ಇನ್ನು ಮುಂದೆ ಉಡುಪಿ ಸಂಘದ ಎಲ್ಲಾ ಕಾರ್ಯಕರ್ತರು ಸ್ನೇಹ ಸೌಹಾರ್ದದಲ್ಲಿ ಒಟ್ಟಿಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸಿ- ಬೀಜಿ.ಮೋಹನ್ ದಾಸ್

 ಉಡುಪಿ: ದೇವಾಡಿಗರ ಸಂಘ ಉಡುಪಿ  ಸಂಘದ   ವತಿಯಿಂದ   2019ರ   ಸಾಲಿನ   ಕರ್ನಾಟಕ ರಾಜ್ಯೋತ್ಸವ   ಪ್ರಶಸ್ತಿ   ವಿಜೇತರಾದ  ಶ್ರೀ. ಬಿ.ಜಿ. ಮೋಹನದಾಸ್   ಇವರನ್ನು   ದಿನಾಂಕ   11.11.2019 ರಂದು ಸಂಘದ   ಏಕನಾಥೇಶ್ವರಿ ಸಭಾಭವನದಲ್ಲಿ   ಸಮಾಜಬಾಂಧವರ ಸಮ್ಮುಖದಲ್ಲಿ ಗೌರವಿಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು   ಸಂಘದ   ಅಧ್ಯಕ್ಷರಾದ   ಶ್ರೀ ಯು. ರತ್ನಾಕರ ದೇವಾಡಿಗ  ವಹಿಸಿದ್ದರು.   ಶ್ರೀ ಗಣೇಶ್ ದೇವಾಡಿಗ ಅಂಬಲಪಾಡಿ ಸ್ವಾಗತಿಸಿದರು.   

ಅಭಿನಂದಿತರ ಪರವಾಗಿ ಶ್ರೀಮತಿ ವಸಂತಿ ರತ್ನಾಕರ, ಶ್ರೀಮತಿ ಜ್ಯೋತಿ ಸತೀಶ್ ದೇವಾಡಿಗ, ಶ್ರೀ ಯು. ಸುಂದರ ದೇವಾಡಿಗ, ಶ್ರೀ.ನರಸಿಂಹ ದೇವಾಡಿಗ, ಶ್ರೀ. ಸುಂದರ ಮೊಯ್ಲಿ, ಶ್ರೀ.ಸೋಮಪ್ಪ ದೇವಾಡಿಗ ಇವರುಗಳು ಶುಭಹಾರೈಸಿದರು.   

 

ಸನ್ಮಾನವನ್ನು ಸ್ವೀಕರಿಸಿದ ಶ್ರೀ   ಬಿ.ಜಿ.ಮೋಹನದಾಸರವರು ಸಂತೋಷವನ್ನು ವ್ಯಕ್ತಪಡಿಸುತ್ತಾ ಸಂಘದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಅಶ್ವಾಸನೆ ನೀಡಿದರು. ಹಾಗೆಯೇ ಇನ್ನಾದರು ಇನ್ನು ಮುಂದೆ ಉಡುಪಿ ಸಂಘದ ಎಲ್ಲಾ ಕಾರ್ಯಕರ್ತರು ಮತ್ತು ಹಿರಿಯ ಧುರೀಣರು ಸ್ನೇಹ ಸೌಹಾರ್ದದಲ್ಲಿ ಎಲ್ಲರೂ ಒಟ್ಟಿಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸುವಂತೆ ಕಳಕಳಿಯಿಂದ ವಿನಂತಿಸಿದರು.

ಶ್ರೀಮತಿ.ಅರುಣಾ ಸೀತಾರಾಮರವರು ಅಭಿನಂದನಾ ಪತ್ರವನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು. ಶ್ರೀಅಭಿಷೇಕ್  ಅಲೆವೂರು  ಇವರು ಕಾರ್ಯಕ್ರಮ ನಿರೂಪಿಸಿದರು.   

ಮುಂಬೈ ದೇವಾಡಿಗ ಸಂಘದರವಾಗಿ ಶ್ರೀ.ರಾಘು ಮೊಯ್ಲಿ ಯವರು ಮತ್ತು ಮಂಗಳೂರು ದೇವಾಡಿಗ ಸಂಘದ  ಮಾಜಿ ಅಧ್ಯಕ್ಷರಾದ   ಶ್ರೀ. ವಾಮನ  ಮರೋಳಿಯವರು ಹೂಗುಚ್ಚ ನೀಡಿ ಗೌರವಿಸಿದರು.   

ಶ್ರೀ. ಹರೀಶ್ ದೇವಾಡಿಗರವರ ಧನ್ಯವಾದದೊಂದಿಗೆ  ಸಭೆಯು ಮುಕ್ತಾಯವಾಯಿತು.

 


Share