ಮಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಮಾಜದ ಹಿರಿಯ ಶಿಕ್ಷಕರಿಗೆ ಸನ್ಮಾನ

ಮಂಗಳೂರು: TEACHER’s Day celebrated by Ladies Wing, Youth Wing of KRDS Mangalore by visiting & honouring some of the senior retired teachers of the community. Mrs.Mohini k Sanjeeva Shriyan, Mrs. Meera bai Sanjeeva k Devadiga, Sri PK Moily, Mrs. Shreedevi Babu KDevadiga, Mrs.Vimala Rama Devadiga, Mrs. Vimala Harishchandra, Dr. Devaraj K & Dr. Sundar Moily are the senior teachers who were honoured.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ.... 

ಕರ್ನಾಟಕ ರಾಜ್ಯ ದೇವಾಡಿಗ ಮಹಿಳಾ ಸಂಘಟನೆ ಹಾಗೂ ಯುವಸಂಘಟನೆ ಮಂಗಳೂರು ಇದರ  ಸಹಯೋಗದಲ್ಲಿ ನಾವು ಶಿಕ್ಷಕರ ದಿನಾಚರಣೆಯ ಅಂಗವಾಗಿ ನಮ್ಮ ಸಮಾಜದಲ್ಲಿ ಶಿಕ್ಷಕರೆಂಬ ಪವಿತ್ರ ವೃತ್ತಿಯನ್ನು  ಕೈಗೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡಿ, ಇಂದು ನಿವೃತ್ತಿಯ ಸಂತೃಪ್ತ ಜೀವನವನ್ನು ಸವೆಯಿಸುವ ಹಿರಿಯ ಗುರುಗಳಲ್ಲಿ ಕೆಲವರನ್ನು ಸಾಂಕೇತಿಕವಾಗಿ ಗೌರವಿಸುವ ಕಾರ್ಯಕ್ರಮವನ್ನು ಇಂದು ದಿನಾಂಕ 05_09_2019ರಂದು ಆಯೋಜಿಸಿಕೊಂಡಿದ್ದೆವು.. 

ಅಂತೆಯೇ ಹಿರಿಯ ಗುರುಗಳ ನಿವಾಸಕ್ಕೆ ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ  ತೆರಳಿ ಗೌರವವನ್ನು ಸಲ್ಲಿಸಿ ಆಶೀರ್ವಾದಗಳನ್ನು  ಪಡೆದಿರುತ್ತೇವೆ... 
ಸನ್ಮಾನಿತರ ವಿವರ ಇಂತಿದೆ:- 
1) ಕಾಮೆರೊಟ್ಟು ಪಾವಂಜೆ ಮನೆಯ ಶ್ರೀಮತಿ ಮೋಹಿನಿ .ಕೆ ಸಂಜೀವ ಶ್ರೀಯಾನ್.
2) ಶ್ರೀಮತಿ ಮೀರಾಬಾಯಿ.ಕೆ.ಸಂಜೀವ ದೇವಾಡಿಗ
3) ಸುರತ್ಕಲ್ ನ ಶ್ರೀ ಪಿ. ಕೂಸಪ್ಪ  ಮೊಯ್ಲಿ ( ಪಿ. ಕೆ ಮೊಯ್ಲಿ)
4) ಕದ್ರಿಯ ಶ್ರೀಮತಿ ಶ್ರೀದೇವಿ ಬಾಬು ದೇವಾಡಿಗೆ  
5) ಮರೊಳಿ ದೋಟದ ಮನೆಯ ಶ್ರೀಮತಿ ವಿಮಲಾ ರಾಮ ದೇವಾಡಿಗ 
6) ಶ್ರೀಮತಿ ವಿಮಲಾ ಹರಿಶ್ಚಂದ್ರ ದೇವಾಡಿಗ

ಅಲ್ಲದೆ

ನಮ್ಮೆಲ್ಲರ ಮಾರ್ಗದರ್ಶಿಗಳೂ, ಪ್ರಸ್ತುತ ಕ.ರಾ.ದೇ.ಸಂಘ ಮಂಗಳೂರು  ಇದರ ಕೇಂದ್ರೀಯ  ಸಮಿತಿಯ ಅಧ್ಯಕ್ಷ ರಾದ
7) ಶ್ರೀ ದೇವರಾಜ್. ಕೆ.

ಮಂಗಳಾ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ 
8) ಶ್ರೀ ಸುಂದರ ಮೊಯ್ಲಿ 
ಹಾಗೂ ನಮ್ಮ ಹೆಮ್ಮೆಯ  ಮಂಗಳ ವಿದ್ಯಾಸಂಸ್ಥೆಯ  ಶಿಕ್ಷಕರನ್ನು ಕೃತಜ್ಞತಾಪೂರ್ವಕವಾಗಿ ಸಮ್ಮಾನಿಸಿದೆವು..

ವಿವರಗಳು:

1 ಕಾಮೆರೊಟ್ಟು ಪಾವಂಜೆ ಮನೆಯ ಶ್ರೀಮತಿ ಮೋಹಿನಿ .ಕೆ ಸಂಜೀವ ಶ್ರೀಯಾನ್.ಮತ್ತು ಶ್ರೀಮತಿ ಮೀರಾಬಾಯಿ.ಕೆ.ಸಂಜೀವ ದೇವಾಡಿಗ

ಗಾಢನೀಲ ವರ್ಣದ ಸೀರೆಯುಟ್ಟವರು ಶ್ರೀಮತಿ ಮೋಹಿನಿ ಕೆ. ಸಂಜೀವ ಶ್ರೀಯಾನ್.. 15_05_1937 ರಲ್ಲಿ ಜನಿಸಿದ ಇವರು 37 ವರ್ಷಗಳ ಶಿಕ್ಷಕ ವೃತ್ತಿಯನ್ನು ಮಂಗಳೂರಿನ ಯು.ಬಿ.ಎಂ. ಸಿ. ಪ್ರಾಥಮಿಕ ಶಾಲೆಯಲ್ಲಿ ಸಲ್ಲಿಸಿದ್ದು ಬತ್ತದ ಉತ್ಸಾಹ ಹಾಗೂ ಶಿಷ್ಯಕೋಟಿಗೆ ಅಕ್ಷರದ ಜ್ಞಾನದೀಕ್ಷೆಯನ್ನು ನೀಡಿದ ಮಹಾನುಭಾವರು..    ತಿಳಿ ನೀಲ ಬಣ್ಣದ ಸೀರೆಯುಟ್ಟವರು ಶ್ರೀಮತಿ ಮೀರಾಬಾಯಿ .ಕೆ. ಸಂಜೀವ ದೇವಾಡಿಗ  ಇವರು 18-09- 1945 ರಲ್ಲಿ ಜನಿಸಿ ಯು.ಬಿ.ಎಂ.ಸಿ ಪ್ರಾಥಮಿಕ  ಶಾಲೆಯಲ್ಲಿ 40 ವರ್ಷ  ಸುದೀರ್ಘ ಸೇವೆಯನ್ನು ಸಲ್ಲಿಸಿರುತ್ತಾರೆ.. ಇವರು ಸೋದರಿಯರು ಕೋಟಿ ಚೆನ್ನಯರಂತೆ ಸುಖ ದುಃಖಗಳಲ್ಲಿ ಸದಾ ಜತೆಯಾಗಿದ್ದು  ತುಂಬು ಕುಟುಂಬಕ್ಕೆ ಮಾದರಿಯಾಗಿಯೂ  ನಮ್ಮ ಸಮಾಜದ  ಎಳ್ಗೆಗೆ ಶ್ರಮಿಸಿದವರೂ ಆಗಿದ್ದಾರೆ..

 2.ಸುರತ್ಕಲ್ ನಶ್ರೀ ಪಿ. ಕೂಸಪ್ಪ  ಮೊಯ್ಲಿ ( ಪಿ. ಕೆ ಮೊಯ್ಲಿ)

ಪ್ರತಿಷ್ಠಿತ ಗೋವಿಂದ ದಾಸ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿ ನಿವೃತ್ತ ಜೀವನವನ್ನು ಖುಷಿಯಾಗಿ ನಡೆಸುವ ಮಹಾನ್ ಚೇತನ. ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಅತೀವ ಪ್ರೋತ್ಸಾಹ ನೀಡಿದ ಮಾದರಿ ಜನಕ, ಶ್ರೀ ಪಿ.ಕೆ ಮೊಯಿಲಿ ಎಂದೇ ಪ್ರಸಿದ್ಧರಾದವರು.

ಶ್ರೀ ಪಿ.ಕೂಸಪ್ಪ  ಮೊಯ್ಲಿ  1954ರಲ್ಲಿ ಮಾಸಿಕ ಪತ್ರಿಕೆಗೆ ಶಿಕ್ಷಕರ ದಿನಾಚರಣೆಯ ಕುರಿತ ಲೇಖನ ಬರೆದಿರುವ ನೆನಪುಗಳನ್ನು ನಮ್ಮೊಂದಿಗೆ  ಮೆಲುಕು ಹಾಕಿಕೊಂಡ ಅವರ ಸ್ಮರಣ ಶಕ್ತಿಗೆ ನಾವೂ ಬೆರಗಾದೆವು..

4) ಕದ್ರಿ ಯ ಶ್ರೀಮತಿ ಶ್ರೀದೇವಿ ಬಾಬು ದೇವಾಡಿಗೆ  

.

ಕದಿರೆಯ ಮಂಜುನಾಥನ ಸಾನಿಧ್ಯದ ಪರಿಸರದಲ್ಲಿ ತನ್ನ ಸೊಸೆ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ ಹಿರಿಯ ಜೀವ ಶ್ರೀಮತಿ ಶ್ರೀದೇವಿ ಬಾಬು ದೇವಾಡಿಗ ಇವರು 26-8- 1933 ರಲ್ಲಿ ಜನಿಸಿದ್ದು 1952 ರಿಂದ 1989 ರವರೆಗೆ 37 ವರ್ಷಗಳ ಶಿಕ್ಷಕ ವೃತ್ತಿಯನ್ನು ನಿಭಾಯಿಸಿ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡ ಮುಗ್ಧ ಮನಸ್ಸಿನ ದೇವತೆ.

5. ಮರೊಳಿ ದೋಟದ ಮನೆಯ ಶ್ರೀಮತಿ ವಿಮಲಾ ರಾಮ ದೇವಾಡಿಗ 

ದಿನಾಂಕ 18 -04 -1937ರಲ್ಲಿ ಜನಿಸಿದ ಶ್ರೀಮತಿ ವಿಮಲಾ ರಾಮ ದೇವಾಡಿಗ ಅವರು 07-07-1960 ರಿಂದ 30-04-1995ರವರೆಗೆ  ಬಿಕರ್ನಕಟ್ಟೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 34 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಸೂರ್ಯನಾರಾಯಣ ದೇವಸ್ಥಾನದ ಬಳಿ ದೋಟದ ಮನೆಯಲ್ಲಿ ಮಕ್ಕಳು, ಸೊಸೆಯಂದಿರು ಮೊಮ್ಮಕ್ಕಳ ತುಂಬು ಕುಟುಂಬದೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.

6) ಶ್ರೀಮತಿ ವಿಮಲಾ ಹರಿಶ್ಚಂದ್ರ ದೇವಾಡಿಗ

ಶ್ರೀಮತಿ ವಿಮಲಾ ಹರಿಶ್ಚಂದ್ರ ದೇವಾಡಿಗ ಇವರು 01-04-1930 ರಲ್ಲಿ ಜನಿಸಿದ್ದು ಸಿರಿಯನ್ ಮಿಷನ್ ಸ್ಕೂಲ್   ಜೆಪ್ಪು ಇಲ್ಲಿಯ ಪ್ರಾಥಮಿಕ ಶಾಲೆಯಲ್ಲಿ ಅವಿರತ ಸೇವೆಯನ್ನು  ಸಲ್ಲಿಸಿ ನಿವೃತ್ತ ಜೀವನವನ್ನು ತಮ್ಮ ಪತಿ ಹಾಗೂ  ಮಕ್ಕಳು ಮೊಮ್ಮಕ್ಕಳೊಂದಿಗೆ ಸಂತೃಪ್ತಿಯಿಂದ ನಡೆಸುತ್ತಿದ್ದಾರೆ... ನಗುಮುಖದ, ಹಾಸ್ಯವಿನೋದ ಭರಿತ ಇವರ ಅಕ್ಕರೆಯ ಮಾತುಗಳು ಬಣ್ಣಿಸಲಸಾದ್ಯ.

7) ಡಾ. ದೇವರಾಜ ಕೆ

ಶ್ರೀ ವೀರೇಂದ್ರ ಹೆಗ್ಗಡೆಯವರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರ ಉನ್ನತ ಹುದ್ದೆಯನ್ನು ಅಲಂಕರಿಸಿ ನಮ್ಮ ಸಮಾಜದ ಕೀರ್ತಿ ಕಲಶರಾದವರು ನಮ್ಮ ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ದೇವರಾಜ ಕೆ ಇವರು. ಇವರು 1953 ರಲ್ಲಿ ಜನಿಸಿದ್ದು ಇಂದಿಗೂ ಪೂಜ್ಯ ಹೆಗ್ಗಡೆಯವರ ಸಂಸ್ಥೆಯಲ್ಲಿ ತಮ್ಮ ಪ್ರವೃತ್ತಿಯನ್ನು ಮುಂದುವರಿಸಿ ಯುವಜನತೆಗೆ ರೋಲ್ ಮಾಡೆಲ್ ಆಗಿದ್ದಾರೆ... 

8) ಡಾ: ಸುಂದರಮೊಯ್ಲಿ

ಶ್ರೀ ಸುಂದರಮೊಯ್ಲಿಯವರು ತಾ 09_08_1978  ರಂದು  ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಬಂಟ್ವಾಳ ದಲ್ಲಿ ಉಪನ್ಯಾಸಕರಾಗಿ ಸೇವೆಗೆ  ಸೇರಿದವರಾಗಿದ್ದು; ಚೈತನ್ಯದ ಚಿಲುಮೆಯಾಗಿ ನಿಸ್ವಾರ್ಥ ಸೇವೆಯೊಂದಿಗೆ ನಮ್ಮ ಮಂಗಳಾ ವಿದ್ಯಾಸಂಸ್ಥೆಯ ಸಂಚಾಲಕರಾಗಿ ಅವಿರತವಾಗಿ ದುಡಿಯುತ್ತಿದ್ದಾರೆ..

~ ವೀಣಾ ಗಣೇಶ್, ಕರ್ನಾಟಕ ರಾಜ್ಯ ದೇವಾಡಿಗ ಮಹಿಳಾ ಸಂಘಟನೆ, ಮಂಗಳೂರು


Share