ಉಡುಪಿ: ದೇವಾಡಿಗರ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಯವರ ಆಶ್ರಯದಲ್ಲಿ ದೇವಾಡಿಗರ ರಾಜ್ಯ ಮಟ್ಟದ ಕ್ರೀಡಾಕೂಟ-ಅಭಿನ್ ದೇವಾಡಿಗರಿಗೆ ಸನ್ಮಾನ

ಅಭಿನ್ ದೇವಾಡಿಗರಿಗೆ ಸನ್ಮಾನ

ಉಡುಪಿ: ದೇವಾಡಿಗರ ಸೇವಾ ಸಂಘ (ರಿ.) ಉಡುಪಿ ಇದರ ವತಿಯಿಂದ ದೇವಾಡಿಗರ ಯುವ ಸಂಘಟನೆ ಮತ್ತು ದೇವಾಡಿಗರ ಮಹಿಳಾ ಸಂಘಟನೆ ಉಡುಪಿ ಇವರ ಆಶ್ರಯದಲ್ಲಿ ದೇವಾಡಿಗರ ರಾಜ್ಯ ಮಟ್ಟದ ಕ್ರೀಡಾಕೂಟ-2020 ಉಡುಪಿಯ ಮಹಾತ್ಮಾ ಗಾಂಧಿ ಬಯಲು ಮಂದಿರದಲ್ಲಿ ದಿನಾಂಕ 19.01.2020 ರಂದು ಜರಗಿತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ಮಟ್ಟಾರು ರತ್ನಾಕರ್ ಹೆಗ್ಡೆ ಅಧ್ಯಕ್ಷರು, ಬಿ.ಜೆ.ಪಿ  ಉಡುಪಿ ಜಿಲ್ಲೆ ಇವರು ನೆರವೇರಿಸಿದರು.

ಶ್ರೀ ರತ್ನಾಕರ ದೇವಾಡಿಗರವರು ಅಧ್ಯಕ್ಷತೆಯನ್ನು ವಹಿಸಿದರು. ಈ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಸುಪ್ರಸಾದ್ ಶೆಟ್ಟಿ , ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಡಾ. ಕೆ. ದೇವರಾಜ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಬಿ.ಜಿ ಮೋಹನದಾಸ್, ಕಟಪಾಡಿ ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷರಾದ ಶ್ರೀಮತಿ ತುಳಸಿ ಎಸ್ ದೇವಾಡಿಗ, ಸಂಘದ ಮಾಜಿ ಕಾರ್ಯದರ್ಶಿ, ಶ್ರೀ ಸುಂದರ  ದೇವಾಡಿಗ ಬೈಲಕೆರೆ, ಓರಿಯಂಟಲ್ ಇನ್ಸುರೆನ್ಸ್ ಕಂ. ಲಿ.. ಸುರತ್ಕಲ್ ಇದರ ಹಿರಿಯ ಶಾಖಾ ಪ್ರಬಂಧಕರಾದ ಶ್ರೀ ಯಾದವ ದೇವಾಡಿಗ , ಸಪ್ತಸ್ವರ ವಿವಿದ್ದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ರವಿ ತಲ್ಲೂರು ಹಾಗೂ ದೇವಾಡಿಗ ಸಮಾಜದ ವಿವಿಧ ಸಂಘಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ತುಳಸಿ ಎಸ್ ದೇವಾಡಿಗ ಇವರು ನಮ್ಮ ಸಮಾಜದ ಎಲ್ಲಾ ಸಂಘಗಳ ಪ್ರತಿನಿಧಿಗಳ ಸಮಾಕ್ಷಮದಲ್ಲಿ ನೆರವೇರಿಸಿದರು.

ಶ್ರೀ ರಘುಪತಿ ಭಟ್ ಶಾಸಕರು ಮತ್ತು ಶ್ರೀ ಪ್ರಮೋದ ಮಧ್ವರಾಜ್ ಮಾಜಿ ಸಚಿವರು ಇವರುಗಳು ಪಂದ್ಯಾಟದ ಸಂದರ್ಭದಲ್ಲಿ ಹಾಜರಿದ್ದು, ಶುಭ ಹಾರೈಸಿದರು. 

ಸಮಾರೋಪ ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ರಾವ್ ಕೊಡಂಚ, ನಗರ ಸಭಾ ಸದಸ್ಯರುಗಳಾದ ಶ್ರೀಮತಿ ರಜನಿ ಹೆಬ್ಬಾರ್ ( ವಳಕಾಡು ವಾರ್ಡ್) , ಶ್ರೀ ರಮೇಶ್ ಕಾಂಚನ್ ( ಬೈಲೂರು ವಾರ್ಡ್) ಉದಯವಾಣಿ ಮಣಿಪಾಲ ಹಣಕಾಸು ವಿಭಾಗದ  ಮಹಾಪ್ರಂಬಂಧಕರಾದ ಶ್ರೀ ಸುದರ್ಶನ್ ಸೇರಿಗಾರ್, ಉದ್ಯಮಿಗಳಾದ ಶ್ರೀ ಬಾಬು ದೇವಾಡಿಗ ಮಣಿಪಾಲ, ಅವಿರಾಗ್ ಕೆಟರರ್ಸ್ ನ ಮಾಲಿಕರಾದ ಶ್ರೀ ಹರೀಶ್ ದೇವಾಡಿಗ ಕುಕ್ಕಿಕಟ್ಟೆ, ಪಿ.ಡಬ್ಲ್ಯು.ಡಿ ಗುತ್ತಿಗೆದಾರ ಶ್ರೀ ಪ್ರದೀಪ್ ಜಿ , ಶ್ರೀ ಏಕನಾಥೇಶ್ವರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿ (ನಿ.) ಚಿಟ್ಪಾಡಿ ಇದರ ಅಧ್ಯಕ್ಷರಾದ ಶ್ರೀ ರತ್ನಾಕರ್ ಜಿ.ಎಸ್ ,ಸಂಘದ ಹಿರಿಯ ಸದಸ್ಯರಾದ ಶ್ರೀ ಕೇಶವ ರಾವ್ , ದೇವಾಡಿಗ ಯುವ ಸಂಘಟನೆಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಕಡಿಯಾಳಿ, ದೇವಾಡಿಗ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಶ್ರೀ ಸುಕನ್ಯಾ ಸೇರಿಗಾರ್ ಬೈಲಕೆರೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

ಶ್ರೀ ರತ್ನಾಕರ್ ದೇವಾಡಿಗ ಇವರು ಅಧ್ಯಕ್ಷತೆಯನ್ನು ವಹಿಸಿದರು. ಶ್ರೀ ಗಣೇಶ್ ದೇವಾಡಿಗ, ಬ್ರಹ್ಮಗಿರಿ ಹಾಗೂ ಶ್ರೀ ರವಿ ಶೇರಿಗಾರ್ ಅಲೆವೂರು ಸ್ವಾಗತಿಸಿದರು, ಕುಮಾರಿ ಸುಶ್ಮಿತಾ ಶೇರಿಗಾರ್ ಮತ್ತು ಅಭಿಷೇಕ್ ಅಲೆವೂರು ಧನ್ಯವಾದವನ್ನು ಅರ್ಪಿಸಿದರು ಹಾಗೂ ಶ್ರೀ ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಇದೇ ಸಂಧರ್ಭದಲ್ಲಿ ಗೋಹಾಟಿಯಲ್ಲಿ ನಡೆದ ಕೇಲೋ ಇಂಡಿಯಾ ಸ್ಪರ್ಧೆಯಲ್ಲಿ 200ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 100 ಮೀಟರ್‍ನಲ್ಲಿ ಬೆಳ್ಳಿಯ ಪದಕವನ್ನು ಗಳಿಸಿ, ಸಮಾಜಕ್ಕೆ ಕೀರ್ತಿಯನ್ನು ತಂದುಕೊಟ್ಟ ನಮ್ಮ ಸಮಾಜದ ಶ್ರೀ ಅಭಿನ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.


Share