ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಜಿ. ಮೋಹನ್ ದಾಸ್ ರವರಿಗೆ ದೇವಾಡಿಗ ಸಂಘ ಬೆಂಗಳೂರಿನ ಸನ್ಮಾನ

ಬೆಂಗಳೂರು: ದೇವಾಡಿಗ ಸಂಘ ಬೆಂಗಳೂರು ಇವರ ವತಿಯಿಂದ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಜಿ. ಮೋಹನ್ ದಾಸ್ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಗೋಕುಲ್ ವೆಜ್, ಗಾಂದಿಬಜಾರ್ ಬೆಂಗಳೂರಿನಲ್ಲಿ ಬೆಳಿಗ್ಗೆ 11 ಘಂಟೆಗೆ ಏರ್ಪಡಿಸಲಾಗಿತ್ತು. ಬೆಂಗಳೂರು:  ಪ್ರಶಸ್ತಿ ವಿಜೇತ ಬಿ.ಜಿ.ಮೋಹನದಾಸ್ ರವರಿಗೆ ಬೆಂಗಳೂರಿನ ದೇವಾಡಿಗ ಸಂಘದ ವತಿಯಿಂದ ಅದ್ದೂರಿಯ ಸನ್ಮಾನ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಚಂದ್ರ ಶೇಖರ್ ದೇವಾಡಿಗ ಅವರು ವಹಿಸಿ ಬಿ.ಜಿ.ಮೋಹನದಾಸ್ ಅವರು ಕೊಲ್ಲಿ ರಾಷ್ಟ್ರದಲ್ಲಿ ನಡೆಸಿದ ಕನ್ನಡ ಸಮಾಜ ಸೇವೆ ಮತ್ತು ಆವರು ನಡೆದು ಬಂದ ದಾರಿಯನ್ನು ವಿವರಿಸಿದರು ಮತ್ತು ಅಭಿನಂದಿಸಿದರು. 

ಮುಖ್ಯ ಅತಿಥಿಯಾಗಿ ACP. ರಮೇಶ್. ಪೂರ್ವಾದ್ಯಕ್ಷ  ರಘು ಶೇರಿಗಾರ್,  H S ದೇವಾಡಿಗ,  N . ರಮೇಶ್ ದೇವಾಡಿಗ,  S M ಚಂದ್ರ ಉಪಸ್ಥಿತರಿದ್ದರು ಹಾಗೂ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಬಿ.ಜಿ.ಮೋಹನದಾಸ್ ರವರು ಮೂರುವರೆ ದಶಕಗಳ ನಿರಂತರ ಸಾಮಾಜಿಕ ಜೀವನ ಸಾರ್ಥಕ ಮೂಡಿಸಿದೆ ಎಂದು ತಿಳಿಸಿ; ಗುರುತಿಸಿ ಗೌರವಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು. 

ಯಶೋಧ ಮೋಹನ್ ದಾಸ್, ಆರ್‌.ಗಣೇಶ್, ಎಸ್.ಎನ್ ಚಂದ್ರಶೇಖರ್ ದೇವಾಡಿಗ, ಶಿವಶಂಕರ ದೇವಾಡಿಗ, ಕೇಶವ ಎನ್, ರೇಖಾ ಸುರೇಶ್, ವಿಶು ದೇವಾಡಿಗ, ಬಿ.ಜಿ.ಮೀನಾಕ್ಷಿ ದೇವದಾಸ್, ಬಿ.ಜಿ. ಲಕ್ಷ್ಮೀಕಾಂತ್ ಬೆಸ್ಕೂರ್, ಬಿ.ಜಿ. ಕಮಲೇಶ್ ಬೆಸ್ಕೂರ್, ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


Share