ದೇವಾಡಿಗ ಸಂಘ ಮುಂಬೈ 71ನೇ ಗಣತಂತ್ರ ದಿವಸ ಆಚರಣೆ

ಮುಂಬೈ: ದೇವಾಡಿಗ ಸಂಘ ಮುಂಬೈ 71ನೇ ಗಣತಂತ್ರ ದಿವಸ ಮತ್ತು ಶ್ರೀ ಸತ್ಯನಾರಾಯಣ ಪೂಜೆ  ದೇವಾಡಿಗ ಭವನ -ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರ,  ನೆರೂಲ್ ನಲ್ಲಿ ಜನವರಿ 26,  2020 ರಂದು ಆಚರಿಸಲಾಯಿತು

71 ನೇ ಗಣತಂತ್ರ ದಿವಸವನ್ನು 2020 ರ ಜನವರಿ 26 ರಂದು ನೆರುಲಿನ ದೇವಾಡಿಗ ಭವನ -ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರದಲ್ಲಿ ವೈಭವದಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ ಅವರು ರಾಷ್ಟ್ರೀಯ ದ್ವಜಾರೋಹಣವನ್ನು ಮಾಡಿದರು .  ಗಣರಾಜ್ಯೋತ್ಸವದಲ್ಲಿ ಹಾಜರಿದ್ದ ಎಲ್ಲ ಸದಸ್ಯರು ಭಾರತೀಯ ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಸ್ತುತ ಎಲ್ಲಾ ಸದಸ್ಯರು ರಾಷ್ಟ್ರೀಯ ಧ್ವಜವನ್ನು ವಂದಿಸಿ, ಗೌರವ, ಸಮಗ್ರತೆ, ವೈವಿಧ್ಯತೆ ಮತ್ತು ಅನನ್ಯತೆಯನ್ನು ಎತ್ತಿಹಿಡಿಯುವ ಭರವಸೆ ನೀಡಿದರು. ಮಾಜಿ ಅಧ್ಯಕ್ಷ ರಾದ  ಶ್ರೀವಾಸು ಎಸ್ ದೇವಾಡಿಗ, ಶ್ರೀ ಎಸ್.ಪಿ.ಕರ್ಮರನ್ ಮತ್ತು ಶ್ರೀ ಎಚ್ ಮೋಹನ್‌ದಾಸ್, ಉಪಾದ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ್ ದೇವಾಡಿಗ, ಶ್ರೀನರೇಶ್ ದೇವಾಡಿಗ, ಹಾಗೂ  ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ,  ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀ ಜಯ ಎಲ್ ದೇವಾಡಿಗ, ಜೊತೆ ಕೋಶದೀಕಾರಿ ಶ್ರೀ ಕೃಷ್ಣ ಬಿ. ದೇವಾಡಿಗ, ಶ್ರೀಮತಿ ಸುರೇಖಾ ದೇವಾಡಿಗ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ. ರಂಜಿನಿ ಆರ್. ಮೊಯಿಲಿ, ಉಪಕಾರ್ಯಾದ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗ ಮತ್ತು ಜೊತೆ ಕಾರ್ಯದರ್ಶಿ ಪ್ರತಿಭಾ ಜಿ ದೇವಾಡಿಗ, ಕ್ರೀಡಾ ವಿಭಾಗದ ಕಾರ್ಯದಕ್ಷ ಶ್ರೀ   ರಘು ಮೊಯಿಲಿ,  ಉಡುಪಿಯಿಂದ ಬಂದಂತಹ ಹೆಸರಾಂತ ಸಮಾಜ ಸೇವಕ ಶ್ರೀ ನಿತ್ಯಾನಂದ ಒಳಕಾಡು ಮತ್ತು ಎಲ್ಲಾ  ಸದಸ್ಯರು ಉಪಸ್ತಿತರಿದ್ದರು.

ಎಲ್ಲ ಸದಸ್ಯರಿಂದ ಹಾಡಲ್ಪಟ್ಟ “ವೆಂದ ಮಾತರಂ” ಗೀತೆಯ ಕಂಪನವು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿಧ್ವನಿಸಿತು.

ಶ್ರೀಯುತ  ರವಿ ಎಸ್ ದೇವಾಡಿಗ,  ಶ್ರೀ ಎಸ್.ಪಿ.ಕರ್ಮರನ್ ,ಶ್ರೀ ಎಚ್ ಮೋಹನ್‌ದಾಸ್, ಶ್ರೀ ಪ್ರವೀಣ್ ನಾರಾಯಣ್ ದೇವಾಡಿಗ, ಶ್ರೀನರೇಶ್ ದೇವಾಡಿಗ,  ಶ್ರೀ  ಸುಂದರ್ ಮೊಯಿಲಿ  ಆಡ್ವೋಕೇಟ್ ಪ್ರಭಾಕರ್ ದೇವಾಡಿಗ, ಗಣತಂತ್ರ ದಿನದ  ಕುರಿತಾಗಿ ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀ ಮತ್ತು ಶ್ರೀಮತಿ ಸಚಿನ್ ಶಂಕರ್ ಮೊಯಿಲಿ ಮತ್ತು ಶ್ರುತಿ ಸಚಿನ್ ಮೊಯಿಲಿ ಕಾರ್ಘರ್  ಸತ್ಯನಾರಾಯಣ  ಪೂಜೆಯನ್ನು ನೆರವೇರಿಸಿದರು  "ಜನ ಗಣ ಮನ" ರಾಷ್ಟ್ರ ಗೀತೆಯೊಂದಿಗೆ ದ್ವಜಾರೋಹಣ ಕಾರ್ಯಕ್ರಮವು ಸಮಾಪ್ತಗೊಂಡಿತು. ಈ ಸಂದರ್ಭದಲ್ಲಿ, ಸನ್ ಟು ಹ್ಯೂಮನ್ ಎನ್‌ಲಿವೆನ್  ಅಸೋಸಿಯೇಶನ್ ನವರಿಂದ ಮನುಷ್ಯ ಮಿಲನ ಸಾಧನ ಶಿಬಿರದ ಬಗ್ಗೆ  ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಉಚಿತ ಪ್ರಾತಕ್ಷಿತೆ  ನೀಡಿದರು. 


Share