ವಿಜ್ರಂಭಣೆಯಿಂದ ಜರುಗಿದ ಮಂಗಳ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು ಇದರ ರಜತಮಹೋತ್ಸವ

ಮಂಗಳೂರು:  ’ವಿದ್ಯಾ ಮಂದಿರ ವೆಂದರೆ ಅದು ಬರೀ ಪುಸ್ತಕದ ಓದಲ್ಲ: ಬದಲಾಗಿ ಅದು ಮಕ್ಕಳ ಮನಸ್ಸಿನ ರಚನಾತ್ಮಕ ಕಲಿಕೆ. ಸೃಜನಾತ್ಮಕತೆ, ಪ್ರಯತ್ನಶೀಲತೆ, ದೈಹಿಕ ಹಾಗೂ ಮಾನಸಿಕ ಕಸರತ್ತಿಗೆ ವೇದಿಕೆಯಾಗಬೇಕು, ಆಗ ಮಾತ್ರ ಶಿಕ್ಷಣದ ಮೂಲ ಉದ್ದೇಶ ಈಡೇರಿದಂತಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ತಿಗಳು, ಮಾಜಿ ಕೇಂದ್ರ ಸಚಿವರು ಹಾಗೂ ಸರಸ್ವತಿ ಸಮ್ಮಾನ ಪುರಸ್ಕತರಾದ ಡಾ. ಎಂ. ವೀರಪ್ಪ ಮೊಯಿಲಿ ಕರೆಕೊಟ್ಟರು.  

ಅವರು ಮಂಗಳ ಆಂಗ್ಲ ಮಾಧ್ಯಮ ಶಾಲೆ ಗಾಂಧಿನಗರ, ಮಣ್ಣಗುಡ್ಡಯಲ್ಲಿ ತಾರೀಕು 11-01-2020ರಂದು ಜರಗಿದ ರಜತಮಹೋತ್ಸವ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.

ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಆಡಳಿತಕ್ಕೊಳಪಟ್ಟ ಈ ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ನಡೆದಕಾರ್ಯಕ್ರಮದಲ್ಲಿ ಸ್ಮರಣಸಂಚಿಕೆ ’ರಜತ ರಶ್ಮಿ’ ಯನ್ನು ಬಿಡುಗಡೆ ಮಾಡಲಾಯಿತು.

ಸಮಾಜ ಬಾಂಧವರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ನೀಡಿದ ಸಹಕಾರವನ್ನು ಸ್ಮರಿಸಿ ಶ್ರೀ ವೀರಪ್ಪ ಮೊಯಿಲಿ ದಂಪತಿಗಳನ್ನು ಸನ್ಮಾನಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಮಂಗಳೂರಿನ ಖ್ಯಾತ ನ್ಯೂರೋ ಸರ್ಜನ್ ಡಾ.ಕೆ.ವಿ,ದೇವಾಡಿಗ, ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದ ವಿಶ್ರಾಂತ ಉಪಕುಲಪತಿಗಳಾದ ಡಾ.ಬಿ.ಎಸ್ ಶೇರಿಗಾರ್, ಅಖಲ ಭಾರತ ತುಳುಒಕ್ಕೂಟದ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಾಮನ ಮರೋಳಿ, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷರಾದ  ಶ್ರೀ ರವಿ. ಎಸ್. ದೇವಡಿಗ, ಉಡುಪಿ ದೇವಾಡಿಗ ಸೇವಾ ಸಂಘದ ಅಧ್ಯಕ್ಷರಾದ  ಶ್ರೀ ಯು. ರತ್ನಾಕರ್ ದೇವಾಡಿಗ, ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷರಾದ  ಶ್ರೀ ಚಂದ್ರಶೇಖರ ಕಂಕನಾಡಿ, ಶ್ರೀ ಮಂಜುನಾಥ ಕ್ಷೇತ್ರ  ಕದ್ರಿಯ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ದಿನೇಶ್ ದೇವಾಡಿಗ ಕದ್ರಿ, ಮಂಗಳೂರು ಮಂಗಳಾ ಕ್ರೆಡಿಟ್ ಕೋ-ಆಪರೇಟಿವ್  ಸೊಸೈಟಿಯ ಅಧ್ಯಕ್ಷರಾದ  ಶ್ರೀ ಕೆ.ಜೆ.ದೇವಾಡಿಗ ಉಪಸ್ಥಿತರಿದ್ದರು.

ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶ್ರೀ ಅಣ್ಣಯ್ಯ ಶೇರಿಗಾರ್, ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರಿನ  ವಿಶ್ವಸ್ಥ ಮಂಡಳಿಯ ಸಂಚಾಲಕರಾದ ಶ್ರೀ ಎಚ್.ಮೋಹನದಾಸ್, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶಾಲೆಯ  ಗುಣಮಟ್ಟವನ್ನು ಹಾಗೂ ಪ್ರಸ್ತುತ ಕೇಂದ್ರೀಯ ಸಮಿತಿಯ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. 

ಬೆಳ್ಳಿಹಬ್ಬದ ಸಂದರ್ಭದಲ್ಲಿ ಶಾಲಾ ಅಭಿವೃಧ್ದಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರುಗಳ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿಗಳನ್ನ ಹಾಗೂ ಮಾಜಿ ಸಂಚಾಲಕರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. 

ಮಂಗಳ ಆಂಗ್ಗ ಮಾಧ್ಯಮ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿ ಕಿರುಕಾಣಿಕೆಯನ್ನು ನೀಡಲಾಯಿತು. ಮಂಗಳ ಆಂಗ್ಗ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ಶಿಕ್ಷಣ, ಕ್ರೀಡೆ, ಮಾಧ್ಯಮ ಹಾಗೂ ಇನ್ನಿತರ ರಾಷ್ಡ್ರೀಯ ಅಂತರಾಷ್ಡ್ರೀಯ ಮಟ್ಟದಲ್ಲಿ ಸಾಧನೆ ಗೈದ  ಹಳೆ ವಿದ್ಯಾರ್ಥಿಗಳನ್ನು ಹಾಗೂ ಪ್ರಸ್ತುತ ಸಾಲಿನ ವಿದ್ಯಾರ್ಥಿಗಳನ್ನು ಗೌರವಿಸಿ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. 

ಬೆಳ್ಳಿ ಹಬ್ಬದ ಅಂಗವಾಗಿ ನಡೆಸಿದ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ನೀಡಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಡಾ.ದೇವರಾಜ್ ಕೆ. ಅವರು ಮಾತನಾಡಿ ಮಂಗಳ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಸುದಾರಿಸಲು ಕೈಗೊಂಡ ಅಭಿವೃಧ್ದಿ ಕಾರ್ಯಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಮಂಗಳ ಆಂಗ್ಗ ಮಾಧ್ಯಮ ಶಾಲೆಯ ಸಂಚಾಲಕರಾದ ಡಾ.ಸುಂದರ ಮೊಯಿಲಿ ಸ್ವಾಗತಿಸಿದರು.

ಶಾಲಾ ಮುಖ್ಯೋಪ್ಯಾಯಿನಿ ಶ್ರೀಮತಿ ಉಷಾ ಪ್ರಭಾವತಿ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಮೊಯಿಲಿ ಧನ್ಯವಾದ ನೀಡಿದರು,

ಉಪಾಧ್ಯಕ್ಷ ಶ್ರೀ ಅಶೋಕ್ ಮೊಯಿಲಿ, ಖಜಾಂಜಿ ಶ್ರೀಮತಿ ಗೀತಾ ವಿ. ಕಲ್ಯಾಣಪುರ್, ಕೇಂದ್ರೀಯ ಸಮಿತಿ, ಯುವ ಮತ್ತು ಮಹಿಳಾ ವಿಭಾಗದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಪರಾಹ್ನ ಸಾಂಸ್ಕತಿಕ ವೇದಿಕೆಯಲ್ಲಿ ಮಂಗಳ ಆಂಗ್ಗ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕತಿಕ ಕಾರ್ಯಕ್ರಮ ಜರಗಿತು ಹಾಗೂ ಸಾಂಸ್ರ್ಕತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀಮತಿ ವೀಣಾ ಗಣೇಶ್ ಹಾಗೂ ಶ್ರೀಮತಿ ವಾಣಿಶ್ರೀ ಕೆ. ಕಾರ್ಯಕ್ರಮ ನಿರೂಪಿಸಿದರು.

ವರದಿ~ ಅಧ್ಯಕ್ಷರು/ ಪ್ರ ಕಾರ್ಯದರ್ಶಿ


Share