ಸೀತಾರಾಮ ಮಹಿಳಾ ಭಜನಾ ಮಂಡಳಿ (ರಿ) ಉಡುಪಿ ಯವರ ಅರಸಿನ ಕುಂಕುಮ ಕಾರ್ಯಕ್ರಮ

ಉಡುಪಿ: ಸೀತಾರಾಮ ಮಹಿಳಾ ಭಜನಾ ಮಂಡಳಿ (ರಿ) ಉಡುಪಿ ಯವರು ಅರಸಿನ ಕುಂಕುಮ ಕಾರ್ಯಕ್ರಮವನ್ನು ತಾ: 25-08-2019 ರಂದು ದೇವಾಡಿಗ ಸಭಾಭವನ ಚಿಟ್ಪಾಡಿಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಶ್ರೀಮತಿ ಸಂಗೀತ ದೇವಾಡಿಗ ಉದ್ಘಾಟಿಸಿದರು. ಸಾವಿತ್ರಿ ರಾಮ ದೇವಾಡಿಗ ಅದ್ಯಕ್ಷತೆವಹಿಸಿದ್ದರು.

ಅರಸಿನ ಕುಂಕುಮ ಸಂಪ್ರದಾಯ ಕಾರ್ಯಕ್ರಮದ ನಂತರ   50 ಕ್ಕಿಂತ ಹೆಚ್ಚು ವೈವಾಹಿ ಸಂವತ್ಸರ ಮುಗಿಸಿದ ಹಿರಿಯ ದಂಪತಿಗಳಾದ ೧) ಶ್ರೀ ಗೋಪಾಲ ದೇವಾಡಿಗ - ಶ್ರೀಮತಿ ಜಲಜ ದೇವಾಡಿಗ, ಬೈಲೂರು 2)
ಶ್ರೀ ಸಾದು ಶೇರಿಗಾರ- ಶ್ರೀಮತಿ ಜಲಜಾ ಶೇರಿಗಾರ್ ಅಲೆವೂರು; ೩) ಶ್ರೀ ವಾಸು ದೇವಾಡಿಗ -ಶ್ರೀಮತಿ. ಯಶೋದ ದೇವಾಡಿಗ; ಕಟಪಾಡಿ ೪) ಶ್ರೀ ಸಂಜೀವ ಶೇರಿಗಾರ್- ಶ್ರೀಮತಿ. ಸುಂದರಿ ಶೇರಿಗಾರ್, ಕುಂಜಿಬೆಟ್ಟು. ೫) ಶ್ರೀ ರುದ್ರ ಶೇರಿಗಾರ್- ಶ್ರೀಮತಿ. ಇಂದಿರಾ ಶೇರಿಗಾರ್;
ನಿಟ್ಟೂರು ಇವರುಗಳನ್ನು ಸನ್ಮಾನಿಸಲಾಯಿತು.

ವರದಿ-ಚಿತ್ರ: ಪ್ರಭಾಕರ್ ಕೆ,ಎಸ್, ಉಡುಪಿ


Share