ಸಮಾಜದ ಆಪತ್ ಭಾಂದವರಿಗೆ  ’ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ (ರಿ ” ನಿಂದ ಕೃತಜ್ಞತಾ ಸಮರ್ಪಣೆ

ಉಡುಪಿ:ಪರೋಪಕಾರಿ ,ಜನಸೇವೆಯೇ  ಮಾನವ ಧರ್ಮ ಎಂದುಕೊಂಡು ಕಷ್ಟ ಎಂದು ಬಂದವರಿಗೆ ತನ್ನ ಕೈಯಲಾದಷ್ಟು ಸಹಾಯಮಾಡುವ ಮತ್ತು ದೇವಾಡಿಗ ಸಮಾಜದವರಿಗೆ ವೈದ್ಯಕೀಯ ವಿಚಾರದಲ್ಲಿ ಅಜ್ಜರ ಕಾಡು ಉಡುಪಿ ಆಸ್ಪತ್ರೇಯಲ್ಲಿ ಉತ್ತಮ ಚಿಕಿತ್ಸೆ ಸಿಗುವಂತೆ ಸದಾ ಸ್ಪಂದಿಸುತ್ತಿರುವ  ನಮ್ಮ ಶ್ರೀ  ಸುಂದರ್ ಕಪ್ಪೆಟ್ಟು ರವರ ಮನೆಗೆ  ಇಂದು ಅಕ್ಷಯ ಕಿರಣ ದ ಸೇವಾದಾರರು ಭೇಟಿ ನೀಡಿ ಕೃತಜ್ಞತಾರ್ಪಣೇ ಗೈದರು. ಅಲ್ಲಿಂದ ಮುಂದೆ ಸೂರತ್ಕಲ ಕಾಟಿಪಳ್ಳ ದ ಶ್ರೀಮತಿ  ದಯಾವತೀ  ದೇವಾಡಿಗರಿಗೆ ವಸತಿ ಹಕ್ಕು ಪತ್ರ ಸಿಗುವಲ್ಲಿ ಇತ್ತೀಚೆಗೆ ಮಹತ್ತರ ಪಾತ್ರ ವಹಿಸಿದ ವಸತಿ ಹಕ್ಕು ಹೋರಾಟ ಸಮಿತಿಯ ಸದಸ್ಯೆ ಶ್ರೀಮತಿ ಸ್ವರ್ಣ ಭಟ್ಟ ಅವರ ಮನೆಗೆ ತೆರಳಿ ಕೃತಜ್ನತಾರ್ಪಣೇ ಸಲ್ಲಿಸಿದರು. ಅಂತೆಯೇ ಮಂಗಳೂರು ಇಲ್ಲಿನ  ವೇನ್ಲೋಕ ಆಸ್ಪತ್ರೇಯಲ್ಲಿ ದೇವಾಡಿಗರಿಗೆ ಸದಾ ಸ್ಪಂದಿಸುತ್ತಿರುವ ಸದಸ್ಯ ಶ್ರೀ ಅಸ್ಪಕ್ ಅವರಿಗೆ ಪ್ರೀತಿಯ ಕೃತಜ್ನತೆ ಅರ್ಪಿಸಿದರು.

ಕೃತಜ್ಞತೆ ಗೆ ಸ್ಪಂದಿಸಿದ ಮೂವರು ಆಪ್ತರು ನಾವುಗಳು ಸದಾ ದೇವಾಡಿಗರಿಗೆ ಅಲ್ಲದೆ ಸಮಾಜದ ಎಲ್ಲಾರಿಗೂ ಇನ್ನು ಮುಂದೆಯೂ ನಮ್ಮಿಂದಾದ ಸಹಕಾರ ನೀಡುವುದಾಗಿ ತಿಳಿಸಿದರು.

ಇಂದಿನ ಕೃತಜ್ನತಾ ಸಮರ್ಪಣೇ ಯಲ್ಲಿ ಸೇವಾದಾರರು ಶ್ರೀ ಸದಾಶಿವ ಮೊಯ್ಲಿ ಮುಂಬೈ , ಶ್ರೀ ಭೋಜ ದೇವಾಡಿಗರು ಮುಂಬೈ , ಶ್ರೀ ಶಂಕರ ದೇವಾಡಿಗ ಅಂಕದ ಕಟ್ಟೆ , ಶ್ರೀ ದಿನೇಶ ದೇವಾಡಿಗ ಕುಂದಾಪುರ ಶ್ರೀ ರಾಘವೇಂದ್ರ ಡೋಡ್ಡೋಣಿ , ಶ್ರೀ ರಾಜ ದೇವಾಡಿಗ ಗಂಗೋಳ್ಳಿ , ಶ್ರೀ ಗಿರೀಶ ದೇವಾಡಿಗ ಕೋಟ , ಶ್ರೀ ಸತೀಶ ದೇವಾಡಿಗ ಕಾರ್ಕಡ, ಶ್ರೀ ಅಭಿಷೇಕ ದೇವಾಡಿಗ ಆಲೂರೂ ,  ಶ್ರೀ ದಯಾನಂದ ದೇವಾಡಿಗ ಮುಂಬೈ ಶ್ರೀ ಗಣೇಶ ಶೇರೀಗಾರ ಮುಂಬೈ ಉಪಸ್ತಿತರಿದ್ದರು.

ಇಂದಿನ ವಾಹನ ಸೌಕರ್ಯದ ಸಹಕಾರವನ್ನು ಸೇವಾದಾರರು ಶ್ರೀ ಶಂಕರ ಅಂಕದ ಕಟ್ಟೆ,  ಶ್ರೀ ದಿನೇಶ ದೇವಾಡಿಗ ಕುಂದಾಪುರ  ಮತ್ತು ಶ್ರೀ ರಿಕೇಶ ದೇವಾಡಿಗ ಮಂಗಳೂರು ನೀಡಿ ಸಹಕರಿಸಿದರು.


Share