ಉಡುಪಿ: ’ಸ್ನೇಹ ಕೂಟ’ಆಯೋಜಿಸಿದ ದೇವಾಡಿಗ ಯುವ ವೇದಿಕೆ, ಉಡುಪಿ

ಉಡುಪಿ: ದೇವಾಡಿಗ ಯುವ ವೇದಿಕೆ, ಉಡುಪಿಯವರು ಆಯೋಜಿಸಿದ ’ಸ್ನೇಹ ಕೂಟ’ತಾ: 25-08-2019 ರಂದು ದೇವಾಡಿಗ ಸಭಾಭವನ ಚಿಟ್ಪಾಡಿಯಲ್ಲಿ ಜರುಗಿತು. 

ಮುಖ್ಯ ಅತಿಥಿ ಕುವೆಂಪು ವಿಶ್ವವಿದ್ಯಾಲಯದ ಪೂರ್ವ ಕುಲಪತಿ ಡಾ.ಬಿ.ಎಸ್.ಶೇರಿಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಾಡಿಗ ಯುವ ವೇದಿಕೆಯ ಅದ್ಯಕ್ಷ ಪ್ರದೀಪ್ ಮೊಯ್ಲಿ ಅದ್ಯಕ್ಷ ಅದ್ಯಕ್ಷತೆವಹಿಸಿದ್ದರು.

ಇತ್ತೀಚೆಗೆ ಗೌರವ ಡಾಕ್ಟರೇಟ್ ಸಂಭ್ರಮಿತ ಶ್ರೀಯುತರಾದ, ಸ್ಯಾಕ್ಸಫೋನ್ ವಾದಕರದ  ಸುಂದರ ಶೇರಿಗಾರ್, ಜನಾರ್ಧನ ದೇವಾಡಿಗ ಹಾಗೂ ರಘು ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು. ಹಾಗೇನೇ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ತಮ್ಮ್ ಪ್ರಬಂಧಕ್ಕೆ ಮಣಿಪಾಲ್ ವಿಶ್ವವಿದ್ಯಾಲಯದಿಂದ ಡಾಕ್ಟ್ರೇಟ್ ಪಡೆದ ರಶ್ಮಿತಾ ಕೇಶವ್ ಅವರನ್ನು ಸನ್ಮಾನಿಸಲಾಯಿತು,ಶ್ರೀ ವಿಜೇಶ್ ದೇವಾಡಿಗ ಮಂಗಳದೇವಿ ನಿರೂಪಿಸಿದರು.

 ಉಡುಪಿ ದೇವಾಡಿಗ ಸೇವಾ ಸಂಘದ ಮಾಜಿ ಅದ್ಯಕ್ಷರಾದ ಶ್ರೀ ಕೆ.ಕೆ.ಶೇರಿಗಾರ್ ಮತ್ತು ಶ್ರೀ ಶ್ರೀಧರ್; ಮತ್ತು ಡಾ.ರಾಮ ದೇವಾಡಿಗ;  ಮಂಗಳೂರು ಸಂಘದ ಕಾರ್ಯಕರ್ತ ಎಮ್.ಎಚ್.ಕರುಣಾಕರ್, ಸ್ಥಳೀಯ ಉದ್ಯಮಿ ಚಂದ್ರಕಾಂತ್ ದೇವಾಡಿಗ, ದೇವಾಡಿಗ ಯುವ ವೇದಿಕೆಯ ನಿಕಟಪೂರ್ವ ಅದ್ಯಕ್ಷ ಪ್ರಭಾಕರ ದೇವಾಡಿಗ, ಡಾ. ರಾಮದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ವರದಿ-ಚಿತ್ರ: ಪ್ರಭಾಕರ್ ಕೆ,ಎಸ್, ಉಡುಪಿ


Share