ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿಜೂರು ಗೋವಿಂದಪ್ಪ ಮೋಹನ್ ದಾಸ್ ರಿಗೆ ದೇವಾಡಿಗ ನವೋದಯ ಸಂಘದ ಸನ್ಮಾನ

ನವೆಂಬರ್ 02 : ದೇವಾಡಿಗ ನವೋದಯ ಸಂಘ ಬೆಂಗಳೂರು ಇವರು ಗಲ್ಫ್ ದೇಶದಲ್ಲಿ ಕನ್ನಡದ ಕಂಪನ್ನು ಪಸರಿಸಿ 2019ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮತ್ತು ದೇವಾಡಿಗ ಸಮಾಜದ ಹೆಮ್ಮೆಯ ಶ್ರೀಯುತ ಬಿ.ಜಿ.ಮೋಹನ್ ದಾಸ್ ಅವರಿಗೆ ಸನ್ಮಾನ ಸಮಾರಂಭವನ್ನು ಪದ್ಮನಾಭ ನಗರದ ಹೊಟೇಲ್ ಗ್ರೀನ್ ಗಾರ್ಡೇನಿಯಾದಲ್ಲಿ ಏರ್ಪಡಿಸಿದ್ದರು.

ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಬಿ.ಆರ್ ದೇವಾಡಿಗರವರು ಬೀಜಿಯವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಯಶೋದ ಮೋಹನ್ ದಾಸ್, ಬೆಂಗಳೂರು ದಕ್ಷಿಣ ಸಂಚಾರಿ ಪೋಲಿಸ್ ವಿಭಾಗದ ಎ.ಸಿ.ಪಿ ಶ್ರೀ ರಮೇಶ್ ಕೆ.ಎನ್, ಲಕ್ಮೀಕಾಂತ್ ಬೆಸ್ಕೂರ್, ಕಮಲೇಶ್ ಬೆಸ್ಕೂರ್, ಪ್ರಿಯದರ್ಶಿನಿ ಕಮಲೇಶ್, ರಂಜಿತಾ ಬಿಜೂರ್ ಮತ್ತು ಸಂಘದ ಅಧ್ಯಕ್ಷರಾದ ಶ್ರೀ ಬಿ.ಆರ್ ದೇವಾಡಿಗ, ಉಪಾಧ್ಯಕ್ಷರಾದ‌ ಮಂಜುನಾಥ್ ಪಾಂಡೇಶ್ವರ್, ಗೀತಾ ಮಂಜುನಾಥ್, ಗೌರವಾಧ್ಯಕ್ಷರಾದ ಶ್ರೀ ಹರಿ ದೇವಾಡಿಗ, ಕೋಶಾಧಿಕಾರಿಯಾದ ಮಂಜುನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿಯಾದ ಕರುಣಾಕರ್ ದೇವಾಡಿಗ,  ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀ ರಾಜೇಶ್ವರಿ ಹರಿ, ಯುವ ಘಟಕದ ಅಧ್ಯಕ್ಷರಾದ ಚರಣ್ ಬೈಂದೂರು, ಉಪಾಧ್ಯಕ್ಷರಾದ ದಿನೇಶ್ ದೇವಾಡಿಗ, ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ರವಿಚಂದ್ರ ಬಾರ್ಕೂರು, ಸಾಂಸ್ಕೃತಿಕ ಕಾರ್ಯದರ್ಶಿಯಾದ ಸಾಧನ ಪ್ರಕಾಶ್ ಮತ್ತು ಸಂಘಟನಾ ಕಾರ್ಯದರ್ಶಿ ಅಭಿಷೇಕ್ ದೇವಾಡಿಗ ಉಪಸ್ಥಿತರಿದ್ದರು.

ತಮ್ಮ ಮತ್ತು ಪತ್ನಿ ಹಾಗೂ ಕುಟುಂಭ ದ ಪರವಾಗಿ ಮಾತನಾಡಿದ ಬೀಜಿಯವರು ನವೋದಯ ಸಂಘಕ್ಕೆ ತಮ್ಮನ್ನು ಗೌರವಿಸಿದಕ್ಕೆ ದನ್ಯವಾದ ಸಮರ್ಪಿಸಿ ಅವರ ಚಟುವಟಿಕೆಗಳಿಗ ಶುಭ ಕೋರಿದರು ಹಾಗೆಯೇ ಯುವ ಸದಸ್ಯರಿಗೆ ತಮ್ಮ ಗುರಿ ತಲುಪಲು ಬೇಕಿರುವ ನಾಯಕತ್ವದ ಬಗ್ಗೆ ಹಿತನುಡಿ ಹೇಳಿದರು.

ಶ್ರೀಯುತ ಬಿ.ಜಿ.ಮೋಹನ್ ದಾಸ್ ಅವರು ಮುಂದೆಯೂ ಉತ್ತಮ ಕಾರ್ಯಗಳನ್ನು ಮಾಡಿ ಕನ್ನಡದ ಕಂಪನ್ನು ಇನ್ನಷ್ಟು ದೇಶ ವಿದೇಶಗಳಲ್ಲಿ ಪಸರಿಸಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಲಿ ಎಂದು ದೇವಾಡಿಗ ನವೋದಯ ಸಂಘದ ಶುಭ ಹಾರೈಕೆ.


Share