ನಾಗರಾಜ್ ಡಿ ಪಡುಕೋಣೆಯವರಿಗೆ ಕದಮ್ ದುಬೈ ಅವರ  ಪ್ರತಿಷ್ಠಿತ ದೇವಾಡಿಗ ಸಾಧಕ ಪ್ರಶಸ್ತಿ

ದುಬೈ: ಕುಂದಾಪುರ ದೇವಾಡಿಗ ಮಿತ್ರ (ರಿ) KaDaM ದುಬೈ ಇವರ 9ನೇ ವರ್ಷದ ವಾರ್ಷಿಕೋತ್ಸವ ಸ್ನೇಹ ಸಮ್ಮಿಲನ ಮತ್ತು ದೇವಾಡಿಗ ಸಾಧಕ ಪ್ರಶಸ್ತಿ ಪಶಸ್ತಿ ಪ್ರಧಾನ ಸಮಾರಂಭವು ದಿನಾಂಕ 15/11/2019 ರಂದು ಹ್ಯಾಬಿಟೇಟ್ ಸ್ಕೂಲ್ ಅಜ್ಮನ್ ಯು ಎ ಇ ಯಲ್ಲಿ ನೆಡೆಯಲಿರುವುದು.

ಖ್ಯಾತ ಉದ್ಯಮಿ ಕೊಡುಗೈ ದಾನಿ ಹಾಗೂ L G Fondation ಪ್ರವರ್ತಕರಾದ ನಾಗರಾಜ್ ಡಿ ಪಡುಕೋಣೆಯವರಿಗೆ  ಪ್ರತಿಷ್ಠಿತ ದೇವಾಡಿಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ತದನಂತರ ಪ್ರಪ್ರಥಮ ಬಾರಿಗೆ ದುಬೈನಲ್ಲಿ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿಯ ಆಯ್ದ ಕಲಾವಿದರಿಂದ ಯಕ್ಷಗಾನ ಕುಶ ಲವ ಕಾಳಗ ಹಾಗೂ ಕದಂ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ನೆಡೆಯಲಿರುವುದು ಎಂದು ಕದಂ ದುಬೈ ಅಧ್ಯಕ್ಷರಾದ ದಿನೇಶ್ ಚಂದ್ರಶೇಖರ್ ದೇವಡಿಗರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ


Share