ದೇವಾಡಿಗ ಸಂಘ ಮುಂಬಯಿ: ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಅರಸಿನ ಕುಂಕುಮ ಆಚರಣೆ

ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಅರಸಿನ ಕುಂಕುಮ ಆಚರಣೆ

ಮುಂಬೈ: ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ ಜನವರಿ 26 ರಂದು ನೆರೂಲ್ ನ ದೇವಾಡಿಗ ಭವನದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ಸಂಜೆ 4 ರಿಂದ ಜರಗಿತು.

ಈ ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ದೀಪ ಪ್ರಜ್ವಲನೆಯು ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಯಶೋದಾ ಮೋಹನ್‌ದಾಸ್, ಶ್ರೀಮತಿ ವನಿತಾ ಆರ್ ದೇವಾಡಿಗ ಮತ್ತು ಮಹಿಳಾ ವಿಭಾಗದ ಪದಾಧಿಕಾರಿಗಳಿಂದ ಸುರೇಖಾ ಮೊಯಿಲಿ, ಶಕುಂತಲಾ ಶೇರಿಗಾರ್, ಲೋಲಾಕ್ಷಿ ದೇವಾಡಿಗ ಮತ್ತು ಕುಸುಮ ದೇವಾಡಿಗರ ಪ್ರಾಥನೆ ಯೊಂದಿಗೆ ಪ್ರಾರಂಭಗೊಂಡಿತು. ಉಪಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗರು ಆಗಮಿಸಿದ ಅತಿಥಿ ಗಣ್ಯರನ್ನು, ಸಭಿಕರನ್ನು ಸ್ವಾಗತಿಸಿದರೆ, ಮಾಜಿ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿಯವರು ಸಭೆಗೆ ಪರಿಚಯಿಸಿದರು.

ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿಯವರು ಅರಸಿನ ಕುಂಕುಮದ ವಿಶೇಷತೆಯ ಬಗ್ಗೆ ಪ್ರಸ್ತಾಪಿಸುತ್ತಾ ಸಾವಿತ್ರಿ ಬಾಯಿ ಫುಲೆಯವರು ಇಂತಹ ದಾರ್ಮಿಕ ಸಮಾರಂಭವನ್ನು ಸ್ವಾತಂತ್ರ ಪೂರ್ವದಲ್ಲಿ ನಡೆಸಿ ಮಹಿಳೆಯರನ್ನು ಒಗ್ಗೂಡಿಸುವ ಮೂಲಕ ಭಾರತದ ಸ್ವಾತ್ರಂತ್ರ ಚಳುವಳಿಯನ್ನು ಆರಂಭಿಸಲು ಪ್ರೇರಿಸಿದರು. ನೆರೆದ ಸಮಸ್ತ ಜಾತಿ ಭಾಂದವರಿಗೆ ಎಳ್ಳು, ಬೆಲ್ಲ ಹಚ್ಚಿಕೊಂಡು ಪರಸ್ವರ ಶುಭ ಹಾರೈಸುವ ಈ ಪರ್ವ ಕಾಲದಲ್ಲಿ ತಮ್ಮ ಕಷ್ಟ ದುಃಖಗಳು ದೂರವಾಗಿ ಸುಖ ಶಾಂತಿ ನೆಮ್ಮದಿಯ ಬದುಕು ತಮ್ಮದಾಗಲಿ ಎಂದು ಶುಭ ನುಡಿದರು. ಶ್ರೀಮತಿ ಯಶೋದಾ ಮೋಹನ್‌ದಾಸ್ ರವರು ಎಲ್ಲಾ ಭಗಿನೆಯರಿಗೆ ಶುಭ ಕೋರುತ್ತಾ ತಮ್ಮನ್ನು ಆಮಂತ್ರಿಸಿ ಸನ್ಮಾನಿಸಿದ ದೇವಾಡಿಗ ಸಂಘ ಮಹಿಳಾ ವಿಭಾಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಶ್ರೀಮತಿ ವನಿತಾ ಆರ್ ದೇವಾಡಿಗರು ಜಾತಿ ಭಾಂದವರು ಒಟ್ಟಾಗಿ ಸಂಘದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕರೆಯಿತ್ತರು.

ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರಿಗೆ ಮಹಿಳಾ ವಿಭಾಗದ ಪಧಾದಿಕಾರಿಗಳು ಪುಷ್ಪ ಗೌರವನ್ನಿತ್ತು ಶುಭ ಕೋರಿದರು. ಮಾಜಿ ಕಾರ್ಯಧ್ಯಕ್ಷೆಯಾರಾದ ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀಮತಿ ಶಾಂತ ಜಿ ಮೊಯಿಲಿ, ಶ್ರೀಮತಿ ಪ್ರಫುಲ್ಲ ವಿ ದೇವಾಡಿಗ, ಶ್ರೀಮತಿ ಜಯಂತಿ ಆರ್ ಮೊಯಿಲಿ ಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಇತ್ತೀಚೆಗೆ M.Phil. ಪದವಿ ಪಡೆದ ಶ್ರೀಮತಿ ಸುರೇಖಾ ದೇವಾಡಿಗ ಮತ್ತು ಶ್ರೀಮತಿ ಸುಶೀಲಾ ದೇವಾಡಿಗ ರನ್ನು ಹಾಗೂ ಕೇರಳದಲ್ಲಿ ನಡೆದ ಮಾಸ್ಟರ್ ಚ್ಯಾಂಪಿಯನ್ ಶಿಪ್ ಕ್ರೀಡಾಕೂಟದ ವಿಜೇತೆ, ಕ್ರೀಡಾಪಟು ಶ್ರೀಮತಿ ಜಯಂತಿ ದೇವಾಡಿಗರನ್ನು ಮಹಿಳಾ ವಿಭಾಗದ ಪದಾದಿಕಾರಿಗಳು ಸತ್ಕರಿಸಿದರು.

ಎಲ್ಲಾ. ಸಮನ್ವಯ ಸಮಿತಿಯ ಮಹಿಳಾ ಕಾರ್ಯಾದ್ಯಕ್ಷೆಯಾರಾದ ಶಾಲಿನಿ ದೇವಾಡಿಗ, ಲತಾ ಮೊಯಿಲಿ, ವಿಜಯಲಕ್ಷ್ಮಿ ದೇವಾಡಿಗ. ಲತಾ ಶೇರಿಗಾರ್, ಪ್ರಮೀಳಾ ಪ್ರವೀಣ್ ರವರನ್ನು ಪುಷ್ಪ ಗೌರವನ್ನಿತ್ತು ಗೌರವಿಸಲಾಯಿತು.

 

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿತ್ರಾಂಶಿ, ಯತಿ, ನೇತ್ರ ದೇವಾಡಿಗರ ನೃತ್ಯ ಮತ್ತು ಶ್ರೇಯಾ, ಕಾರ್ತಿಕ್, ರಿದ್ಧಿ, ನಿಶಾ ದೇವಾಡಿಗರು ಸುಶ್ರಾವ್ಯವಾಗಿ ಹಾಡಿದರು. ನವರಸಗಳನ್ನು ಒಳಗೊಂಡ ಚಿಕ್ಕ ನಾಟಕಗಳಲ್ಲಿ ರೌದ್ರ ರಸ ನೃತ್ಯ ರೂಪಕ ಭಾಂಡೂಪ್ ಪ್ರಾದೇಶಿಕ ಸಮನ್ವಯ ಸಮಿತಿ, ವೀರ ರಸ (ಒನಕೆ ಓಬವ್ವ) ನವೀ ಮುಂಬೈ ಪ್ರಾದೇಶಿಕ ಸಮನ್ವಯ ಸಮಿತಿ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನೃತ್ಯ ರೂಪಕ ಡೊಂಬಿವಿಲಿ ಪ್ರಾದೇಶಿಕ ಸಮನ್ವಯ ಸಮಿತಿಯವರು ಸಾದರ ಪಡಿಸಿದರು. ಸಣ್ಣ ನಾಟಕ ಅಧ್ಬುತ ರಸ ನಗರ ವಲಯ ಪ್ರಾದೇಶಿಕ ಸಮನ್ವಯ ಸಮಿತಿ ಮತ್ತು ಕರುಣ ರಸದ ಅರ್ಥ ಗರ್ಭಿತ ಕಥಾ ಸಂಚಯವನ್ನು ಥಾನೆ ಪ್ರಾದೇಶಿಕ ಸಮನ್ವಯ ಸಮಿತಿಯವರು ಆಡಿ ತೋರಿಸಿದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಯುವ ವಿಭಾಗದ ಮೇಘ ಮತ್ತು ತನ್ವಿ ದೇವಾಡಿಗರು ಮಾಡಿದರು. ಪೂರ್ಣಿಮಾ ಡಿ ದೇವಡಿಗ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಿದರು.

ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಶ್ರೀ ಬಿ. ಜಿ. ಮೋಹನ್ ದಾಸ್, ಸಮಾಜ ಸೇವಕ ಶ್ರೀ ನಿತ್ಯಾನಂದ ಒಳಕಾಡು, ಸಿ. ಎಸ್. ವಿಜಯ ದೇವಾಡಿಗ, ಮಾಜಿ ಅಧ್ಯಕ್ಷರು ಗಳಾದ ಶ್ರೀಎಚ್. ಮೋಹನ್ದಾಸ್, ಶ್ರೀ ವಾಸು ಎಸ್. ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಶ್ರೀ ಸುಂದರ್ ಮೊಯಿಲಿ, ಶ್ರೀ ದಯಾನಂದ ದೇವಾಡಿಗ, ಶ್ರೀ ಗಣೇಶ್ ಶೇರಿಗಾರ್, ಶ್ರೀಮತಿ ರೇಖಾ ದೇವಾಡಿಗ ಜೋಗೇಶ್ವರಿ, ಹೇಮನಾಥ್ ದೇವಾಡಿಗ ನಗರ ವಲಯ ಪ್ರಾದೇಶಿಕ ಸಮನ್ವಯ ಸಮಿತಿ, ಹೇಮಾನಂದ್ ದೇವಾಡಿಗ, ಕಾರ್ಯಕಾರಿ ಸಮಿತಿಯ ಸದ್ಯಸರಾದ, ಶ್ರೀ ಜಯ ಎಲ್ ದೇವಾಡಿಗ, ಕೃಷ್ಣ ದೇವಾಡಿಗರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೀರೂಪಣೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ ಮಾಡಿದರೆ ಜೊತೆ ಕಾರ್ಯದರ್ಶಿ ಪ್ರತಿಮಾ ಜಿ. ದೇವಾಡಿಗ ಸಹಕಾರವನ್ನಿತ್ತ ಶ್ರೀಮತಿ ಲತಾ ಮೊಯಿಲಿ, ಶ್ರೀಮತಿ ಪ್ರತಿಮಾ ಮೊಯಿಲಿ, ಶ್ರೀಮತಿ ಗೀತಾ ದೇವಾಡಿಗ ಅಸಲ್ಫೆ ಮತ್ತು ಶ್ರೀಮತಿ ಭಾರತಿ ನಿಟ್ಟೇಕರ್ ಹಾಗೂ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. 
 


Share