಿಗೆಗೆ ಹಿರಿಯರ ಪಾತ್ರ ಕೂಡ ಖಂಡಿತವಾಗಿಯೂ ಅಗತ್ಯವಿದೆ. ಯಾವೂದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾರುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸ ಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ಡಾ.ದೇವಾರಜ್ ಕೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳು ತಮಗೆ ಸಿಕ್ಕಿದ ಉತ್ತಮ ಅವಕಾಶಗಳನ್ನು ಉಪಯೋಗಿಸಿಕೊಂಡು ಸಾಧನೆ ಮಾಡುವ ಮೂಲಕ ಸಮಾಜದಲ್ಲಿ ಗೌರಯುತ ವ್ಯಕ್ತಿಯಾಗಿ ಬಾಳಬೇಕು. ಮಾತ್ರವಲ್ಲದೇ ಸಮಾಜಕ್ಕೆ ನಮ್ಮಿಂದ ಸಾಧ್ಯವಾದಷ್ಟು ಸೇವೆ ಮಾಡಬೇಕು. ಸೇವೆ ಮಾಡುವ ಮೂಲಕ ನಮ್ಮ ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಖಾತ್ಯ ನ್ಯೊರೋ ಸರ್ಜನ್ ಡಾ.ಕೆ.ವಿ.ದೇವಾಡಿಗ,  ಶಿವಮೊಗ್ಗ ಕುವೆಂಪು ವಿವಿಯ ಮಾಜಿ ಕುಲಪತಿ ಡಾ.ಬಿ.ಎಸ್.ಶೇರಿಗಾರ್, ದೇವಾಡಿಗ ಸಂಘ ದುಬೈ ಇದರ ಅಧ್ಯಕ್ಷ ದಿನೇಶ್ ಕುಮಾರ್ ದೇವಾಡಿಗ, ಶ್ರೀ ಮಂಜುನಾಥ ಕ್ಷೇತ್ರ ಕದ್ರಿ ಇದರ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ್ ದೇವಾಡಿಗ,ಮಂಗಳಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜೆ.ದೇವಾಡಿಗ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಪ್ರಶಸ್ತಿ ಪ್ರಧಾನ - ಗೌರವ ಸಮ್ಮಾನ 

ಕಾರ್ಯಕ್ರಮದಲ್ಲಿ  ಡಾ.ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಯುವ ಸಾಧಕ ಶರತ್ ಕುಮಾರ್ ಅವರಿಗೆ ಅತ್ಯುತ್ತಮ ದೇವಾಡಿಗ ಯುವ ಉದ್ಯಮಶೀಲ ಪ್ರಶಸ್ತಿ - 2019 ಅನ್ನು ಪ್ರಧಾನ ಮಾಡಿ ಗೌರವಿಸಲಾಯಿತು. ಅತ್ಯುತ್ತಮ ದೇವಾಡಿಗ  ಯುವ ಕ್ರೀಡಾಪಟು ಪ್ರಶಸ್ತಿ - 2019ಗೆ ಭಾಜರಾಗಿದ್ದ ಕ್ರೀಡಾಪಟು ಅರವಿಂದ್ ಎ ದೇವಾಡಿಗ ಇವರು ಕಾರಣಾಂತರದಿಂದ ಉಪಸ್ಥಿತರಾಗಿದ್ದರು.  

ಹರೀಶ್ ಶೇರಿಗಾರ್ ಅವರಿಂದ ಲ್ಯಾಪ್‌ಟಾಪ್ ವಿತರಣೆ :

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿಧ್ಯಾರ್ಥಿನಿ ಎಸ್‌ಎಸ್‌ಎಲ್‌ಸಿ ಟಾಪರ್ (623 ಅಂಕ ) ಅಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ವಿದ್ಯಾಶ್ರೀ ಇವರಿಗೆ ಹರೀಶ್ ಶೇರಿಗಾರ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಲ್ಯಾಪ್‌ಟಾಪ್ ನೀಡಿ ಗೌರವಿಸಿದರು. ಶ್ರೀಯುತ ಶೇರಿಗಾರ್ ಅವರು ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿ ವೇತನ ಸಮಾರಂಭದಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುತ್ತ ಬಂದಿರುತ್ತಾರೆ.

ಮಾಜಿ ಯೋಧರಿಗೆ ಗೌರವ :

ಮಾಜಿ ಯೋಧರುಗಳಾದ ಉಡುಪಿಯ ದಿವಾಕರ್ ದೇವಾಡಿಗ, ಕಾಟಿಪಳ್ಳ ಸೋಮಪ್ಪ ದೇವಾಡಿಗ, ಕೃಷ್ಣಪುರ ಜೆ.ಕೆ ಸುಂದರ್ ದೇವಾಡಿಗ ಇವರಿಗೆ ಗೌರವ- ಸಮ್ಮಾನ ನೆರವೇರಿತು, ಮಾಜಿ ಯೋಧ ದುಬೈ ದಿನೇಶ್ ಶೇರಿಗಾರ್ ಅವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರ ಸಹೋದರ ಹರೀಶ್ ಶೇರಿಗಾರ್ ಗೌರವ ಸಮ್ಮಾನವನ್ನು ಸ್ವೀಕರಿಸಿದರು. 

ಸಾಧಕರಿಗೆ ಸನ್ಮಾನ :

ಶೈಕ್ಷಣಿಕ ವಿಷಯದಲ್ಲಿ ಪಿ.ಎಚ್.ಡಿ ಪಡೆದ  ಕೊಂಚಾಡಿ ಶ್ರಿಮತಿ ಲೋಲಾಕ್ಷಿ ಮಹೇಶ್, ಕುಮಾರಿ ರಶ್ಮಿತಾ ಕೇಶವ ದೇವಾಡಿಗ ಮತ್ತು ಕುಮಾರಿ ದೀಕ್ಷಾ ಜೆ.ದೇವಾಡಿಗ,(ಸಿಎ), 2018-19ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿಧ್ಯಾರ್ಥಿನಿ ಕುಮಾರಿ ವಿದ್ಯಾಶ್ರೀ. ಯು ಹಾಗೂ 2018-19ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿಧ್ಯಾರ್ಥಿನಿ  ಕುಮಾರಿ ಅರ್ಚನಾ ಇವರನ್ನು ಗೌರವಿಸಲಾಯಿತು.

ವಿದ್ಯಾರ್ಥಿ ವೇತನ ವಿತರಣೆ :

ಕಾರ್ಯಕ್ರಮದಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳಿಸಿದ ಸುಮಾರು ೪೦೦ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 5 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಸುಂದರ್ ಮೊಯ್ಲಿ ಸ್ವಾಗತಿಸಿದರು. ರೋಹಿತಾಶ್ವ ಮರೋಳಿ ಹಾಗೂ ಯಶ್ವಿತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ದೇವಾಡಿಗ ಸಂಘ ದ ಉಪಾಧ್ಯಕ್ಷ ಅಶೋಕ್ ಮೊಯಿಲಿ ವಂದಿಸಿದರು. 

ಕೋಶಾಧಿಕಾರಿ ಶ್ರೀಮತಿ ಗೀತಾ ವಿ. ಕಲ್ಯಾಣ್‌ಪುರ್, ಜೊತೆಕಾರ್ಯದರ್ಶಿ,ಬಿ.ಹೇಮಂತ್ ಕುಮಾರ್ ,ಕೆ..ಶ್ರೀಧರ್ ಮೊಯಿಲಿ, ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ್ ಶೇರಿಗಾರ್, ರಂಜನ್ ದಾಸ್.ಕೆ, ಸತೀಶ್. ಡಿ, ಯುವ ಸಂಘಟನೆ ಅಧ್ಯಕ್ಷ ಧನ್‍ರಾಜ್ ಎನ್.ಡಿ, ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಉಮಾ ರವಿರಾಜ್,  ಮಹಿಳಾ ಸಂಘಟನೆಯ ಕಾರ್ಯದರ್ಶಿ ಶ್ರೀಮತಿ ವೀಣಾ ಗಣೇಶ್, ಕಾರ್ಯಕ್ರಮ ಸಂಯೋಜನೆಕಾರರುಗಳಾದ, ಶ್ರೀಮತಿ ಕುಸುಮ.ಎಚ್ .ದೇವಾಡಿಗ, ಉದಯ ಕುಮಾರ್ ಕಣ್ವತೀರ್ಥ, ಶ್ರೀಮತಿ ಮಮತಾ ದೇವಾಡಿಗ, ಲೋಕಾನಂದ ದೇರೆಬೈಲು ಹಾಗೂ ಕೇಂದ್ರಿಯ ಸಮಿತಿ ಮತ್ತು ಮಹಿಳಾ ಹಾಗೂ ಯುವ ಸಂಘಟನೆಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Share