ಹುಟ್ಟೂರಿನಲ್ಲಿ ಸನ್ಮಾನ, ಹೃದಯಪೂರ್ವಕವಾಗಿ ಹರಿಸಿದ ಜನರು; ಸಾರ್ಥಕತೆಯಲ್ಲಿ ಮಿಂದು ಭಾವಪರವಶರಾದ ಬೀಜಿ

ಬಿಜೂರು: ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಜೂರು ಗೋವಿಂದಪ್ಪ ಮೋಹನ್‍ದಾಸ್ ಇವರಿಗೆ ಹುಟ್ಟೂರ ಸನ್ಮಾನ 

ಬೈಂದೂರು : ಬಿಜೂರು ನಂದಿಕೇಶ್ವರ ಫ್ರೆಂಡ್ಸ್ ಇವರ ವತಿಯಿಂದ ಇತ್ತೀಚಿಗಷ್ಟೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಜೂರು ಗೋವಿಂದಪ್ಪ ಮೋಹನ್‍ದಾಸ್ ಇವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಬುಧವಾರ ಸಂಜೆ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಿತು.

ಬೈಂದೂರು ನಿವೃತ್ತ ಐ.ಎಫ್.ಎಸ್. ಅಧಿಕಾರಿ ಬಿ.ಜಗನ್ನಾಥ ಶೆಟ್ಟಿ ಅವರು ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರುಗಾರ್ ಪುಣೆ ಸಭಾರಂಭದ ಅಧ್ಯಕ್ಷತೆ ವಹಿಸಿದರು.

ಬಿಜೂರು ನಂದಿಕೇಶ್ವರ ಫ್ರೆಂಡ್ಸ್ ಆಶ್ರಯದಲ್ಲಿ ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ ಮೋಹನದಾಸ್ ಅವರ ಹುಟ್ಟೂರ ಸನ್ಮಾನ ಕಾರ್ಯಕ್ರಮದ ಅಭಿನಂದನಾ ಭಾಷಣದಲ್ಲಿ ’ ಉದ್ಯೋಗ ಅರಸಿ 80ರ ದಶಕದಲ್ಲಿ ದುಬೈಗೆ ಹೋದ ಬಿ.ಜಿ. ಮೋಹನದಾಸ್ ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಜೊತೆಗೆ ಅಲ್ಲಿ ಅವರು ಕಟ್ಟಿ ಬೆಳಸಿದ ಕನ್ನಡದ ಸಂಘಟನೆ ಇನ್ನೂ ಕಾರ್ಯನಿರತವಾಗಿದ” ಎಂದು ಸಮುದಾಯದ ಅಭಿವೃದ್ಧಿಗೆ ಮೋಹನ್‍ದಾಸ್ ಅವರ ಕೊಡುಗೆಯನ್ನು ನೆನಪಿಸುತ್ತಾ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಬಿಜೂರು ವಿಶ್ವೇಶ್ವರ ಅಡಿಗ ಅವರು ಈ ಬೃಹತ್ ಸಮಾರಂಭದಲ್ಲಿ ನೆರೆದಿದ್ದ ಅಪಾರ ಸಭಿಕರಿಗೆ ಅರಿವು ಮಾಡಿಕೊಟ್ಟರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಬಿಜೂರು ಗೋವಿಂದಪ್ಪ ಮೋಹನ್‍ದಾಸ್ ರೊಡನೆ, ಉದ್ಯಮ ಕ್ಶೇತ್ರದಲ್ಲಿ  ಸಾಧನೆಗೈದ ಗೋವಿಂದ ಬಾಬು ಪೂಜಾರಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಶಂಕರ್ ಪೂಜಾರಿ ಕಾಡಿನತಾರು ಬಿಜೂರು ಅವರನ್ನು ಹುಟ್ಟೂರ ಸನ್ಮಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಾರದಾ ಡಿ. ಬಿಜೂರು, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬೈಂದೂರು ಬಿಜೆಪಿ ಮಂಡಲದ ಕಾಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಬಿಜೂರು ಮಂಡಲ ಪಂಚಾಯತ್ ಮಾಜಿ ಸದಸ್ಯೆ ಅನುಸೂಯ ಕೆ ಬಿಜೂರು, ಮಾಲತಿ ಗೋವಿಂದ ಬಾಬು ಪೂಜಾರಿ, ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಸಂಚಾಲಕ ಹಿರಿಯಡ್ಕ ಮೋಹನ್‍ದಾಸ್, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ದೇವರಾಜ್ ಕೆ ದೇವಾಡಿಗ, ಉಪ್ಪುಂದ ಮಾತಾ ಫರ್ನಿಚರ್ಸ್ ಎಲೆಕ್ಟ್ರಿಕಲ್ & ಹೋಮ್ ಅಪ್ಲಾಯನ್ಸಸ್ ಮಾಲೀಕ ಆನಂದ ಪೂಜಾರಿ ಇವರೆಲ್ಲರೂ ಭಾಗವಹಿಸಿದ್ದರು.

ಬಿ.ಜಿ. ಲಕ್ಷ್ಮೀಕಾಂತ್ ಬೆಸ್ಕೂರ ಸ್ವಾಗತಿಸಿ / ಪ್ರಾಸ್ತಾವಿಕ ಮಾತನಾಡಿದರು.

ಶಿಕ್ಷಕ ಸುಬ್ರಹ್ಮಣ್ಯ ಜಿ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು, ಉಪನ್ಯಾಸ ಸತೀಶ್ ಎಂ ಹಾಗೂ ಪೂರ್ಣಿಮಾ ಕಲ್ಮಕ್ಕಿ ಸನ್ಮಾನ ಪತ್ರವನ್ನು ವಾಚಿಸಿದರು. ಬಿ.ಜಿ ಪ್ರಿಯದರ್ಶಿನಿ ಬೆಸ್ಕೂರು ವಂದಿಸಿದರು.

ಸಂಜೆ ರಾಘವೇಂದ್ರ ಆಚಾರ್ಯ ಜನ್ಸಾಲೆ, ಪಟ್ಲ ಸತೀಶ್ ಶೆಟ್ಟಿ ಮತ್ತು ಕಾವ್ಯಶ್ರೀ ಅಜೇರು ಇವರ ಸಾರಿಥ್ಯದಲ್ಲಿ ಯಕ್ಷ ಗಾನ, ನಾಟ್ಯ ವೈಭವ ಹಾಗೂ ಸಭಾ ಕಾರ್ಯಕ್ರಮದ ಬಳಿಕ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಸ್ಮಾರ್ಟ್ ಡ್ಯಾನ್ಸ್ ಗ್ರೂಪ್ ಶಿರಸಿ ಇವರಿಂದ ಡಾನ್ಸ್ ಧಮಾಕ ನಡೆಯಿತು.

ಚಿತ್ರ/ವರದಿ :   ಎಚ್. ಸುಶಾಂತ್ ಬೈಂದೂರು/ ಆಶಾ ಉಪ್ಪುಂದ


Share