ಆಕ್ಕ್ಮೆ ಸಂಸ್ಥೆ ಈಗ ಇಪ್ಪತ್ತರ ಹರೆಯ!; ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತರಾಗಿರುವ ಹರೀಶ್!

ದುಬೈ: ಶ್ರೀ ಹರೀಶ್ ಶೇರಿಗಾರ್ ಹೆಸರು ಕರಾವಳಿಯ ಜನರಿಗಷ್ಟೇ ಅಲ್ಲ, ಈಗೀಗ ಪೂರ್ಣ ಕನ್ನಡ ನಾಡಿಗೆ  ಆವರಿಸಿಕೊಂಡಿದೆ. ಚಿರಪರಿಚಿತವಾಗಿದೆ.

ಸರಿಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ಮಂಗಳೂರಿನ ಮೂಲೆಯಿಂದ ಉದ್ಯೋಗ ಅರಸಿ ಹೊರಟು ದೂರದ ದುಬೈ ಸೇರಿಕೊಂಡರು ಅಂತ ಕಾಣುತ್ತೆ ಹರೀಶರು. ಈಗವರು ದುಬೈನಲ್ಲಿ ಆಧುನಿಕ ವಿನ್ಯಾಸಗಳನ್ನು ಅಳವಡಿಸಿಕೊಂಡು ನಿರ್ಮಾಣವಾಗುವ ಕಟ್ಟಡಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಬೃಹತ್ ಉದ್ಯಮ ಕಟ್ಟಿ ನಿಲ್ಲಿಸಿದ್ದಾರೆ. ಅದರ ಹೆಸರೇ "ಆಕ್ಮೆ".ಈಗ ಆ ಸಂಸ್ಥೆಗೆ ಯಶಸ್ವಿ ಇಪ್ಪತ್ತರ ಹರೆಯ. ಅದೂ ಹರೀಶರಷ್ಟೆ ಸುಂದರ, ಮೋಹಕ ಮತ್ತು ಪಾರದರ್ಶಕ ಇರುವುದೆಂದು ಊಹಿಸಬಲ್ಲೆ. ಕುಶಲ ಕಾರ್ಮಿಕವರ್ಗ ಮತ್ತು ವಿಶಾಲ ಗ್ರಾಹಕವರ್ಗ ಹೊಂದಿರುವುದು "ಆಕ್ಮೆ" ಯ ಹೆಗ್ಗಳಿಕೆ ಎಂದೇ ಹೇಳಬೇಕು.  ಸಾರ್ವಜನಿಕ ವಲಯದಲ್ಲಿ ಈ ಮಟ್ಟಿಗೆ ಸಮನ್ವಯ ಸಾಧಿಸಿ ಯಶಸ್ಸು ಕಾಣುವುದು ಸುಲಭದ ಮಾತಲ್ಲ. ಅದೂ ಬೇರೊಂದು ದೇಶದಲ್ಲಿ.......
 

Again ಅದರ ಹಿಂದಿನ ರೂವಾರಿ ಶ್ರಮಿಕ ಮತ್ತಾರೂ ಅಲ್ಲ ಅವರೇ ಶ್ರೀ ಹರೀಶ್ ಶೇರಿಗಾರ್.  ಕನ್ನಡದ ಬಗ್ಗೆ ಅಪಾರ ಗೌರವ, ಅಭಿಮಾನ ಅವರಿಗೆ. ಕನ್ನಡ ಎಂದರೆ ಕುಣಿಕುಣಿದು ಹಾಡುತ್ತಾರೆ.ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಮತ್ತು ಇಲ್ಲಿನ ಜನರ ಬಗ್ಗೆ ಎಲ್ಲಿಲ್ಲದ ಅಕ್ಕರೆ ತೋರುವ ಹರೀಶ್ ರು ಬರಿ ವ್ಯವಹಾರಾಸಕ್ತಿಯನ್ನಷ್ಟೇ ಹೊಂದಿಲ್ಲ. ಲಲಿತ ಕಲೆಗಳಲ್ಲಿಯೂ ಅವರಿಗೆ ಸಮಾನ ಅಭಿರುಚಿ ಉಂಟು. ಸಂಗೀತದಲ್ಲಿ ವಿಶೇಷ ಒಲವು ಹೊಂದಿರುವ ಹರೀಶ್ ಶೇರಿಗಾರ್  ಸ್ವತಃ ಶುಶ್ರಾವ್ಯ ಹಾಡುಗಾರರೂ ಹೌದು. ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕರಾಗಿ ಸದಭಿರುಚಿ ಚಿತ್ರಗಳನ್ನು ತಯಾರಿಸಿ ಅಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. 

"ಮಾರ್ಚ್22, "ಯಾನ",  "ಗೇಣು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ"ಕನ್ನಡ ಚಿತ್ರಗಳನ್ನು ತೆರೆಗರ್ಪಿಸಿ ಈಗ ತಮ್ಮ ಮನೆ ಭಾಷೆ ತುಳು ವಿನಲ್ಲಿ "ಇಂಗ್ಲಿಷ್" ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 

ಒಬ್ಬ ಮನುಷ್ಯ ಒಂದು ವಲಯದಲ್ಲಿ ಅನುಭವ ಪಡೆದು ಸುಮ್ಮನಾಗುತ್ತಾನೆ. ಹರೀಶರ ಜಾಯಮಾನ ಅಂಥದ್ದಲ್ಲ. 

ಸಣ್ಣ ಸಮಯವಿರುವ ಬದುಕಿನಲ್ಲಿ ದೊಡ್ಡ ಸಾಧನೆ ಮಾಡಬೇಕು. ಕನಿಷ್ಠ ಆ ಪ್ರಯತ್ನದ ಹಾದಿಯಲ್ಲಾದರೂ ಇರಬೇಕು ಅನ್ನುವ ಹಂಬಲ ಅವರದು. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತರಾಗಿರುವ ಹರೀಶ್ ಅವರದ್ದು ಎಂದೂ ಬತ್ತದ ಉತ್ಸಾಹ,ಅವರ ಮುಖದಲ್ಲಿ ಮಂದಹಾಸ ಸ್ವಂತ ಮನೆಮಾಡಿಕೊಂಡಿದೆ. ದಣಿವಿಗೆ ಅಲ್ಲಿ ಜಾಗವಿಲ್ಲ. ಇಷ್ಟಕ್ಕೆಲ್ಲ ಕಾರಣ ಬೇರಾರೂ ಅಲ್ಲ ಅವರೇ ಒನ್ ಅಂಡ್ ಓನ್ಲಿ - ಶ್ರೀಮತಿ ಶರ್ಮಿಳಾ ಶೇರಿಗಾರ್. ಹರೀಶ್ ಅವರ ಧರ್ಮಪತ್ನಿ. ಮಿಸ್ಟರ್ ಶೇರಿಗಾರ್ ಅವರ ಹೆಜ್ಜೆ ಹೆಜ್ಜೆಯಲ್ಲೂ ಮಿಸ್ಸೆಸ್ ಶೇರಿಗಾರ್ ಕಾಣಸಿಗುತ್ತಾರೆ. 

ಮುಂದೊಂದು ಶುಭ ಸಂದರ್ಭದಲ್ಲಿ ಅವರ ಬಗ್ಗೆ ಮತ್ತಷ್ಟು ಬರೆದೇನು. ಈಗ ಶೇರಿಗಾರ್ ಕುಟುಂಬಕ್ಕೆ ದೇವರು  ಒಳ್ಳೆಯದು ಮಾಡಲಿ, ಇವರಿಂದ ಜನರಿಗೆ ಒಳ್ಳೆಯದಾಗಲಿ.

 

"ಅಕ್ಮೆ" ನಿರಂತರ ನಿರ್ಭಯಯವಾಗಿರಲಿ. ಶ್ರೀರಸ್ತು ಶುಭಮಸ್ತು.

ಕೃಪೆ: Acme Int. Movies Whatsapp Group:  +91 88847 22599 


Share