Pencil Leaf Artist - Akshay Devadiga ; Udupi (Video)

ವಿಶೇಷವಾಗಿ ಎಲೆಯ ಮೇಲೆ ಚಿತ್ರ ಬಿಡಿಸುವ ಅಪರೂಪದ ಕಲಾವಿದ ಅಕ್ಷಯ್ ದೇವಾಡಿಗ ಅವರ ಸಾಧನೆಯನ್ನು ಪ್ರಸ್ತುತಪಡಿಸುತ್ತಿರುವ ವಿಡಿಯೋ (clik this link)

ಎಲ್ಲರೊಳಗೂ ಒಂದು ಅದ್ಭುತವಾದ ಶಕ್ತಿ ಇರುತ್ತದೆ ಆ ಶಕ್ತಿಯನ್ನು ಗುರುತಿಸಿ ಅದನ್ನು ಬೆಳೆಸಿ ಹೊರಹೊಮ್ಮಿಸುವ ತಾಕತ್ತು ಇರುವುದು ಕೆಲವೇ ಕೆಲವು ಜನರಿಗೆ ಮಾತ್ರ.ಕಲೆ ಎಂಬುದು ಅಭ್ಯಾಸ,ಶ್ರಮ,ತಾಳ್ಮೆ,ಹವ್ಯಾಸ, ಏಕಾಗ್ರತೆ ಆಸಕ್ತಿಗಳಿಂದ ಹುಟ್ಟಿಕೊಳ್ಳುವ ಒಂದು ಅಪರೂಪದ ಕಲೆಯ ರೂಪವಾಗಿದೆ.ಈಗಿನ ಯುವ ಸಮುದಾಯ ಅನೇಕ ರೀತಿಯ ಹೊಸ ಹೊಸ ಕಲೆಯನ್ನು ಮೈಗೂಡಿಸಿಕೊಂಡು ಬರುತ್ತಿದ್ದಾರೆ.ಕಲೆ ಎಂಬುದು ಯಾರಿಗೂ ಹುಟ್ಟಿನಿಂದಲೇ ಬರಲು ಸಾಧ್ಯವಿಲ್ಲ ತಾನು ಬೆಳೆಯುತ್ತಾ ಬೆಳೆಯುತ್ತಾ ತನ್ನಲ್ಲಿ ಯಾವುದೋ ಒಂದು ಪ್ರತಿಭೆ ಇದೆ ಎಂಬುದು ತಿಳಿಯುತ್ತದೆ,ಆಗ ಕಲೆಗಾರ ತನ್ನಲ್ಲಿರುವ ಪ್ರತಿಭೆಗೆ ಜೀವ ತುಂಬುವ ಪ್ರಯತ್ನವನ್ನು ಮಾಡಲು ಆರಂಭಿಸುತ್ತಾನೆ.ಕಲೆ ಎಂಬುದು ಅನೇಕ ಜನರಿಗೆ ಹವ್ಯಾಸವಾಗಿದ್ದರೆ ಅನೇಕ ಜನರಿಗೆ ಕಲೆಯೇ ಬದುಕು ಕಟ್ಟಿಕೊಟ್ಟಿರುವ ಅನೇಕ ಉದಾಹರಣೆಗಳಿವೆ.

ಅನೇಕ ಪ್ರತಿಭೆಗಳು ತನ್ನಲ್ಲಿ ಅದ್ಭುತವಾದ ಪ್ರತಿಭೆ ಇದ್ದರೂ ಅದನ್ನ ತನ್ನೊಳಗೆ ಬಚ್ಚಿಟ್ಟುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಬಯಸುವುದಿಲ್ಲ ಅಂತ ಪ್ರತಿಭೆಯಲ್ಲಿ ಇವರು ಒಬ್ಬರು ತನ್ನ ಅದ್ಭುತವಾದ ಕೈಚಳಕದಿಂದ ಎಲೆಗಳನ್ನು ಬಳಸಿಕೊಂಡು ಚಿತ್ರ ಬಿಡಿಸುವ ಅಕ್ಷಯ್ ದೇವಾಡಿಗ.ತನ್ನ ಪ್ರಾಥಮಿಕ ಶಿಕ್ಷಣವನ್ನು ಜಿ.ಯಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು ಜಿ.ಯಂ ಪಿಯುಸಿ ಬ್ರಹ್ಮಾವರದಲ್ಲಿ ಪೂರ್ಣಗೊಳಿಸಿ ಪ್ರಸ್ತುತ ದ್ವಿತೀಯ ವರ್ಷದ ಮಾಸ್ಟರ್ ಆಫ್ ಸೈನ್ಸ್ ಯಂ.ಜಿ.ಯಂ. ಕಾಲೇಜು ಉಡುಪಿ ಇಲ್ಲಿ ಪಡೆಯುತ್ತಿದ್ದಾರೆ.

ತನ್ನ ಚಿಕ್ಕ ವಯಸ್ಸಿನಲ್ಲಿ ಚಿತ್ರಕಲೆ ಕ್ರೀಡೆಯಲ್ಲಿ ಅತೀ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಬಂದ ಇವರು ಈಗ ತನ್ನ ವಿದ್ಯಾಭ್ಯಾಸದ ಜೊತೆ ಜೊತೆಗೆ ಪೆನ್ಸಿಲ್ ಆರ್ಟ್ಗಳನ್ನು  ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.ತನ್ನ ಕ್ಲಾಸ್ ಟೈಮ್ನಲ್ಲಿ ಅನೇಕರು ಬೇರೆ ಬೇರೆ ರೀತಿಯ ಕೆಲಸಗಳಲ್ಲಿ ಬ್ಯುಸಿಯಾದರೆ ಇವರು ಮಾತ್ರ ಒಂದು ಹಾಳೆಯನ್ನು ಹಿಡಿದುಕೊಂಡು ಚಿತ್ರವನ್ನು ಬಿಡಿಸಲು ಆರಂಭ ಮಾಡುತ್ತಿದ್ದೆ ಎನ್ನುತ್ತಾರೆ ಅಕ್ಷಯ್ .ನಂತರದ ದಿನಗಳಲ್ಲಿ ಚಿತ್ರಕಲೆಯಲ್ಲಿ  ಹೊಸ ಹೊಸ ರೀತಿಯ ಪ್ರಯೋಗವನ್ನು ಮಾಡಬೇಕು ಎಂಬ ಆಲೋಚನೆಗೆ ಬಂದ ಇವರು "Portrait" ಬಳಸಿಕೊಂಡು ಚಿತ್ರ ಬಿಡಿಸಲು ಆರಂಭ ಮಾಡಿ ಮೊದಲಿಗೆ ತನ್ನ ತಾಯಿಯ ಚಿತ್ರವನ್ನು ಬಿಡಿಸಿದರು ಅಲ್ಲಿಂದ ಇವರ ಚಿತ್ರಗಳು ಹೊಸ ಹೊಸ ರೀತಿಯಲ್ಲಿ ಮೂಡಿಬಂದವು ನಂತರ ಚಿತ್ರಕಲೆಯಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಆರಂಭಿಸಿದ್ದರೂ ಮನುಷ್ಯರಾದ ನಮ್ಮ ಮನಸ್ಸೇ ಒಂದು ವಿಚಿತ್ರ ಒಂದು ವಸ್ತುಗಳನ್ನು ನೋಡಿದಾಗ ಅನೇಕ ರೀತಿಯ ಆಲೋಚನೆಗಳು ಬರುತ್ತದೆ ಅದರಿಂದ ಏನನ್ನಾದರೂ ಮಾಡಬಹುದು ಎಂದು ಹಾಗೆ ಅಕ್ಷಯ್ ಅವರು ಕೂಡ ಒಂದು ಗಿಡದ ಎಲೆಯನ್ನು ಕಂಡು ಅದರಲ್ಲಿ ಏನನ್ನಾದರೂ ಮಾಡಬೇಕು ಎಂಬ ಪ್ರಯತ್ನಕ್ಕೆ ಬರುತ್ತಾರೆ ಆಗ ಅವರು ತನ್ನ ಕೈಚಳಕದಿಂದ ಎಳೆಯಲ್ಲಿ ಮೊದಲಿಗೆ ಮೂಡಿ ಬಂದ ಚಿತ್ರ ಗಣೇಶ ಎನ್ನುತ್ತಾರೆ ಅಕ್ಷಯ್.

ನಂತರ ಇದು ಒಂದು ಅಪರೂಪದ ಕಲೆ ಎಂದು ಅನೇಕ ಜನರು ಹೇಳಿಕೊಳ್ಳಲು ಆರಂಭಿಸಿದರು.ಇದರಿಂದ ಇನ್ನಷ್ಟು ಸಾಧಿಸಬೇಕು ಎಂಬ ಛಲವನ್ನು ಬೆಳೆಸಿಕೊಂಡ ಅಕ್ಷಯ್ ಎಲೆಗಳಲ್ಲಿ ಅನೇಕ ಜನರ ಚಿತ್ರ ಬಿಡಿಸಲು ಆರಂಭ ಮಾಡಿದರು ಆಗ ಮೂಡಿಬಂದ ಚಿತ್ರಗಳೇ ಕೃಷ್ಣ,ಬಲ್ಬ್ ಹಾಗೂ ಶಿವಾಜಿ,ಮೋದಿ ಭಗತ್ ಸಿಂಗ್ ರಂತಹ ಮಹಾನ್ ನಾಯಕರ ಚಿತ್ರಗಳು ಪ್ರಸಿದ್ದಿ ಪಡೆದವು.ಇವರು ಶ್ರೀಮತಿ ಅಖಿಲ ಹೇಮಂತ್ ಮತ್ತು ಹೇಮಂತ್ ದೇವಾಡಿಗ ಅವರ ಮಗನಾಗಿದ್ದು ತನ್ನ  ಶಿಕ್ಷಣದ ಜೊತೆ ಜೊತೆಯಾಗಿ ಕ್ರಿಯೇಟಿವ್ ಆಗಿ ಚಿತ್ರಗಳನ್ನು ಬಿಡಿಸುತ್ತಿರುವ ಇವರ ಕಲೆಯ ಮೇಲಿನ ಪ್ರೀತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ನಮ್ಮ ಆಶಯ.


Share