ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ ಕೊಂಕಣ ಜಿಲ್ಲೆ, ಮತ್ತು ಮಾಲ್ವನ್ ಗೆ ಪ್ರವಾಸ (Updated)

ಮುಂಬೈ: ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರು ಮಹಿಳಾ ಕಾರ್ಯಾದ್ಯಕ್ಷೆಯಾದ ಶ್ರೀಮತಿ ರಂಜಿನಿ ಮೊಯಿಲಿಯವರ ನೇತ್ರತ್ವದಲ್ಲಿ ಫೆಬ್ರವರಿ 20 ರಿಂದ 24 ರ ವರೆಗೆ  ಮಹಾರಾಷ್ಟ್ರದ ಕೊಂಕಣ ಜಿಲ್ಲೆ ದೇವ್  ಬಾಗ್, ತಾರ್ ಕರ್ಲಿ ಮತ್ತು ಮಾಲ್ವನ್ ಗೆ ಪ್ರವಾಸವನ್ನು ಏರ್ಪಡಿಸಿದ್ದರು.

ಸುಪ್ರಸಿದ್ದ ಸ್ಥಳಗಳಾದ ಬರಾಡಿ ಜಗದಂಬಾ ದೇವಸ್ಥಾನ ಆಂಗನ್ವಾಡಿ, ಜೈ ಗಣೇಶ್ ಮಂದಿರ, ತಾರ್ಕಾರ್ಲಿ ಬೀಚ್, ಸುನಾಮಿ ದ್ವೀಪವನ್ನು ಫೆಬ್ರವರಿ 21 ರಂದು ಬೇಟಿ ನೀಡಿದರೆ, 22ನೇ ತಾರೀಕಿನಂದು ಚಿವ್ಲ ಸಮುದ್ರ ಕಿನಾರೆಯ  ವಾಟರ್ ಆಕ್ಟಿವಿಟೀಸ್ ಗಳಾದ ಸ್ಕ್ಯೂಬ ಡೈವಿಂಗ್, ಪ್ಯಾರ ಗ್ಲೈಡಿಂಗ್, ಮೋಟರ್ ಬೈಕ್ ರೈಡಿಂಗ್,  ಬನಾನ ರೈಡಿಂಗ್, ಸೋಫಾ ರೈಡಿಂಗ್ ಮುಂತಾದ ಅನೇಕ  ಚಟುವಟಿಕೆಗಳಲ್ಲಿ ಎಲ್ಲಾ ಮಹಿಳಾ ಸದ್ಯಸರು ತುಂಬಾ ಉತ್ಸಾಹದಿಂದ ಪಾಲ್ಗೊಂಡರು. ಸೂರ್ಯಾಸ್ತವನ್ನು ಮನಮೋಹಕ ರಾಕ್ ಗಾರ್ಡನ್ನ ಸಮುದ್ರ ತೀರದಲ್ಲಿ ನೋಡಿ ಪುನೀತರಾದರು. 25ರ ಬೆಳಿಗ್ಗೆ ಡಾಲ್ಫಿನ್ ಪಾಯಂಟ್,  ಕೌಡಾ ರಾಕ್ ಐಲ್ಯಾಂಡ್ , ಶಿಂಪ್ಲಿ ಐಲ್ಯಾಂಡ್, ತೊಂಡವ್ಲಿ ಬೀಚ್,  ನಂತರ ಛತ್ರಪತಿ ಶಿವಾಜಿ ಮಹಾರಾಜರು ಕಟ್ಟಿಸಿದ ಸಿಂದುದುರ್ಗ ಕೋಟೆಗೆ ಬೇಟಿ ನೀಡಿದರು. ಕೋಟೆಯಲ್ಲಿರುವ ಶಿವಾಜಿ ಮಂದಿರ, ಜೆರಿಮಾರಿ ದೇವಿ ಮಂದಿರ, ಅಲ್ಲಿ ರಕ್ಷಿಸಿ ಇರಿಸಲಾದ  ಶಿವಾಜಿಯ ತುಳ್ಜ ಖಡ್ಗ  ಹೀಗೆ ವಿವಿದ ಸ್ಥಳಕ್ಕೆ ಪ್ರವಾಸ ಏರ್ಪಡಿಸಲಾಗಿತ್ತು. ಸಮುದ್ರದಲ್ಲಿ  ಜೆಟ್ಟಿ ಪ್ರವಾಸ ತುಂಬಾ ಆಹ್ಲಾದಕರವಾಗಿತ್ತು. ಮಾಲ್ವನ್ನಲ್ಲಿ ದೊರೆಯುವ ವಿವಿಧ ಮಸಾಲಾ ಪದಾರ್ಥಗಳು, ಗೋಡಂಬಿ  ಒಣಮೀನು, ಕೋಕಂ ಉತ್ಪನ್ನಗಳ ಖರೀದಿ, ಹೀಗೆ 3  ದಿನಗಳೂ ಮಹಿಳೆಯರು ಆನಂದದಿಂದ ಪ್ರವಾಸದಲ್ಲಿ ಭಾಗವಹಿಸಿದರು.

ಶ್ರೀಮತಿ ಪ್ರತಿಭಾ ದೇವಾಡಿಗ, ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀಮತಿ ಪೂರ್ಣಿಮಾ ದೇವಾಡಿಗ, ಶ್ರೀಮತಿ ಜಯಂತಿ ಪಿ ದೇವಾಡಿಗ, ಶ್ರೀಮತಿ ಶಶಿಕಲಾ ಮೊಯಿಲಿ ಶ್ರೀಮತಿ ಲಕ್ಷ್ಮಿ ದೇವಾಡಿಗ, ಶ್ರೀಮತಿ ಕಮಲ ದೇವಾಡಿಗ, ಶ್ರೀಮತಿ ಪ್ರಮೀಳಾ ಶೇರಿಗಾರ್, ಶ್ರೀಮತಿ ದನವಂತಿ ಪುತ್ತೂರ್,  ತನ್ವಿ ದೇವಾಡಿಗ, ಅರುಣ ಪಿ. ನಡೆದಿದ್ದ ವಿವಿಧ ಸ್ಪರ್ಧೆ ಯಲ್ಲಿ ಭಾಗವಹಿಸಿ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಮಹಿಳಾ ವಿಭಾಗದ ಸಲಹೆಗಾರ್ತಿ - ಶ್ರೀಮತಿ ಜಯಂತಿ ಮೊಯಿಲಿ, ಮಹಿಳಾ ಕಾರ್ಯಾದ್ಯಕ್ಷೆ  - ಶ್ರೀಮತಿ ರಂಜಿನಿ ಮೊಯಿಲಿ, ಉಪಾಕಾರ್ಯಾದ್ಯಕ್ಷೆಯಾರಾದ - ಶ್ರೀಮತಿ ಜಯಂತಿ ಯಮ್ ದೇವಾಡಿಗ ಮತ್ತು ಶ್ರೀಮತಿ ಪೂರ್ಣಿಮಾ ದೇವಾಡಿಗ,  ಕಾರ್ಯದರ್ಶಿ - ಶ್ರೀಮತಿ ಪ್ರಮೀಳಾ ಶೇರಿಗಾರ್ , ಜೊತೆ  ಕಾರ್ಯದರ್ಶಿ- ಶ್ರೀಮತಿ ಪ್ರತಿಭಾ ದೇವಾಡಿಗ,  ಸಂಘದ ಕಾರ್ಯಕಾರಿ ಸಮಿತಿಯ ಜೊತೆ ಕಾರ್ಯದರ್ಶಿ - ಶ್ರೀಮತಿ ಮಾಲತಿ  ಜೆ ಮೊಯಿಲಿ, ಜೊತೆ ಖಛಾಂಜಿ - ಶ್ರೀಮತಿ ಸುರೇಖಾ ದೇವಾಡಿಗ, ಶ್ರೀಮತಿ ವನಿತಾ ಆರ್ ದೇವಾಡಿಗ ಮಾಲ್ವನ್ ಪ್ರವಾಸ ಯಶಸ್ವಿಯಾಗಲು ಸಹಕರಿಸಿದರು. ಶ್ರೀಮತಿ ವಸಂತಿ ಮೊಯಿಲಿ, ಶ್ರೀಮತಿ ಲತಾ ಶೇರಿಗಾರ್, ಶ್ರೀಮತಿ ಗೀತ ದೇವಾಡಿಗ, ಶ್ರೀಮತಿ ಲತಾ ಮೊಯಿಲಿ, ಶ್ರೀಮತಿ ನಳಿನಿ ದೇವಾಡಿಗ, ಶ್ರೀಮತಿ ರುಕ್ಮಿಣಿ ದೇವಾಡಿಗ, ಶ್ರೀಮತಿ ಶಾಂತಾ ದೇವಾಡಿಗ, ಶ್ರೀಮತಿ ಲಕ್ಷ್ಮಿ ದೇವಾಡಿಗ, ಸುಮಾರು 33 ಮಹಿಳಾ ಸದ್ಯಸರು ಪ್ರವಾಸದಲ್ಲಿ ಪಾಲ್ಗೊಂಡರು.


Share