ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮ್ಯಾಟಿಕ್ ಸ್ಪರ್ಧೆಯಲ್ಲಿ ವಿಜೇತರರು!.

ಸುನಿಧಿ ದೇವಾಡಿಗ:  ಮೈಸೂರಿನಲ್ಲಿ ನೆಡೆದ 14ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮ್ಯಾಟಿಕ್ ಸ್ಪರ್ಧೆಯಲ್ಲಿ ನಾಗೂರು ಸಂದಿಪನ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿರುವ ಸುನಿಧಿ ದೇವಾಡಿಗ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1400 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸುನಿಧಿ ದೇವಾಡಿಗ ಮರವಂತೆಯ ಹುಟ್ಟಿನ ಮನೆಯ ನಾರಾಯಣ ದೇವಾಡಿಗ ಮತ್ತು ವಿಜಯಲಕ್ಷ್ಮಿ ದೇವಾಡಿಗ ದಂಪತಿಗಳ ಸುಪುತ್ರಿಯಾಗಿರುತ್ತಾಳೆ.

ದ್ರಶ್ಯ ಜಿ ದೇವಾಡಿಗ:  ನಾಗೂರು ಸಂದಿಪನ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ದ್ರಶ್ಯ ಜಿ ದೇವಾಡಿಗ ದ್ವಿತೀಯ ಸ್ಥಾನ ಪಡೆದಿರುತ್ತಾನೆ..ದ್ರಶ್ಯ ಜಿ ದೇವಾಡಿಗ ಮರವಂತೆಯ ಗಾಡಿಪುಟ್ಟನ ಮನೆಯ ಗುಂಡು ಗೀತಾರವರ ಪುತ್ರನಾಗಿರುತ್ತಾನೆ.

ಚಿನ್ಮಯ ದೇವಾಡಿಗ: ನಾಗೂರು ಸಂದಿಪನ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ಚಿನ್ಮಯ ದೇವಾಡಿಗ ತ್ರತೀಯ ಸ್ಥಾನ ಪಡೆದಿರುತ್ತಾನೆ.. ಇವನು ಮರವಂತೆಯ ಗಾಡಿಪುಟ್ಟನ ಮನೆಯ ಆನಂದ್ ದೇವಾಡಿಗ ಮತ್ತು  ಬೇಬಿ ದೇವಾಡಿಗ ದಂಪತಿಗಳ  ಪುತ್ರನಾಗಿರುತ್ತಾನೆ.

ಇವರಿರಿಗೆ ನಮ್ಮ ಅಭಿನಂದನೆ ಹಾಗೂ ಶುಭ ಹಾರೈಕೆಗಳು...


Share