ಸುಶೀಲಾ ಎಸ್. ದೇವಾಡಿಗರಿಗೆ ಮುಂಬಯಿ ವಿಶ್ವವಿದ್ಯಾಲಯದ ಎಂಫಿಲ್ ಪದವಿ

ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ಸುಶೀಲಾ ಎಸ್ ದೇವಾಡಿಗ ಅವರು ಬರೆದು ಸಲ್ಲಿಸಿದ ’ಕರ್ನಾಟಕ ಸಂಘ ಮುಂಬಯಿಯ ಸಿದ್ದ ಸಾಧನೆಗಳು ’ ಎಂಬ ಸಂಪ್ರಬಂಧವನ್ನು ಮನ್ನಿಸಿ ಮುಂಬಯಿ ವಿಶ್ವವಿದ್ಯಾಲಯ ಅವರಿಗೆ ಎಂಫಿಲ್ ಪದವಿಯನ್ನು ನೀಡಿ ಗೌರವಿಸಿದೆ.

ಸುಶೀಲಾ ದೇವಾಡಿಗ ಅವರು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದಾರೆ.

ಸುಶೀಲಾ ದೇವಾಡಿಗ ಅವರು ಮೂಲತಃ ಬೈಂದೂರಿನ ಯಡ್ತರೆ ಗ್ರಾಮದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಂ ಪದವಿ ಪಡೆದ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಭಾರತ ಸರಕಾರದ ಪ್ರಸಾರ ಭಾರತಿ ನಡೆಸುವ ಆಕಾಶವಾಣಿಗೆ ಸಂಬಂಧಿಸಿದ ವಾಣಿ ಕೋರ್ಸ್ ಪದವಿಯನ್ನು ಪಡೆದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಸುಶೀಲಾ ದೇವಾಡಿಗ ಅವರು ಕನ್ನಡವಲ್ಲದೇ ಇತರ ಭಾರತೀಯ ಭಾಷೆಗಳ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಸಹಕರಿಸಿದ್ದಾರೆ.

ಕಳೆದ ಹದಿನೇಳು ವರ್ಷಗಳಿಂದ ಮುಂಬಯಿ ಆಕಾಶವಾಣಿಯಲ್ಲಿ ವಿವಿಧ ಪ್ರಕಾರಗಳ ಮಹತ್ವದ ಕನ್ನಡ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಮುಂಬಯಿ ಆಕಾಶವಾಣಿಗಾಗಿ ಅನೇಕ ಸಾಧಕರ ಆರ್ಕೈವೆಲ್ ಯೋಜನೆಯಲ್ಲೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಘ ಮಾಟುಂಗದ ಕಲಾಭಾರತಿ ಹಾಗೂ ಮಹಿಳಾ ವಿಭಾಗದ ಸಂಚಾಲಕರಾಗಿ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿ, ಕೃಷ್ಣ ವಿಠ್ಠ¯ ಪ್ರತಿಷ್ಠಾನದ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಕಳೆದ ಅನೇಕ ವರ್ಷಗಳಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಳ್ಳೆಯ ಗಾಯಕಿಯೂ ಆಗಿರುವ ಅವರು ಅನೇಕ ಮಹತ್ವದ ಕಾರ್ಯಕ್ರಮಗಳ ನಿರ್ವಹಣೆಯನ್ನೂ ಮಾಡಿದ್ದಾರೆ. 

ಇವ್ರಿಗೆ ನಮ್ಮ ಅಭಿನಂದನೆ ಹಾಗೂ ಶುಭಹಾರೈಕೆಗಳು


Share