ಉಡುಪಿ: ರಂಗಭೂಮಿ(ರಿ) ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ.ಜಿ.ಮೋಹನ್ ದಾಸ್ ರವರಿಗೆ ಸನ್ಮಾನ

ಉಡುಪಿ::ರಂಗಭೂಮಿ (ರಿ.)ಉಡುಪಿ ವತಿಯಿಂದ 40ನೆಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಮೊದಲದಿನ ತಾ.21-11-2019 ರಂದು ಉದ್ಘಾಟನ ಸಮಾರಂಭದಲ್ಲಿ  ಉಡುಪಿಯವರಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರುಗಳಾದ ಬಿ.ಜಿ.ಮೋಹನ್ ದಾಸ ಮತ್ತಿಬ್ಬರನ್ನು ಸನ್ಮಾನಿಸಲಾಯಿತು.

ರಂಗಭೂಮಿ (ರಿ.)ಉಡುಪಿ

40ನೆಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ- 2019
( ದಿ| ಡಾ|ಟಿ.ಎಂ.ಎ ಪೈ, ದಿ| ಎಸ್.ಎಲ್.ನಾರಾಯಣ ಭಟ್ ಮತ್ತು ದಿ| ಮಲ್ಪೆ ಮಧ್ವರಾಜ್ ಸ್ಮಾರಕ )

ನವೆಂಬರ್ 21ರಿಂದ ಡಿಸೆಂಬರ್ 2ರ ತನಕ
ಸ್ಥಳ : ನೂತನ ರವೀಂದ್ರ ಮಂಟಪ, ಎಂ.ಜಿ.ಎಂ. ಕಾಲೇಜು, ಉಡುಪಿ.

ಇಂದು ಉದ್ಘಾಟನಾ ಸಮಾರಂಭ :ಸಮಯ : ಸಂಜೆ 6ರಿಂದ

ಉದ್ಘಾಟನೆ : ಡಾ| ಎಂ. ಜಿ. ವಿಜಯ ( ಪ್ರಾಂಶುಪಾಲರು, ಎಂಜಿಎಂ ಕಾಲೇಜು) 
ಮುಖ್ಯ ಅತಿಥಿ : ಶ್ರೀ ಪ್ರಮೋದ್ ಮಧ್ವರಾಜ್ ( ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು )
ಅತಿಥಿ : ಶ್ರೀ ಕುಮಾರ ಬೆಕ್ಕೇರಿ ( ಸ. ನಿ,, ಕ & ಸಂ ಇಲಾಖೆ, ಉಡುಪಿ)

ಗೌರವ ಸನ್ಮಾನ : 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರುಗಳಾದ 

1. ಶ್ರೀ ರಮೇಶ್ ರಾವ್ ( ಖ್ಯಾತ ಚಿತ್ರಕಾರರು)
2. ಶ್ರೀ ಬಿ.ಜಿ. ಮೋಹನ್ ದಾಸ್ (ಗಲ್ಫ್ ಕನ್ನಡಿಗ)
3. ಡಾ| ಕೆ.ಕೃಷ್ಣಪ್ರಸಾದ್ ( ಖ್ಯಾತ ನೇತ್ರ ತಜ್ಞರು) 

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರುಗಳಾದ : 
1. ಶ್ರೀ ರಾಘವೇಂದ್ರ ಭಟ್ ( ರಂಗಭೂಮಿ ಸಂಗೀತ ನಿರ್ದೇಶಕರು)
2. ಉಪೇಂದ್ರ ಸೋಮಯಾಜಿ ( ಹಿರಿಯ ಸಾಹಿತಿ)

- ಕಾರ್ಯಕಾರಿ ಮಂಡಳಿ,
ರಂಗಭೂಮಿ (ರಿ.) ಉಡುಪಿ


Share