ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸುಮಾ ದೇವಾಡಿಗ ಇವಳಿಗೆ ಎಸ್ಪಿ. ಅಣ್ಣಾಮಲೈಯಿಂದ 10,000 ಸಹಾಯಧನ

ಅಕ್ಷತಾ ದೇವಾಡಿಗ ಕೊಲೆ ಸಂದರ್ಭದಲ್ಲಿ ತನಿಖೆಗೆ ಬಂದಾಗ ಉಡುಪಿ ಜಿಲ್ಲಾ ಪೊಲೀಸ್ ಅಧಿಕಾರಿಯಾದ ಅಣ್ಣಾಮಲೈ ಅವರು ಬೈಂದೂರು ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹುಡುಗಿಯೊಬ್ಬಳಿಗೆ ರೂ. 10,000 ನೀಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಇಂದು ಕಾಲೇಜಿನಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಸುಮಾ ದೇವಾಡಿಗ 574 ಅಂಕ ಪಡೆದು ಈ ಗೌರವಕ್ಕೆ ಪಾತ್ರಳಾಗಿದ್ದಾಳೆ. ಇವರು ಮಯ್ಯಾಡಿಯ ಲಕ್ಷ್ಮಣ ದೇವಾಡಿಗ ಮತ್ತು ಗುಲಾಬಿ ದೇವಾಡಿಗ ಇವರ ಪುತ್ರಿಯಾಗಿರುತ್ತಾರೆ.


Share