ಪೊಳಲಿ ಷಷ್ಠಿರಥ ಕೆತ್ತನೆಗೆ ಭಕ್ತಿ ಪೂರ್ವಕವವಾಗಿ ಜರುಗಿದ ಮಹೂರ್ತ ಸಮಾರಂಭ

ಕೈಕಂಬ;ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ದೇವಾಡಿಗರ ಸಮಾಜ ಪೊಳಲಿ ದೇವಳಕ್ಕೆ ಅರ್ಪಿಸಲಿರುವ ಶ್ರೀ ಪೊಳಲಿ ಷಷ್ಠಿರಥದ ಕೆತ್ತನೆ ಕೆಲಸಕ್ಕೆ ಸೆ. 13ರಂದು ಬೆಳಿಗ್ಗೆ ವಿಶೇಷ ಪೂಜೆಯೊಂದಿಗೆ ಮುಹೂರ್ತ ನಡೆಯಿತು.

ನೂತನ ರಥದ ಮರದ ಕೆತ್ತನೆ ಕೆಲಸ ಆರಂಭಿಸಲು ದೇವಾಡಿಗ ಸಮಾಜದ ಶ್ರೀ ಪೊಳಲಿ ಷಷ್ಠಿ ರಥ ಸಮರ್ಪಣಾ ಸಮಿತಿ ಮುಖಂಡರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರ ಸಮ್ಮುಖದಲ್ಲಿ ದೇವಸ್ಥಾನದ ಪವಿತ್ರಪಾಣಿ ಮಾಧವ ಭಟ್ ಮುಂದಾಳ್ವದಲ್ಲಿ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ ತಂತ್ರಿ, ನಾರಾಯಣ ಭಟ್, ರಾಮ ಭಟ್, ಪರಮೇಶ್ವರ ಭಟ್ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್ ಹಾಗೂ ಶಾಸಕ ರಾಜೇಶ್ ನಾಯ್ಕ್, ಕಾರ್ಯನಿರ್ವಾಣಾಧಿಕಾರಿ ಪ್ರವೀಣ್, ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ತಾ.ಪಂ ಸದಸ್ಯ ಯಶವಂತ ಪೂಜಾರಿ, ವೆಂಕಟೇಶ್ ನಾವಡ ಪೊಳಲಿ ಹಾಗೂ ಸಮಿತಿ ಅಧ್ಯಕ್ಷ ರಾಮದಾಸ ಬಂಟ್ವಾಳ, ಗೌರವಾಧ್ಯಕ್ಷ ಗೋಪಾಲ ಎಂ ಮೊಯ್ಲಿ ಮುಂಬೈ, ನಾಗೇಶ ದೇವಾಡಿಗ (ಖಜಾಂಚಿ), ಪ್ರವೀಣ್ ಬಿ ತುಂಬೆ (ಪ್ರಧಾನ ಕಾರ್ಯದರ್ಶಿ), ಉಪಾಧ್ಯಕ್ಷರಾದ ಭಾಸ್ಕರ ಕದ್ರಿ, ಕೃಷ್ಣಪ್ಪ ದೇವಾಡಿಗ ಪೊಳಲಿ, ವಾಸು ಎಸ್ ದೇವಾಡಿಗ, ವಾಮನ್ ಮರೋಳಿ, ಎಚ್.ಮೋಹನದಾಸ್, ಶ್ರಿಯಾನ್,  ಕುಮಾರ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಿಕಾ ದೇವಾಡಿಗ, ಪ್ರಶಾಂತ್ ದೇವಾಡಿಗ ಪಿ, ಸಂದೀಪ್ ದೇವಾಡಿಗ, ಭಾರತಿ ಎನ್, ಕರುಣಾಕರ ಎಂ ಎಚ್, ರೋಹಿತ್ ಮರೋಳಿ, ದಾಮೋದರ ದೇವಾಡಿಗ ಅಳಪೆ, ಸದಾಶಿವ ಮೊಯ್ಲಿ ಬೆಂಜನಪದವು, ಮುರಳಿ ದೇವಾಡಿಗ ಪೊಳಲಿ, ವಿಜೇಶ್ ದೇವಾಡಿಗ ಮಂಗಳಾದೇವಿ, ವಾಸು ದೇವಾಡಿಗ ಕಜೆಕಾರು, ಪ್ರೀತೇಶ್ ದೇವಾಡಿಗ ಮೊದಲಾದವರಿದ್ದರು.

ನೂತನ ಷಷ್ಠಿ ರಥ ನಿರ್ಮಾಣಕ್ಕೆ ಸಾಗುವಾನಿ, ಬೋಗಿ, ಹೆಬ್ಬಲಸು ಮತ್ತು ಸಂಪಿಗೆ ಮರ ಬಳಸಲಾಗುವುದು. ಒಟ್ಟು ಬಳಕೆಯ ಮರದಲ್ಲಿ ಶೇ 25ರಷ್ಟು ಸಾಗುವಾನಿ ಮರದ ಅಗತ್ಯವಿದೆ. ಇದಕ್ಕೆ 40 ಲಕ್ಷ ರೂ ಖರ್ಚು ಅಂದಾಜಿಸಲಾಗಿದೆ. ಮುಂದಿನ ವರ್ಷ ಪೊಳಲಿ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಶ್ರೀ ದೇವರಿಗೆ ನೂತನ ರಥ ಅರ್ಪಿಸಲು ಸಂಕಲ್ಪಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ರಾಮದಾಸ ಬಂಟ್ವಾಳ ತಿಳಿಸಿದರು.


Share