ಷಷ್ಠಿ ರಥ ಸಮರ್ಪಣೆಯ ಪೂರ್ವಭಾವಿಯಾಗಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಶೋಭಾಯಾತ್ರೆಯೊಂದಿಗೆ ಹೊರೆಕಾಣಿಕೆ ಸಮರ್ಪಣೆ

ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಸಮಸ್ತ ದೇವಾಡಿಗ ಸಮಾಜದಿಂದ ಷಷ್ಠಿ ರಥ ಸಮರ್ಪಣೆಯ ಪೂರ್ವಭಾವಿಯಾಗಿ ಮಾ.8 ರಂದು ಭಾನುವಾರ ಹೊರೆಕಾಣಿಕೆ ಮೆರವಣಿಗೆಯು ಬಹಳ ವಿಜೃಂಭಣೆಯಿಂದ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ದೇವಳದ ಪವಿತ್ರಪಾಣಿ ಮಾಧವ ಭಟ್ ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು.

ಪೊಳಲಿ ವಿವೇಕಾನಂದ ರಸ್ತೆಯ ಪೊಳಲಿ ಮುಖದ್ವಾರದಿಂದ ಹತ್ತಾರು ವಾಹನಗಳೊಂದಿಗೆ ಚೆಂಡೆ, ಕೊಂಬು, ವಾಲಗ ಗೊಂಬೆಕುಣಿತದೊಂದಿಗೆ ಮೆರವಣಿಗೆಯಲ್ಲಿ ರಥಬೀದಿಯಲ್ಲಿ ಸಾಗಿ ದೇವಸ್ಥಾನದ ಮುಖದ್ವಾರಕ್ಕೆ ಮೆರವಣಿಗೆಯು ಸಾಗಿ ಬಂದಾಗ ದೇವಳದ ಆಡಳಿತಮಂಡಳಿ ಸ್ವಾಗತಿಸಿತು.

ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯತಂತ್ರಿ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ರಾಮ್ ಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿ ಭಟ್, ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ, ಮಂಜಯ್ಯ ಶೆಟ್ಟಿ,ಮುಕ್ತೇಸರರಾದ ಯು. ತಾರನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ರಾಮ್‍ದಾಸ್ ಬಂಟ್ವಾಳ, ಗೌರವಾಧ್ಯಕ್ಷ ಗೋಪಾಲ ಎಂ. ಮೊೈಲಿ, ಪ್ರ.ಕಾರ್ಯದರ್ಶಿ ಪ್ರವೀಣ್ ಬಿ.ತುಂಬೆ, ಕೋಶಾಧಿಕಾರಿ ನಾಗೇಶ್ ದೇವಾಡಿಗ ಪೊಳಲಿ ಮತ್ತು ವಿವಿಧ ಸಮಿತಿಯ ಅಧ್ಯಕ್ಷರು ,ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಸಮಾಜದ ಬಾಂಧವರು, ಸಾವಿರ ಸೀಮೇಯ ಭಕ್ತಾಧಿಗಳು ಉಪಸ್ಥಿತರಿದ್ದರು.


Share