55 ನೇ ಸೇವಾಯಜ್ಣವನ್ನು ಪೂರೈಸಿದ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್
ಮುಂಬೈ: ನೊಂದ ದೇವಾಡಿಗರ ಸೇವೇಯೇ ದೇವರ ಸೇವೇ ಎನ್ನುವ ಮೂಲ ಉದ್ದೇಶ ಮತ್ತು ಸೇವಾಕಾರ್ಯವೇ ಮೂಲ ಮಂತ್ರವೇಂದು ಹುಟ್ಟಿಕೊಂಡ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ( ಜಾಗತಿಕ ಬಳಗ ) ಸ್ಥಾಪನೇಗೊಂಡ ಒಂದೂವರೇ ವರ್ಷದ ಒಳಗೇ ದಿಸೆಂಬರ್ ತಿಂಗಳಲ್ಲಿ ತನ್ನ 55 ನೇ ಸೇವಾಕಾರ್ಯವನ್ನು ಮುಗಿಸಿ ದೇವಾಡಿಗ ಸಮಾಜದಲ್ಲಿ ತನ್ನ ಹಜ್ಜೆ ಗುರುತನ್ನು ಮೂಡಿಸಿದೆ .
*2019 ದಿಸೆಂಬರ್ 15 ರಂದು ಕಾರ್ಕಳ ತಾಲೂಕು ಕಣಜಾರುಗೆ ತೇರಳಿ ಅಲ್ಲಿ ದವಡೇ ಕರ್ಕರೋಗದಿಂದ ಬಳಲುತ್ತಿರುವ ಶ್ರೀ ಚಂದು ದೇವಾಡಿಗರಿಗೆ ರೂ 18000/- ವೈದ್ಯಕೀಯ ಸಹಾಯ ಧನ ಹಸ್ತಾಂತರಿಸಲಾಯಿತು ( 52 ನೇ ಸೇವಾಯಜ್ಣ )
* ಅದೇ ದಿನ ಕಾರ್ಕಳ ತಾಲೂಕು ನಿಂಜೂರು ಪಳ್ಳಿ ಗ್ರಾಮಕ್ಕೇ ತೇರಳಿ ಕಿಡ್ನಿ ಸಮಸ್ಯೇ ಪೀಡಿತ ಶ್ರೀ ಸುರೇಶ ದೇವಾಡಿಗರಿಗೇ ರೂ 25000/- ವೈದ್ಯಕೀಯ ಸಹಾಯ ಧನ ಹಸ್ತಾಂತರಿಸಲಾಯಿತು(53 ನೇ ಸೇವಾಯಜ್ಣ ).
* 2019 ದಿಸೆಂಬರ್21 ರಂದು ಕುಂದಾಪುರ ತಾಲೂಕಿನ ಅಂಕದಕಟ್ಟೆಗೆ ತೇರಳಿ ಇತ್ತೀಚೆಗೆ ಹೇರಿಗೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮ್ರತ ಪಟ್ಟ ಸುಜಾತಳ ಮನೇಯವರಿಗೇ ವೈದ್ಯಕೀಯ ವೇಚ್ಚಕ್ಕಾಗಿ 20,000/- ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು(54 ನೇ ಸೇವಾಯಜ್ಣ )
*2019 ದಿಸೆಂಬರ್ 29 ರಂದು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಆಲೂರು ನಿವಾಸಿ ಆನಂದ ದೇವಾಡಿಗರಿಗೆ ಅವರು ಚಿಕಿತ್ಸೆ ಪಡೇಯುತಿದ್ದ ಕುಂದಾಪುರ ಆದರ್ಶ ಆಸ್ಪತ್ರೇಗೆ ತೇರಳಿ ರೂ 10,000/- ತುರ್ತು ಆರ್ಥಿಕ ಸಹಾಯ ನೀಡಿ 55 ನೇ ಸೇವಾಯಜ್ಣವನ್ನು ಪೂರೈಸಿತು.
ಒಟ್ಟಾರೇಯಾಗಿ ಬಳಗದ ತನು ಮನ ಧನ ದ ಸಹಕಾರದಿಂದ ಫೌಂಡೇಶನ್ ರೂ 73000/- ತನ್ನ ನೊಂದವರಿಗೇ ನೀಡುವಂತಾಯಿತು. ನೊಂದ ದೇವಾಡಿಗರ ಜತೇ ಯಾವಾಲೂ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ಇದೇ ಎನ್ನುವ ಸಂದೇಶ ನೀಡಿದೆ. ಈ ಸೇವಾ ಯಜ್ಣಗಳಲ್ಲಿ ಶ್ರೀ ಅಶೋಕ ದೇವಾಡಿಗ ಮುಂಬೈ, ಸೇವಾದಾರರು ಆದ ಶ್ರೀ ಯಾದವ ದೇವಾಡಿಗ ಕೆ.ಜಿ ರೋಡು; ಶ್ರೀ ಶಂಕರ ಅಂಕದಕಟ್ಟೆ ಶ್ರೀ ಸತೀಶ ದೇವಾಡಿಗ ಕಾರ್ಕಡ; ಶ್ರೀ ಮಹೇಂದ್ರ ದೇವಾಡಿಗ ಸಾಲಿಗ್ರಾಮ; , ಶ್ರೀ ನಾರಾಯಣ ರಾವ್ ಹೊಸಾಳ; , ಶ್ರೀ ರಾಮ ದೇವಾಡಿಗ ಬೈಂದೂರು; ಶ್ರೀ ಪುರುಷೋತ್ತಮ ದಾಸ್ ಉಪ್ಪುಂದ ; ಶ್ರೀ ಮಹಾಲಿಂಗ ದೇವಾಡಿಗರು ಬೈಂದೂರು; ಶ್ರೀ ಮೋಹನ್ ದೇವಾಡಿಗ ಕೊಂಕಣರೈಲ್ವೇ; ಶ್ರೀ ನಾಗೇಂದ್ರ ದೇವಾಡಿಗ ಬೀಜುರು, ಶ್ರೀ ದಿನೇಶ ದೇವಾಡಿಗ ಕುಂದಾಪುರ, ಶ್ರೀ ಚಂದ್ರ ದೇವಾಡಿಗ ನಾಯ್ಕನ ಕಟ್ಟೇ; ಶ್ರೀ ಅಭಿಷೇಕ ಆಲೂರು, ಶ್ರೀ ರಾಘವೇಂದ್ರ ದೇವಾಡಿಗ ಡೋಡ್ಡೋಣಿ ಉಪಸ್ಥಿತರಿದ್ದರು.