ದೇವಾಡಿಗ ಸಂಘ ಮುಂಬಯಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇತರ ಅತ್ಯುತ್ತಮ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಮುಂಬೈ: 71 ನೇ ಗಣರಾಜ್ಯೋತ್ಸವವನ್ನು ಜನವರಿ 26, 2020 ರಂದು ನವೀ ಮುಂಬಯಿಯ ದೇವಾಡಿಗ ಭವನ ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರದಲ್ಲಿ ಮಹಿಳಾ ಮತ್ತು ಯುವ ವಿಭಾಗದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಅಂದು ಸಂಘದಿಂದ ಮುಂಬಯಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಹಾಗೂ ಇತರ   ಅತ್ಯುತ್ತಮ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕರ್ನಾಟಕ ಸರ್ಕಾರದಿಂದ 2019 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀ ಬಿ.ಜಿ. ಮೋಹನ್‌ದಾಸ್ ಮಣಿಪಾಲ್ ಅವರನ್ನು ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗರು ಪ್ರಶಸ್ತಿ ಪ್ರಧಾನಿಸಿ ಸನ್ಮಾನಿಸಿದರು. ಕರ್ನಾಟಕದ ಅತ್ಯುನ್ನತ ರಾಜ್ಯ ಪ್ರಶಸ್ತಿ ಪಡೆದ ಬೀಜಿಯವರು ನಮ್ಮ ಸಂಘದ ಪೋಷಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಉತ್ತೇಜಿಸಿ ಕರ್ನಾಟಕದ ಸಾಂಸ್ಕೃತಿಕ ವೈಭವ, ಕಲೆ ಮತ್ತು ಇತರ ಚಟುಪಟಿಗಳನ್ನು ದುಬೈಯಲ್ಲಿ ಸಾದರ ಪಡಿಸಿ ನೀಡಿದ ಕೊಡುಗೆ ಶ್ಲಾಘನೀಯ. ಸಾಮಾಜಿಕ ಮಾಧ್ಯಮದಲ್ಲಿಯೂ ಜನಪ್ರಿಯವಾಗಿರುವ ಅವರು ದೇವಾಡಿಗ ಡಾಟ್ ಕಾಮ್ (Devadiga.com) ಸೇರಿದಂತೆ ಹಲವಾರು ವೆಬ್‌ಸೈಟ್‌ಗಳನ್ನು ಸಹ ಅವರು ರಚಿಸಿ ಅವುಗಳ ಸಾರಥ್ಯವನ್ನು ವಹಿಸಿದ್ದಾರೆ.

ಇಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್  ಇಂಡಿಯಾದಿಂದ  ಪ್ರಾಯೋಜಿಸಲ್ಪಟ್ಟ ರಾಷ್ಟ್ರೀಯ ಮಟ್ಟದ 2019 ರ ಸಾಲಿನ ಅತ್ಯುನ್ನತ ಪ್ರಶಸ್ತಿ - Excellence in Corporate Governance ಪಡೆದ  CS. ವಿಜಯ್ ದೇವಾಡಿಗರನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ್ ದೇವಾಡಿಗರು ಪ್ರಶಸ್ತಿ ಪ್ರಧಾನಿಸಿ ಸನ್ಮಾನಿಸಿದರು.

ಉಡುಪಿ ಮೂಲದ ಸಮಾಜ ಸೇವಕ  ಶ್ರೀ ನಿತ್ಯಾನಂದ ಒಳಕಾಡು ಅವರ ಮಾನವೀಯತೆಗೆ ಮಾಡಿದ ಮಹತ್ತರ ಸೇವೆಗಳನ್ನು ಗುರುತಿಸಿ, ಉಡುಪಿ ಜಿಲ್ಲೆಯಲ್ಲಿ ವೈದ್ಯಕೀಯ ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯವಿರುವ ಮತ್ತು ಸವಲತ್ತು ಒದಗಸಿ ಜನರಿಗೆ ನಿರಂತರ ಬೆಂಬಲವನ್ನು ನೀಡಿದ್ದಕ್ಕಾಗಿ, ಅವರನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗರು ಪ್ರಶಸ್ತಿ ಪ್ರಧಾನಿಸಿ ಸನ್ಮಾನಿಸಿದರು.

ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ ಫಿಲ್ ಪದವಿಗಳಿಸಿದ ಶ್ರೀಮತಿ ಸುರೇಖಾ ಎಚ್ ದೇವಾಡಿಗ ಮತ್ತು ಶ್ರೀಮತಿ ಸುಶೀಲಾ ಎಸ್ ದೇವಾಡಿಗರನ್ನು ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿ ಮತ್ತು ಜಯಂತಿ ಆರ್ ಮೊಯಿಲಿಯವರು ಪ್ರಶಸ್ತಿ ಪ್ರಧಾನಿಸಿ ಸನ್ಮಾನಿಸಿದರು.

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದ ಸಿ.ಎ. ಪ್ರೊಫೆಷನಲ್ ಕೋರ್ಸ್ ಉತ್ತೀರ್ಣರಾದ ಸಂಜಯ್ ಎಸ್ ದೇವಾಡಿಗ, ಕರಣ ದೇವಾಡಿಗ ಮತ್ತು ರಕ್ಷಿತ ವಿ ದೇವಾಡಿಗ ಅವರನ್ನು ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ ಮತ್ತು ಶ್ರೀ ಜಯ ಎಲ್ ದೇವಾಡಿಗರು ಪ್ರಶಸ್ತಿ ಪ್ರಧಾನಿಸಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2019 ರ ಪುರಸ್ಕೃತ   ಕುಮಾರಿ ರಕ್ಷಿತಾ  ಎಲ್  ಶೇರಿಗಾರ್, ಚಿರಂಜೀವಿ ಶ್ರೀದೀತ್ ಎಸ್ ದೇವಾಡಿಗ ಹಾಗೂ ಕರಾಟೆಯಲ್ಲಿ ಚಿನ್ನದ ಪದಕ ಮತ್ತು ಟೇಕ್ವಾಂಡೋದಲ್ಲಿ ಕಂಚಿನ ಪದಕ ವಿಜೇತ ಚಿರಂಜೀವಿ ಪನ್ಸುಲ್ ದೇವಾಡಿಗ ಅವರನ್ನು  ಪ್ರಶಸ್ತಿ ಪ್ರಧಾನಿಸಿ ಸನ್ಮಾನಿಸಲಾಯಿತು.

ಮಾಜಿ ಅಧ್ಯಕ್ಷರುಗಳಾದ ಶ್ರೀಎಚ್. ಮೋಹನ್ದಾಸ್, ಶ್ರೀ ವಾಸು ಎಸ್. ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಶ್ರೀ ಸುಂದರ್ ಮೊಯಿಲಿ, ಶ್ರೀ ದಯಾನಂದ ದೇವಾಡಿಗ, ಶ್ರೀ ಗಣೇಶ್ ಶೇರಿಗಾರ್, ಶ್ರೀಮತಿ ರೇಖಾ ದೇವಾಡಿಗ ಜೋಗೇಶ್ವರಿ, ಹೇಮನಾಥ್ ದೇವಾಡಿಗ ನಗರ ವಲಯ ಪ್ರಾದೇಶಿಕ ಸಮನ್ವಯ ಸಮಿತಿ, ಹೇಮಾನಂದ್ ದೇವಾಡಿಗ, ಕಾರ್ಯಕಾರಿ ಸಮಿತಿಯ ಸದ್ಯಸರಾದ, ಶ್ರೀ ಜಯ ಎಲ್ ದೇವಾಡಿಗ, ಕೃಷ್ಣ ದೇವಾಡಿಗರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೀರೂಪಣೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ ಮಾಡಿದರೆ ಜೊತೆ ಕಾರ್ಯದರ್ಶಿ ಪ್ರತಿಮಾ ಜಿ. ದೇವಾಡಿಗ ಸಹಕಾರವನ್ನಿತ್ತ ಶ್ರೀಮತಿ ಲತಾ ಮೊಯಿಲಿ, ಶ್ರೀಮತಿ ಪ್ರತಿಮಾ ಮೊಯಿಲಿ, ಶ್ರೀಮತಿ ಗೀತಾ ದೇವಾಡಿಗ ಅಸಲ್ಫೆ ಮತ್ತು ಶ್ರೀಮತಿ ಭಾರತಿ ನಿಟ್ಟೇಕರ್ ಹಾಗೂ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. 


Share