ಕ್ರಿಶ್ಚಿಯನ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿತ ಬಿಜಿ.ಮೋಹನ್ ದಾಸ್ ರಿಗೆ ಸನ್ಮಾನ

ಉಡುಪಿ: ಕ್ರಿಶ್ಚಿಯನ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ - 2019 ವಾರ್ಷಿಕೋತ್ಸವ ನೆರವೇರಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಿಜಿ.ಮೋಹನ್ ದಾಸ್ ರವರಿಗೆ ಹ್ರತ್ಪೂರ್ವಕವಾಗಿ ಸನ್ಮಾನಿಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು ಬಿ. ಜಿ.ಲಕ್ಷ್ಮೀಕಾಂತ ಬೆಸ್ಕೂರ್ ವಹಹಿಸಿದ್ದರು. ಗೌರವ ಅದ್ಯಕ್ಷರಾದ ಲಯನ್ ತಲ್ಲೂರು ಶಿವರಾಮ ಶೆಟ್ಟಿಯವರು ಬೀಜಿಯವರನ್ನು ಸನ್ಮಾನಿಸಿದರು.

ಮುಖ್ಯ ಅತಿಥಿ ಯಾಗಿ ಶ್ರೀ ಯಶಪಾಲ್ ಸುವರ್ಣ, ಸ್ಟೀಫನ್ ಕರ್ಕಡ, ನಿವೃತ್ತ ಪ್ರಾಂಶುಪಾಲರಾದ ಮಹೇಂದ್ರ ಶರ್ಮ, ನಿವೃತ್ತ ಶಿಕ್ಷಕರಾದ ಲಕ್ಷ್ಮಣ್ ರಾಯ್ ಪ್ರಭು, ಸ್ಥಾಪಕ ಅಧ್ಯಕ್ಷರಾದ ಶ್ರೀ ಈಶ್ವರ್ ಶೆಟ್ಟಿ ಚಿಟ್ಪಾಡಿ, ಪೂರ್ವಾಧ್ಯಕ್ಷರಾದ ಶ್ರೀ ದಿನೇಶ್ ಪುತ್ರನ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಹಿರಿಯ ಪದಾಧಿಕಾರಿಗಳಾದ ಸರ್ವಶ್ರೀ  ಜಿಡಿ ರಾವ್ , ಚಂದ್ರ ಮೋಹನ್, ಜಯ ಶಂಕರ್ , ಪ್ರತಾಪ್ ಕುಮಾರ್ ಉದ್ಯಾವರ, ಸತೀಶ್, ಮನೋಜ್ ಕುಮಾರ್, ಅಶೋಕ್ ಕೋಟ್ಯಾನ್ , ದಿನೇಶ್ ನಾಯಕ್ ,  ಸೀತಾರಾಮ್ ಆಚಾರ್ಯ, ಸಿಂಥಿಯ ಅಶಲತಾ, ವಿಜಯಲಕ್ಷ್ಮಿ, ಮನೋರಂಜಿನಿ, ಸೆರಾಫಿನ್ ಸೋನ್ಸ್, ರೇಣುಕಾ ಬಾಯ್, ಶೀಲಾ ಜೇನ್, ಸಂದ್ಯಾ ಕೋಟ್ಯಾನ್ ಮತ್ತು ಉಡುಪಿಯ ನಾಗರಿಕರು ಮತ್ತು ವಿಧ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.


Share