"ಯುವ ಚಂಡೆ ಬಳಗ"ದ ನಿಧಿಗೆ ದೇವಾಡಿಗ ವೆಲ್ಫೇರ್ ಸಂಘ ಮುಂಬೈ ವತಿಯಿಂದ ಒಂದು ಚಂಡೆಯ ಮೊತ್ತ ರೂ 14,000 ಧನ ಸಹಾಯ

ದೇವಾಡಿಗರ ಒಕ್ಕೂಟ (ರಿ.)ಬೈಂದೂರು
------ ------------- --------- ----
ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಸಂಘದ ಸದಸ್ಯರನ್ನು ಒಕ್ಕೂಟದ ಪದಾಧಿಕಾರಿಗಳು ಭೇಟಿಯಾದೆವು. 

ಸಂಘದ ಕಾರ್ಯದರ್ಶಿ ಶ್ರೀ ಬಿ.ಎಮ್ ದೇವಾಡಿಗರು ಒಕ್ಕೂಟವು ಹಮ್ಮಿಕೊಂಡ ಹೊಸ ಯೋಜನೆ ""ಯುವ ಚಂಡೆ ಬಳಗ"ದ ನಿಧಿಗೆ ವೆಲ್ಫೇರ್ ವತಿಯಿಂದ ಒಂದು ಚಂಡೆಯ ಮೊತ್ತ ರೂ 14,000 ದ ಚೆಕ್ ಅನ್ನು ನೀಡಿ ಶುಭ ಹಾರೈಸಿದರು. 

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸೀತಾ ದೇವಾಡಿಗ ಹಾಗೂ ಯುವ ಘಟಕದ ಸಕ್ರಿಯ ಸದಸ್ಯ ಶ್ರೀ ಅವಿನಾಶ್ ದೇವಾಡಿಗ ಜೊತೆಯಿದ್ದರು. 

ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಶ್ರೀ ನಾರಾಯಣ ದೇವಾಡಿಗ ಬಸವನಕೆರೆ, ಗೌರವಾಧ್ಯಕ್ಷ ಶ್ರೀ ನಾರಾಯಣ ದೇವಾಡಿಗ ಹೊಸಾಡು, ಮಾಜಿ ಅಧ್ಯಕ್ಷ ಶ್ರೀ ಕೆ.ಜಿ ಸುಬ್ಬದೇವಾಡಿಗ, ಉಪಾಧ್ಯಕ್ಷ ಶ್ರೀ ನಾರಾಯಣರಾಜು, ಕಾರ್ಯದರ್ಶಿ ಶ್ರೀ ಚಂದ್ರದೇವಾಡಿಗ, ಚಂಡೆ ಬಳಗದ ಉಸ್ತುವಾರಿಗಳಾದ ಶ್ರೀ ರಾಜಶೇಖರ್ ಬೈಂದೂರು, ಶ್ರೀ ನಾರಾಯಣ ದೇವಾಡಿಗ ಕೋಣೂರು,ಸಂಘಟನಾ ಕಾರ್ಯದರ್ಶಿ ಶ್ರೀ ರಾಘವೇಂದ್ರ ದೇವಾಡಿಗ ಕಳವಾಡಿ, ಖಜಾಂಚಿ ಶ್ರೀ ರಘುರಾಮ್ ಬೈಂದೂರು ಹಾಗೂ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಸುಶೀಲ ದೇವಾಡಿಗ ಉಪಸ್ಥಿತರಿದ್ದರು.

ಮುಂಬೈ ಸಂಘದ ಸಹಕಾರಕ್ಕೆ ಒಕ್ಕೂಟವು ಆಭಾರಿಯಾಗಿರುತ್ತದೆ. ವೆಲ್ಫೇರ್ ನ ಸರ್ವ ಸದಸ್ಯರಿಗೂ ಒಕ್ಕೂಟವು ವಂದನೆಗಳನ್ನು ಸಲ್ಲಿಸುತ್ತದೆ. ಸಂವಹನ ಸಾಧ್ಯತೆಗಾಗಿ ದೇವಾಡಿಗ ನವೋದಯ ಸಂಘ (ರಿ.) ಬೆಂಗಳೂರಿನ ಶ್ರೀ ಚರಣ್ ಬೈಂದೂರು ಹಾಗೂ ವೆಲ್ಫೇರ್ ನ ಉಪಾಧ್ಯಕ್ಷ ಶ್ರೀ ಎನ್.ಎನ್ ದೇವಾಡಿಗ ಇವರಿಗೂ ಒಕ್ಕೂಟವು ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತದೆ.

ಅಧ್ಯಕ್ಷರು & ಕಾರ್ಯದರ್ಶಿ,
ಸರ್ವ ಪದಾಧಿಕಾರಿಗಳು ದೇವಾಡಿಗರ ಒಕ್ಕೂಟ (ರಿ.) ಬೈಂದೂರು.

 


Share