ತಾ. 13.09.2019 ರಂದು ಶ್ರೀ ಪೊಳಲಿ ಷಷ್ಟಿ ರಥ ದ ಮರದ ಕೆತ್ತನೆ ಮುಹೂರ್ತವು(ಕುತ್ತಿ ಪೂಜೆ)

ಮಂಗಳೂರು:  ಸಮಸ್ತ ದೇವಾಡಿಗ ಸಮಾಜ ಬಂಧುಗಳ ವತಿಯಿಂದ ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಟಿ ರಥ ಸಮರ್ಪಣಾ ಸಮಿತಿಯ ಮೂಲಕ ತಾಯಿ ರಾಜರಾಜೇಶ್ವರೀ ದೇವಿಗೆ ಸಮರ್ಪಿಸುವ ಷಷ್ಟಿ ರಥದ ಮರದ ಕೆತ್ತನೆ ಮುಹೂರ್ತವು(ಕುತ್ತಿ ಪೂಜೆ) ಇದೇ ಬರುವ ತಾ. 13.09.2019 ಶುಕ್ರವಾರದಂದು ಬೆಳಿಗ್ಗೆ ಗಂಟೆ 10.00ಕ್ಕೆ ಸರಿಯಾಗಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಜರಗಲಿರುವುದು.

ಈ ಪುಣ್ಯಪ್ರದವಾದ ಸಮಾರಂಭದಲ್ಲಿ ಸಮಸ್ತ ದೇವಾಡಿಗ ಬಂಧುಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಮ್ರ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.


 


Share