ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾಕೆರೆ (ಉತ್ತರ) ಶಾಲೆಗೆ ಸಮವಸ್ತ್ರ ಕೊಡುಗೆ

ನಾಗೂರು: ದೇವಾಡಿಗ ಮಿತ್ರ ಕದಂ ದುಬೈ ಅಧ್ಯಕ್ಷರಾದ ಹಾಗೂ ಎಲಿಗೆಂಟ್ ಗ್ರೂಪ್ ಆಪ್ ಕಂಪೆನಿ ಶಾರ್ಜಾ, ದುಬೈ, ಬೆಂಗಳೂರು ಇದರ ಮಾಲಕರಾದ ದಿನೇಶ್ ದೇವಾಡಿಗ ನಾಗೂರು ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾಕೆರೆ (ಉತ್ತರ) ಶಾಲೆಗೆ 25,000 ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರವನ್ನು ಸ್ವಾತಂತ್ರ್ಯೋತ್ಸವದ ಪ್ರಯುಕ್ತ  ಸಭೆಯಲ್ಲಿ ಅವರ ಸಹೋದರಿಯಾದ ಶಾರದಾ ದೇವಾಡಿಗ  ಹಸ್ತಾಂತರಿಸಿದರು.

ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮಹಾಬಲ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯರಾಮ್ ಪೂಜಾರಿ,ಸಿ ಆರ್ ಪಿ ಸುಧಾಕರ್ ದೇವಾಡಿಗ,ಜಯಂತಿ ವಾಸುದೇವ ದೇವಾಡಿಗ ಬಡಾಕೆರೆ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.


Share