ಮಾರ್ಚ್ 11: ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಷಷ್ಠಿ ರಥ ಸಮರ್ಪಣೆ

ಪೊಳಲಿ: ರಾಷ್ಟ್ರ ಹಾಗೂ ವಿಶ್ವದಾದ್ಯಂತ ನೆಲೆಸಿರುವ ಸಮಸ್ತ ದೇವಾಡಿಗ ಸಮಾಜದ ಭಾಂಧವರ ನೆರವಿನೊಂದಿಗೆ ಸಾವಿರ ಸೀಮೆಯ ಒಡತಿ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಷಷ್ಠಿ ರಥ ಸಮರ್ಪಣೆಯ ಕಾರ್ಯಕ್ರಮ ಇದೇ  ಮಾರ್ಚ್ 11 2020 ರಂದು ನಡೆಯಲಿದೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ಕೃಪೆ ಕಟಾಕ್ಷಕ್ಕೆ ಪಾತ್ರರಾಗಿ ಹಾಗೂ ದೇವರ ಪ್ರಸದ ಸ್ವೀಕರಿಸಬೇಕು ಎಂದು ಸಂಘಟಕರು ವಿನಂತಿಸಿ ಕೊಂಡಿದ್ದಾರೆ, 

ಮಾ.11ರಂದು ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಮಾ. 8 ರಂದು ಹೊರೆಕಾಣಿಕೆ ಸಮರ್ಪಣೆ, ಮಾ. 9 ರಂದು ಶಿಲ್ಪಿಗಳಿಂದ ನೂತನ ಷಷ್ಠಿರಥ ಸ್ವೀಕಾರ, ಮಾ.10 ರಂದು ವಿವಿಧ ವೈದಿಕ ಕಾರ್ಯಗಳು ಜರಗಲಿದೆ. ಮಾ. 11 ರಂದು ಬೆಳಗ್ಗೆ 6ರಿಂದ ರಾತ್ರಿ 2ರ ವರೆಗೆ ಸಮರ್ಪಣೆಯ ಕಾರ್ಯಕ್ರಮ ಜರಗುತ್ತದೆ. ಬೆಳಗ್ಗೆ 8ಕ್ಕೆ ರಥ ಸಮರ್ಪಣಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ.

ಬೆಳಗ್ಗೆ 11ರ ಶುಭ ಮುಹೂರ್ತದಲ್ಲಿ ಶ್ರೀ ದೇವಿಗೆ ನೂತನ ಷಷ್ಠಿರಥ ಸಮರ್ಪಣೆ, ರಥೋತ್ಸವ ಜರಗುತ್ತದೆ. ಸಂಜೆ 3ಕ್ಕೆ ಕೃತಜ್ಞತಾ ಸಭೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಡಾ| ಎಂ.ವೀರಪ್ಪ ಮೊಲಿ, ಮಾಲತಿ ವೀರಪ್ಪ ಮೊಯಿಲಿ, ದ.ಕ.ಸಂಸದ ನಳಿನ್‌ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ....


Share