ಕರ್ನಾಟಕ ರಾಜ್ಯ ದೇವಾಡಿಗ ಸಂಘದಿಂದ ದೀಪಾವಳಿ ಸಂಭ್ರಮ- ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬೀಜಿಯವರಿಗೆ ಸನ್ಮಾನ!

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಣ್ಣಗುಡ್ಡ , ಮಂಗಳೂರು ಹಾಗೂಮಹಿಳಾ ಮತ್ತು ಯುವ  ಸಂಘಟನೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ "ದೀಪಾವಳಿ ಸಂಭ್ರಮ 2019 " ಕಾರ್ಯಕ್ರಮವು  ಯಶಸ್ವಿಯಾಗಿ ದಿನಾಂಕ 03-11-2019ರಂದು ನಡೆಯಿತು .

ಕಾರ್ಯಕ್ರಮ ಉದ್ಘಾಟಕರಾಗಿ  ದಕ್ಷಿಣ ಕನ್ನಡ ಜಿಲ್ಲಾ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಆಗಮಿಸಿದ್ದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ತುಳುನಾಡಿನ ಶ್ರೀಮಂತ ಸಂಸ್ಕೃತಿ ಪರಂಪರೆಯ ಪರಿಚಯವನ್ನು ಮಾಡಿದರು ,ಅಲ್ಲದೇ ನಮ್ಮ  ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಪೆರ್ಮನ್ನೂರು ಇವರು ತಮ್ಮ ಆತಿಥೇಯ ಭಾಷಣದಲ್ಲಿ  ದಕ್ಷಿಣ ಕನ್ನಡದಲ್ಲಿ ದೀಪಾವಳಿ ಆಚರಣೆಯ ಮಹತ್ವ,ವೈಶಿಷ್ಟ್ಯ,  ಒಳಗುಟ್ಟುಗಳನ್ನು   ವಿವರಿಸಿದರು ಶ್ರೀಮತಿ ಸುಲೋಚನಾ ಧರ್ಮಪ್ಪ ಸಮಾಜಸೇವಕರು , ಮಂಗಳ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಬ್ಯಾಂಕಿನ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಹಿಳಾ ಸಂಘಟನೆಯ ಮಾಜಿ ಅಧ್ಯಕ್ಷರು ಶುಭ ಹಾರೈಸಿದರು.  

ಶ್ರೀ ರಾಮದಾಸ್ ಬಂಟ್ವಾಳ ಅಧ್ಯಕ್ಷರು ,ಶ್ರೀ ಪೊಳಲಿ ಷಷ್ಠಿ ರಥೋತ್ಸವ ಸಮಿತಿ ಇವರು ಕಾರ್ಯಕ್ರಮದ ಯಶಸ್ಸಿಗೆ  ಶುಭಾಶಯಗಳನ್ನು  ಕೋರುತ್ತಾ ರಾಷ್ಟ್ರ ಪ್ರೇಮದ ಜಾಗೃತಿ  ಬಿತ್ತರಿಸುವ ಕಾರ್ಯ ಪ್ರಸ್ತುತ ಜನಾಂಗದ ಜವಾಬ್ದಾರಿಯಾಗಿದೆ ಎಂದರು  ಹಾಗೂ ಗಿರಿಗಿಟ್  ಚಲನಚಿತ್ರದ ನಿರ್ದೇಶಕರಾದ ಶ್ರೀ ರಾಕೇಶ್ ಕದ್ರಿ  ಉಪಸ್ಥಿತರಿದ್ದರು

 ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿಶಿಷ್ಟ ಸಾಧನೆ ಸಾಧನೆಗೈದ ನಮ್ಮ ಸಮಾಜದ ಕೀರ್ತಿಯನ್ನು ಹಬ್ಬಿಸಿ, ಹೊರನಾಡ  ಕನ್ನಡಿಗರಾಗಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಕಂಪನ್ನು ದೇಶ-ವಿದೇಶಗಳಲ್ಲಿ ಪಸರಿಸಿ 2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಬಿ. ಜಿ ಮೋಹನ್  ದಾಸ್ , ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀಮತಿ ಶೋಭಾ ಸೋಮನಾಥ ದೇವಾಡಿಗ  ಪಾವಂಜೆ  ಹಾಗೂ ಶ್ರೀ ಸಾಧು ಸೇರಿಗಾರ್ ಬೆನಗಲ್ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ. ರಾ. ದೇ. ಸಂಘ ಮಣ್ಣಗುಡ್ಡ, ಮಂಗಳೂರು  ಅಧ್ಯಕ್ಷರಾದ ಶ್ರೀ ದೇವರಾಜ್. ಕೆ. ವಹಿಸಿದ್ದರು.  ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಅಶೋಕ್ ಮೊಯ್ಲಿ,  ಪ್ರಧಾನ ಕಾರ್ಯದರ್ಶಿ ಶ್ರೀ  ಶಿವಾನಂದ ಮೊಯ್ಲಿ, ಖಜಾಂಚಿ ಶ್ರೀಮತಿ ಗೀತಾ ಕಲ್ಯಾಣ್ ಪುರ ಉಪಸ್ಥಿತರಿದ್ದರು. 

 ಕಾರ್ಯಕ್ರಮದ ಅಂಗವಾಗಿ ಗೂಡುದೀಪ ಸ್ಪರ್ಧೆ ,ರಂಗವಲ್ಲಿ ಸ್ಪರ್ಧೆ ಹಾಗೂ  ಮೂಡೆಯನ್ನು ಕಟ್ಟುವ ಸ್ಪರ್ಧೆಯನ್ನು ಸಮಾಜ ಬಾಂಧವರಿಗಾಗಿ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ  ನೃತ್ಯ ಕಾರ್ಯಕ್ರಮಗಳು ಜರುಗಿದವು. ಅಲ್ಲದೆ ಆಗಮಿಸಿದ ಸರ್ವರಿಗೂ ದೀಪಾವಳಿ ಹಬ್ಬದ ಸಂಕೇತವಾದ ಲಘುಪಹಾರಗಳನ್ನು ಹಂಚಲಾಯಿತು .ಸಿಡಿಮದ್ದಿನ ಬೆಳಕಿನ ಚಿತ್ತಾರ, ದೀಪದಿಂದ ದೀಪ ಹಚ್ಚುವ ವಿಶಿಷ್ಟ  ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮವು ವೈಶಿಷ್ಟ್ಯ ಪೂರ್ಣವಾಗಿ  ನಡೆಯಿತು.

~ ವರದಿ: ವೀಣಾ ಗಣೇಶ್ ಚಿತ್ರಗಳು: ಸತೀಶ್ ಮರೋಳಿ


Share