ದೇವಾಡಿಗ ಸಂಘ ಮುoಬೈಯ ಆಶ್ರಯದಲ್ಲಿ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ನ 53 ನೇ ವಾರ್ಷಿಕ ಕ್ರೀಡೋತ್ಸವ

 

ದೇವಾಡಿಗ ಸಂಘ ಮುoಬೈಯ ಆಶ್ರಯದಲ್ಲಿ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ನ 53 ನೇ ವಾರ್ಷಿಕ ಕ್ರೀಡೋತ್ಸವ
ಸಂಘದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯಿಂದ ಸಮಾಜದ ಒಗ್ಗಟ್ಟು ಹೆಚ್ಚುವುದು  -  ರವಿ ಎಸ್ ದೇವಾಡಿಗ

ದೇವಾಡಿಗ ಸಂಘ ಮುoಬೈಯ ಆಶ್ರಯದಲ್ಲಿ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ನ 53  ನೇ ವಾರ್ಷಿಕ ಕ್ರೀಡಾ ಕೂಟವು ಆದಿತ್ಯವಾರ ಡಿಸೆoಬರ್ 24 ರಂದು ಪರೇಲ್ ನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಬಹಳ ಉತ್ಸುವಿಕೆಯಿಂದ ಸoಪನ್ನಗೊoಡಿತು. ಬೆಳಿಗ್ಗೆ 9 ಗಂಟೆಗೆ ಕ್ರೀಡಾ ಸ್ಪರ್ಧೆಯ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಮತ್ತು ಮಾಜಿ ಅಧ್ಯಕ್ಷ ಶ್ರೀ ಕೆ ಕೆ ಮೋಹನ್ ದಾಸ್ ಜಂಟಿಯಾಗಿ ನೆರವೇರಿಸಿದರು.  
ಕ್ರೀಡೋತ್ಸವದ ಪ್ರಮುಖ ಪ್ರಾಯೋಜಕತ್ವವನ್ನು ರಿಲಾಯನ್ಸ್ ಗ್ರೂಪ್ ನ ಉಪಾಧ್ಯಕ್ಷ ಶ್ರೀ ವಿಶ್ವಾಸ್ ಅತ್ತಾವರ್ ನೆರೆವಿನ ಮೂಲಕ ರಿಲಾಯನ್ಸ್ ಇಂಡಸ್ಟ್ರೀಸ್ ವಹಿಸಿಕೊoಡರೆ, ಇನ್ನುಳಿದ ಪ್ರಾಯೋಜಕತ್ವವನ್ಣು ಶ್ರೀ ಸತ್ಯನಾರಾಯಣ ಇಂಡಸ್ಟ್ರಿಯಲ್ ಸಪ್ಲಾಯರ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಘದ ಮಾಜಿ ಅಧ್ಯಕ್ಷ ಶ್ರೀ ಧರ್ಮಪಾಲ್ ದೇವಾಡಿಗ, ಸೀತಾ ಬುಕ್ಸ್ & ಪಬ್ಲಿಷರ್ಸ್  ನ ಮುಖ್ಯಸ್ಠ ಶ್ರೀ ಎಸ್ ಎಸ್ ರಾವ್, ಪ್ರಕಾಶಾನಂದ ಹೋಟೆಲ್ ಮಾಲಕ ಶ್ರೀ ಗೋಪಾಲ್ ಮೊಯಿಲಿ ಮತ್ತು ಸಂಘದ ನಗರ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಹೇಮನಾಥ್ ದೇವಾಡಿಗರು ವಹಿಸಿದ್ದರು. 
ಎಲ್ಲಾ ಪ್ರಾದೇಶಿಕ ಸಮನ್ವಯ ಸೆಮಿತಿಗಳು ಭಾಗವಹಿಸಿ ಡೋಔಬಿವಿಲಿ ಪ್ರಾದೇಶಿಕ ಸಮನ್ವಯ ಸಮಿತಿಯು ಅತ್ಯುತ್ತಮ ತಂಡ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಔಡಿತು.
3 ವರ್ಷದಿಔದ 60 ವರ್ಷ ಮತ್ತು 60 ವರ್ಷ ಕ್ಕಿಂತ ಮೇಲ್ಪಟ್ಟವರಿಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉದ್ದ ಜಿಗಿತ, ಎತ್ತರ ಜಿಗಿತ, ಶೋಟ್ ಪುಟ್ , 100, 200, 400 ಮೀಟರ್ ಓಟ, ರಿಂಗ್ ಎಸೆತ, ನಡಿಗೆ ಸ್ಪರ್ಧೆ, ಹಗ್ಗ ಜಗ್ಗಾಟ, ರಿಲೇ ಓಟ, ಚಾಕ್ಲೇಟ್ ಪಿಕ್ಕಿಂಗ್ ಓಟ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಠಾಣೆ ಸಮಿತಿಯ ತನ್ವಿ ಶೇರಿಗಾರ್, ಡೊಔಬಿವಿಲಿ ಸಮಿತಿಯ ದಿನೇಶ್ ದೇವಾಡಿಗ, ಪುನೀತ್ ದೇವಾಡಿಗ ಅಸಲ್ಫ ಸಮಿತಿಯ ಹರ್ಷ ದೇವಾಡಿಗ, ನಗರ ಸಮಿತಿಯ ಪ್ರೀತಮ್ ದೇವಾಡಿಗ ಪಂದ್ಯ ಪುರುಷೋತ್ತಮರಾಗಿ ಪುರಸ್ಕ್ರತರಾದರು. 
ಕ್ರೀಡಾ ಆಯೋಜನೆಯ ಯಶಸ್ವಿಗಾಗಿ ಸಂಘದ ಕ್ರೀಡಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಮ್ ದೇವಾಡಿಗ ಹಾಗು ಅವರ ತಂಡದವರಾದ ಸುರೇಶ್ ದೇವಾಡಿಗ, ಮೋಹನ್ ದಾಸ್ ಗುಜರನ್ , ನೀತೇಶ ದೇವಾಡಿಗ, ಅಕ್ಶಯ ದೇವಾಡಿಗರು ಶ್ರಮಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀ ವಾಸು ದೇವಾಡಿಗ, ಮಾಜಿ ಅಧ್ಯಕ್ಷ ಶ್ರೀ ಎಸ್ ಪಿ ಕರ್ಮರನ್, ಉಪಾಧ್ಯಕ್ಷ ಶ್ರೀ ಸುರೇಶ್ ಎಸ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಶೇರಿಗಾರ್, ಶ್ರೀಮತಿ ಮಾಲತಿ ಮೊಯಿಲಿ, ಕೋಶಾಧಿಕಾರಿ ಶ್ರೀ ದಯಾನಂದ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಆರ್ ಮೊಯಿಲಿ, ಉಪ ಕಾರ್ಯಾಧ್ಯಕ್ಷೆಯಾರಾದ ಶ್ರೀಮತಿ ರಂಜನಿ ಮೊಯ್ಲಿ ಮತ್ತು ಶೀಮತಿ ಸುರೇಖಾ ದೇವಾಡಿಗ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್, ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ಶ್ರೀಮತಿ ಲತಾ ಶೇರಿಗಾರ್, ಮಾಜಿ ಗೌ. ಪ್ರಧಾನ ಕಾರ್ಯದರ್ಶಿ ಪದ್ಮನಾಭ ದೇವಾಡಿಗ , ಯೂತ್ ಮೆಂಟರ್ ನರೇಶ್ ದೇವಾಡಿಗ ಉಪಸ್ಥಿತರಿದ್ದರು. 
ಕ್ರೀಡೋತ್ಸವದ ಸಮಾರೋಪ ಸಮಾರಔಭವನ್ನು ಅಧ್ಯಕ್ಷ ರಾದ ರವಿ ಎಸ್ ದೇವಾಡಿಗ, ನಿಕಟ ಪೂರ್ವ ಅಧ್ಯಕ್ಷ ವಾಸು ದೇವಾಡಿಗ, ಗಿರೀಶ್ ದೇವಾಡಿಗ ನೆರವೇರಿಸಿದರು. ಸಂಘದ ಆಡಳಿತ ಸಮಿತಿ, ಉಪ ಸಮಿತಿ, ಯುವ ಸಮಿತಿ, ಮಹಿಳಾ ವಿಭಾಗ, ಪಾದೇಶಿಕ ಸಮನ್ವಯ ಸಮಿತಿಯ ಸದಸ್ಯರು ಕ್ರೀಡಾ ಕೂಟದ ಯಶಸ್ಸಿಗೆ ಜರಗಲು ಸಹಕರಿಸಿದರು.

 


Share