ಕಾವ್ಯ ಭೂಷಣ ಪ್ರಶಸ್ತಿಗೆ ಭಾಜನರಾದ ಶ್ರೀ ಜಗದೀಶ ದೇವಾಡಿಗ ಮೇಲ್ಮನೆ ಉಪ್ಪುಂದ.

ಬೀದರ:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಮಂದಾರ ಕಲಾವಿದರ ವೇದಿಕೆ (ರಿ.)ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ಬೀದರ್ ನಲ್ಲಿ ಪ್ರಪ್ರಥಮ ಬಾರಿಗೆ ದಿನಾಂಕ : 15-12-2019 ಭಾನುವಾರ ಜಿಲ್ಲಾ ರಂಗಮಂದಿರ ಬೀದರದಲ್ಲಿ ಜರುಗಿದ ರಾಜ್ಯ ಮಟ್ಟದ ರಜತ ಕವಿ ಸಮ್ಮೇಳನ ಹಾಗೂ ಸನ್ಮಾನ-2019 ಕಾರ್ಯಕ್ರಮದಲ್ಲಿ ಮೇಲ್ಮನೆ ಉಪ್ಪುಂದ  ಜಗದೀಶ್ ದೇವಾಡಿಗರಿಗೆ ’ಕಾವ್ಯ ಭೂಷಣ ಪ್ರಶಸ್ತಿ ’ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಪರಿಚಯ:

ಶ್ರೀ ಜಗದೀಶ್ ದೇವಾಡಿಗ ಇವರು ಮೇಲ್ಮನೆ ಉಪ್ಪುಂದ ಬೈಂದೂರು ತಾಲೂಕಿನ ಉಡುಪಿ ಜಿಲ್ಲೆಯವರು. ಶ್ರೀ ಭದ್ರ ದೇವಾಡಿಗ ಮತ್ತು ಚಂದು ದೇವಾಡಿಗರವರ ಎರಡನೇಯ ಸುಪುತ್ರನಾಗಿ (07:03:1985) ಜನಿಸಿದರು.

ಪ್ರಾಥಮಿಕ ವಿದ್ಯಾಭ್ಯಾಸ ಸರ್ಕಾರಿ ಹಿರಿಯ ಪ್ರಾಥಮಿಕ ಉಪ್ಪುಂದ ಶಾಲೆಯಲ್ಲಿ ಮುಗಿಸಿದ ಇವರು ಬಿ.ಎ ಪದವೀಧರರು.ಕೊಂಕಣ ರೈಲ್ವೆಯಲ್ಲಿ ಉದ್ಯೋಗಸ್ಥರಾಗಿ ಸೇವೆ ಸಲ್ಲಿಸುತ್ತಿರುವಾಗಲೆ ನಾಟಕಗಳನ್ನು ಜೊತೆಗೆ ಬೀದಿ  ನಾಟಕಗಳನ್ನು ಮಾಡಿರುವ ಹಿರಿಮೆ ಇವರಿಗೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯ ಬರೆಯುವುದರೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 250ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿರುವ ಗರಿಮೆ ಇವರಿಗೆ.ಸಂಪಾದನೆಯಲ್ಲಿ ಸಾಹಿತ್ಯ ಸೇವೆಗೆ ನಿಧಿಯನ್ನು ಮೀಸಲಿರಿಸಿದ ಧೀರರು.ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕೀರ್ತಿ ಇವರಿಗೆ.ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

ನಮ್ಮ ಮಂದಾರ ಕಲಾವಿದರ ವೇದಿಕೆಯು ಹಲವು ವರ್ಷಗಳಿಂದ ಈ ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕಾರ್ಯ ನಿರಂತರ ಮಾಡುತ್ತಾ ಬಂದಿದ್ದೇವೆ.ಈ ವೇದಿಕೆ ಮೂಲಕ ಈಗಾಗಲೇ ತಾಲ್ಲೂಕು, ಜಿಲ್ಲಾ ವಿಭಾಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅಭೂತಪೂರ್ವ ಅದ್ಭುತ ಸಮಾರಂಭಗಳ ಮಾಡಿದ್ದು ಅವಿಸ್ಮರಣೀಯ.ನಾಡಿನ ಅನೇಕ ಎಲೆ ಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸುವುದರೊಂದಿಗೆ ಅವರಿಗೆ ಪ್ರಶಸ್ತಿ ಗೌರವಗಳಿಂದ ಸತ್ಕರಿಸಿದ ಹೆಮ್ಮೆ ಈ ಸಂಸ್ಥೆಗೆ ಎಂದರೆ ತಪ್ಪಾಗಲಾರದು.ಈ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಈ ಪೂರ್ವದಲ್ಲಿ ರಾಷ್ಟ್ರಮಟ್ಟದ ಬಹುಭಾಷಾ ಕವಿಗೋಷ್ಠಿ,ರಾಜ್ಯದ ಮಟ್ಟದ ಕಲಾಂಜಲಿ ಸಮ್ಮೇಳನ ಹೀಗೆ ಹತ್ತು ಹಲವು ಬೃಹತ್ ಕಾರ್ಯಗಳನ್ನು ಆಯೋಜಿಸಿದ್ದು ಸ್ಮರಣೀಯ.

ಸಾಹಿತ್ಯ ಮಾತ್ರವಲ್ಲದೆ ಇತರ ಬಹುವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆಯಿಂದ ಉತ್ತಮ ಸೇವೆ ಮಾಡಿದ ಚೇತನ ಶಿಲ್ಪಿಗಳಿಗೆ ಗೌರವಿಸಿರುವುದು ಈ ಸಂಸ್ಥೆಯ ಅಹೋಭಾಗ್ಯ ಎಂದೇ ಹೇಳಬಹುದು.ಜೊತೆಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರಿಗೂ ಪ್ರಶಸ್ತಿಗಳು ನೀಡಿದ್ದು ಇಡೀ ರಾಜ್ಯಕ್ಕೆ ಮಾದರಿ.

ಈಗ ಮತ್ತೊಮ್ಮೆ ಬೀದರನಲ್ಲಿ ಪ್ರಪ್ರಥಮ ಬಾರಿಗೆ ರಂಗಮಂದಿರದಲ್ಲಿ ರಾಜ್ಯ ಮಟ್ಟದ ರಜತ ಕವಿ ಸಮ್ಮೇಳನ ಮಾಡುತ್ತಿರುವುದು ಯಶೋಗಾಥೆಯ ಮೈಲಿಗಲ್ಲು.

ತಾವು ಜಗದೀಶ್ ದೇವಾಡಿಗ ಈ ಭವ್ಯ ಸಮಾರಂಭದಲ್ಲಿ ಪಾಲ್ಗೊಂಡು ಕಾವ್ಯ ಪ್ರದರ್ಶಿಸಿ ಈ ಕಾರ್ಯಕ್ರಮ ಕ್ಕೆ ಶೋಭೆ ತಂದ ಕಾರಣವಾಗಿ ತಮಗೆ ಈ ’ಕಾವ್ಯ ಭೂಷಣ ಪ್ರಶಸ್ತಿ ’ ಪ್ರದಾನ ಮಾಡಿ ಗೌರವಿಸಲಾಯಿತು. 


Share