ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಇದರ ವತಿಯಿಂದ ಸಂತೃಪ್ತ “ದೇವಾಡಿಗ ವಧು-ವರ ಸಮ್ಮಿಲನ” ಕಾರ್ಯಕ್ರಮ

ವರದಿ:-ವಿಜೇಶ್ ದೇವಾಡಿಗ ಮಂಗಳಾದೇವಿ
ಚಿತ್ರ ಕ್ರಪೆ:- ಶುಭಂ ಸ್ಟೂಡಿಯೊ ಮಂಗಳೂರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಣ್ಣಗುಡ್ಡ ಮಂಗಳೂರು ಇದರ ವತಿಯಿಂದ "ದೇವಾಡಿಗ ವಧು-ವರ ಸಮ್ಮಿಲನ" ಕಾರ್ಯಕ್ರಮವು ತಾ.15ನೇ ಜನವರಿ 2017ರ ರವಿವಾರದಂದು ಮಂಗಳೂರಿನ ಮಣ್ಣಗುಡ್ಡದಲ್ಲಿರುವ ದೇವಾಡಿಗ ಸಮಾಜ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ದಂಪತಿಗಳಾದ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ವಿಶ್ರಾಂತ ಅಧ್ಯಕ್ಷರೂ ಆದಂತಹ ಶ್ರೀಯುತ ವಾಮನ್ ಮರೋಳಿ ಮತ್ತು ಶ್ರೀಮತಿ ವೇಣಿ ಮರೋಳಿ ದಂಪತಿಗಳು ಹಾಗೂ ಶ್ರೀಯುತ ಲೋಹಿತಾಕ್ಷ ಕದ್ರಿ ಮತ್ತು ಶ್ರೀಮತಿ ಶೀಲಾ ಲೋಹಿತಾಕ್ಷ ಕದ್ರಿ ದಂಪತಿಗಳು ಉದ್ಘಾಟಿಸಿದರು.

ಉದ್ಘಾಟಕರಾದ ಶ್ರೀಯುತ ವಾಮನ್ ಮರೋಳಿಯವರು ಮಾತನಾಡಿ ಭಾವೀ ವಧು-ವರಿಗೆ ಶುಭಕೋರಿದರು.

ಈ ಸಂದರ್ಭ ಸಂಘದ ಅಧ್ಯಕ್ಷರಾದ ಶ್ರೀ ಡಾ.ದೇವರಾಜ್.ಕೆ , ಉಪಾದ್ಯಕ್ಷ ಶ್ರೀಯುತ ಅಶೋಕ್ ಮೊಯ್ಲಿ , ಕಾರ್ಯದರ್ಶಿ ಶ್ರೀ ಸುಬಾಶ್ಚ್ಂದ್ರ ಕಣ್ವತೀರ್ಥ, ಕೊಶಾದಿಕಾರಿ ಶ್ರೀಮತಿ ಗೀತಾ ವಿ ಕಲ್ಯಾಣಪುರ , ಮಹಿಳಾ ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಮಮತ ಪದ್ಮನಾಭ ದೇವಾಡಿಗ , ಯುವ ಸಂಘಟನೆಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಕಣ್ವತೀರ್ಥ, ಕಾರ್ಯಕ್ರಮದ ರುವಾರಿಗಳಾದ ಶ್ರೀ ರತ್ನಾಕರ್ ಓಃ ಮತ್ತು ರಾಘವೇಂದ್ರ ಮಣಿಪಾಲ್ ಉ , ಹಾಗೂ ಕೇಂದ್ರೀಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸುಮಾರು 100ರಕ್ಕಿಂತಲೂ ಹಚ್ಚು ಹೂಸ ವಿವಾಹಕಾಂಕ್ಷಿಗಳು ನೂಂದಾಯಿಸಿಕೊಂಡರು.
ಭಾವೀ ವಧು-ವರರ ಅನುಕೂಲಕ್ಕಾಗಿ ಫೊಟೋಗ್ರಫಿ ಭೂತ್ ವ್ಯವಸ್ಥೆಯನ್ನು ಮಾಡಲಾಗಿತ್ತು .
ಯವ ಸಂಘಟನೆಯ ಸದಸ್ಯರು , ಮಹಿಳಾ ಸಂಘಟನೆ ಸದಸ್ಯರು ಹಾಗೂ ಮಂಗಳಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಸಿಬ್ಬಂದಿವರ್ಗದವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಸಹಕರಿಸಿದರು.
 


Share